ಕೊಂದು ಬದುಕಲೆ ಬೇಕು

ದಿನದ ಬದುಕಲಿ ಸತತ,
ಎರಗಿ ಮೇಲೇರಿ ಬರುವವರ
ಬಿಡದೆ ಕೊಲ್ಲುತ ನಿರತ.
 
ಕೊಚ್ಚುತಾ ಇರಿಯುತಾ
ಎಡಬಿಡದೆ ಸಿಗಿಯುತಾ,
ಇದ್ದವರ ಮುಗಿಸುತಾ,
ಎದ್ದವರ ಹೊಸುಕುತಾ.
 
ಕೊಂದು ಬದುಕಲೆ ಬೇಕು 
ದಿನದ ಬದುಕಲಿ ಸತತ.
 
ಏಳುವಾ ಆಸೆಯ
ಬೀಳಿಸುವ ಮೋಹವ,
ಕಬಳಿಸುವ ಕ್ರೋಧವ
ಲಾಲಸೆಯ ಲೋಭವ,
ಮತ್ತನೇರಿಪ ಮಧವ
ಭುಸುಗುಡುವ ಮತ್ಸರವ,
 
ಕೊಂದು ಬದುಕಲೆ ಬೇಕು
ಬದುಕಲಿ ಸತತ.
ಅಳಿಸಿ ಉಳಿಸಿದ ಬದುಕು
ಹಸನದು ನಿಶ್ಚಿತ.