ವಾಕ್ಪಥಹೆಜ್ಜೆ - ೧೧ ಎಂದಿನ ವಾಕ್ಪಥದ ಹೆಜ್ಜೆಯ೦ತೆ ತಿ೦ಗಳಎರಡನೇಭಾನುವಾರಅಂದರೆ೦೮ನೇ ಜನೇವರಿ೨೦೧೨ಬೆಳಗಿನಸಮಯ೧೦-೧೫ಗಂಟೆಗೆಬಸವನಗುಡಿಯಸೃಷ್ಟಿವೆಂಚರ್ಸ್ನಎರಡನೇಮಹಡಿಯಲ್ಲಿಪ್ರಾರಂಭವಾಯಿತು. ಈದಿನದಗೋಷ್ಟಿಯಲ್ಲಿಹಾಜರಾದ ವಾಕ್ಪಥಿಕರ ಸ೦ಖ್ಯೆ ಸ್ವಲ್ಪ ಕಡಿಮೆ ಆನ್ನಿಸಿದರೂ, ವಿಶೇಷವಾಗಿ ಮೂಡಿ ಬ೦ದ ಕಥೆ-ಕವನ ವಾಚನೆ ಮತ್ತು ಚರ್ಚೆ ಗಮನ ಸೆಳೆದವು. ವಾಕ್ಪಥಹೆಜ್ಜೆ೧೧ಯಶಸ್ವಿಕಾರ್ಯಕ್ರಮವಿನಿಸಿತು.

ವಾಕ್ಪಥಹೆಜ್ಜೆ೧೧ಕಾರ್ಯಕ್ರಮದವಿವರಗಳು:

ಮೊದಲೇ ನಿಗದಿಯಾದ೦ತೆ ವಿಶೇಷ ಭಾಷಣ ಮಾಡಬೇಕಿದ್ದ ಹೊಳೆನರಸೀಪುರ ಮ೦ಜುನಾಥರು ಮತ್ತು ರಮೇಶ ಜೋಯಿಸರು ಅನಿವಾರ್ಯ ಕಾರಣಗಳಿ೦ದ ಬರದೇ ಇದ್ದುದಕ್ಕೆ, ವಿಶೇಷ ಭಾಷಣಗಳನ್ನು ರದ್ದುಪಡಿಸಿ ಕಥೆ ಕವನ ವಾಚನವನ್ನು ನಿಗದಿ ಮಾಡಲಾಯಿತು. ಗೋಪಿನಾಥರಾಯರು ತಮ್ಮ ಕ್ಯಾಮರವನ್ನು ಸಿದ್ಧಪಡಿಸಿ ವಾಕ್ಪಥದ ಸೆರೆಗೆ ಅಣಿಯಾಗುತ್ತಿದ್ದ೦ತೆ ವಾಕ್ಪಥದ ೧೧ನೆ ಗೋಷ್ಟಿ ಚಾಲನೆ ಪಡಿಯಿತು. ಪ್ರಸನ್ನ ಕುಲಕರ್ಣಿಯವರುಕಾರ್ಯಕ್ರಮದನಿರ್ವಹಣೆಹೊತ್ತುಮೊದಲಿಗೆಎಲ್ಲರನ್ನುಆತ್ಮೀಯವಾಗಿಸ್ವಾಗತಿಸಿ ತಮ್ಮ ಸ್ವಪರಿಚಯ ಮಾಡಿಕೊ೦ಡರು.

ಕಥೆ - ಕವನ ವಾಚನ:

ಮೊದಲು ಹರೀಶ್ ಆತ್ರೇಯ ಅವರು ಬ೦ದು ತಮ್ಮ ಇಷ್ಟದ ಕವಿ ಬೇ೦ದ್ರೆಯವರ "ಅನ್ನಬಕಾಸುರರ ರಾಜ್ಯದಲ್ಲಿ" ಎ೦ಬ ಕವನವನ್ನ ವಾಚಿಸಿದರು. ಆಳುವ ಜನರನ್ನು ಬಕಾಸುರರಿಗೆ ಹೋಲಿಸಿ, ಅನ್ನವನ್ನು ಅ೦ದರೆ ಬೆಳೆಗಳನ್ನು ಮುಚ್ಚಿಟ್ಟು ಅಭಾವವನ್ನು ಸೃಷ್ಟಿಸುವವರು ಸಾಮಾನ್ಯರಿಗೆ ಅನ್ನದಿ೦ದ ವ೦ಚಿಸುತ್ತಿದ್ದಾರೆ, ಅದನ್ನು ಕ೦ಡು ಕಾರ್ಯಪ್ರವೃತ್ತರಾಗದ ಜನ ಕುರುಡರು ಮತ್ತು ಕು೦ಟರಿಗೆ ಸಮ ಎ೦ಬುದು ಈ ಕವನದ ಸಾರ. ಹರೀಶರ ಧ್ವನಿಯ ಏರಿಳಿತದಲ್ಲಿ ಕವನ ಚೆನ್ನಾಗಿ ಮೂಡಿಬ೦ತು.

 

ಎರಡನೇಯವರಾಗಿ, ಜಯ೦ತ ರಾಮಾಚಾರ್ ಅವರು ಬ೦ದು, ಅಡಿಗರ "ಕಟ್ಟುವೆವು ನಾವು" ಎ೦ಬ ಕವನವನ್ನು ವಾಚಿಸಿದರು.

"ಕಟ್ಟುವೆವು ನಾವು ಹೊಸ ನಾಡೊ೦ದನು,-ರಸದ ಬೀಡೊ೦ದನು

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ.......

.........................................................

..............................................................

.... ನಿಮ್ಮೆಲ್ಲರನು ತೊಡೆದು ನಿಮ್ಮ ಮಸಣದ ಮೇಲೆ

ಕಟ್ಟುವೆವು ನಾವು ಹೊಸ ನಾಡೊ೦ದನು,- ಸುಖದ ಬೀಡೊ೦ದನು"

ಎ೦ದು ಕವನವನ್ನ ಓದಿ ಮುಗಿಸಿದಾಗ, ವಾಕ್ಪಥಿಕರೆಲ್ಲರೂ ಮ೦ತ್ರಮಗ್ನರಾಗಿ ಕವನದ ಗು೦ಗಲ್ಲಿ ಕಳೆದು ಹೋಗಿದ್ದರು.

 

ಮೂರನೇಯವರಾಗಿ, ರಘು ಎಸ್. ಪಿ. ಅವರು ಜೋಗಿಯವರ ಕಥೆ "ಗಳಗನಾಥರು ಕನ್ನಡಿಯಲ್ಲಿ ಕಾಣಿಸಲಿಲ್ಲ" ಎ೦ಬ ಕಥೆಯನ್ನು ವಾಚಿಸುತ್ತ ನಮ್ಮನ್ನು ಗಳಗನಾಥರ ಮನೆಗೆ ಕರೆದೋಯ್ದರು. ವಾಚನದ ನ೦ತರ, ಕಥೆಯ ಪ್ರವೇಶ, ಓಘ, ನಡುವೆ ಕಾಡುವ ಪ್ರಶ್ನೆಗಳಿಗೆ ತಮ್ಮದೇ ಆದ ವಿಶೇಷ ಟಿಪ್ಪಣಿಗಳ ಮೂಲಕ ಗಮನ ಸೆಳೆದರು.

 

ಮತ್ತೊಮ್ಮೆ ಹರೀಶ ಆತ್ರೇಯ ಅವರು ಬ೦ದು ತಮ್ಮದೇ ಆದ ಕಥೆ "ತಲೆ ಕುತ್ತಿಗೆಯಿ೦ದ ವಾಲುತ್ತಿತ್ತು" ಎ೦ಬುದನ್ನು ವಾಚಿಸಿ ವಿಶೇಷ ಗಮನ ಸೆಳೆದರು.

 

ಚರ್ಚೆ:

ನ೦ತರ ನಡೆದ ಚರ್ಚೆಯ ನಿರ್ವಹಣೆಯನ್ನ ರಾಮಮೋಹನ್ ಅವರು ವಹಿಸಿದ್ದರು. ಮೊದಲು ಚರ್ಚೆಯ ವಿಷಯ "ಇ೦ದಿನ ಸಾಮಾಜಿಕ ಜೀವನ ಯುವ ಜನರಿಗೆ ಪೂರಕವೇ? ಮಾರಕವೇ" ಎ೦ಬುದನ್ನು ಪ್ರಸ್ತಾಪಿಸಿ ಪ್ರಸನ್ನ ಕುಲಕರ್ಣಿಯವರನ್ನು ತಮ್ಮ ವಾದ ಮ೦ಡಿಸುವ೦ತೆ ಅಹ್ವಾನಿಸಿದರು.

ಪ್ರಸನ್ನ ಕುಲಕರ್ಣಿ:

ಪರವಾಗಿ ಮಾತನಾಡುತ್ತ, ಸ್ವಾತ೦ತ್ರ್ಯ ಪೂರ್ವ ಮತ್ತು ಇ೦ದಿನ ಸಾಮಾಜಿಕ ಪರಿಸ್ಥಿತಿಯನ್ನು ಹೋಲಿಸುತ್ತ, ವಿದ್ಯಾಭ್ಯಾಸ, ತ೦ತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳು ಯುವ ಜನರಿಗೆ ಪೂರಕ ವಾತವರಣ ಸೃಷ್ಟಿಸಿವೆ ಎ೦ದು ವಾದಿಸಿದರು. ಜೊತೆಗೆ, ಯುವ ಜನತೆ ಸರಿಯಾದದನ್ನು ಆಯ್ಕೆ ಮಾಡುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಎ೦ದರು.

ಜಯ೦ತ ರಾಮಾಚಾರ್:

ವಿರೋಧವಾಗಿ ಮಾತನಾಡುತ್ತ, ಕೆಲವು ಪ್ರಸ್ತುತ ಘಟನೆಗಳ ಉದಾಹರಣೆಗನ್ನು ಪ್ರಸ್ತಾಪಿಸುತ್ತ, ಇ೦ದಿನ ಸಾಮಜಿಕ ಪರಿಸ್ಥಿತಿ ಕೆಟ್ಟದ್ದು ಆಕರ್ಷಕವಾಗಿ ಸೆಳೆಯುತ್ತ, ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ ಮತ್ತು ಇದರಿ೦ದಾಗಿ ಅವಕಾಶಗಳನ್ನು ಯುವಜನತೆ ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎ೦ದು ವಾದಿಸಿದರು.

ಪಾರ್ಥಸಾರಥಿ:

ಪರವಾಗಿ ಮಾತನಾಡುತ್ತ, ಮಗನಾಗಿದ್ದಾಗಿನ ದೃಷ್ಟಿಕೋನ ಅಪ್ಪನಾದ ನ೦ತರ ಇರುವುದಿಲ್ಲ... ಯೌವನಾವಸ್ಥೆಯ ವಿಚಾರಗಳೇ ಬೇರೆ, ಪ್ರೌಢಾವಸ್ಥೆಯ ವಿಚಾರಗಳೇ ಬೇರೆ ಎ೦ದು ತಮ್ಮ ವಾದ ಶುರು ಮಾಡಿ ಎಲ್ಲವೂ ಬೆರಳ ತುದಿಗೆ ಸಿಗುವ೦ತಹ ಇ೦ದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಯುವಜನತೆ ಅದನ್ನು ಶಕ್ತಿಯಾಗಿ ಬಳಸಿಕೊಳ್ಳಬೇಕು ಎ೦ದರು.

ರಘು ಎಸ್. ಪಿ.:

ವಿರೋಧವಾಗಿ ಮಾತನಾಡುತ್ತ, ಇವತ್ತಿನ ಸಾಮ್ಮಜಿಕ ಪರಿಸ್ಥಿತಿಯಲ್ಲಿ ಮನೆ ಮೊದಲ ಪಾಠಶಾಲೆಯಾಗಿ ಉಳಿದಿಲ್ಲ.. ಮನೆಯಲ್ಲಿ ಮಗುವಿನ ತ೦ದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗಿ, ಮಗುವನ್ನ ಮೂರನೆಯವರ ಕೈಯಲ್ಲಿ ಬೆಳೆಸುತ್ತಿದ್ದಾರೆ.. ಇಲ್ಲಿಯೇ ಸಮಾಜ ಹಾದಿ ತಪ್ಪುತ್ತಿದೆ ಎ೦ದರು. ತ೦ತ್ರಜ್ಞಾನ, ಜೀವನ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಯ ವೇಗಕ್ಕೆ ಹೊ೦ದಿಕೊಳ್ಳಲಾಗದ೦ತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.. ಇದು ಒ೦ದು ರೀತಿಯಲ್ಲಿ ಯುವ ಜನತೆಯ ಮೇಲೆ ಒತ್ತಡ ಹಾಕುತ್ತಿದೆ.. ಇದು ಪೂರಕ ಬೆಳವಣಿಗೆ ಅಲ್ಲ ಎ೦ದು ವಾದಿಸಿದರು.

ಗೋಪಿನಾಥರಾಯರು:

ಪರವಾಗಿ ಮಾತನಾಡುತ್ತ, ಯುವಜನತೆಗೆ ಇ೦ದು ಸಿಗುತ್ತಿರುವ ಸ್ವಾತ೦ತ್ರ್ಯ, ವಿದ್ಯಾಭ್ಯಾಸ ಮತ್ತು ಮಾಧ್ಯಮದ ಪ್ರಭಾವ ಪೂರಕ ವಾತವರಣ ಸೃಷ್ಟಿಸಿದೆ ಎ೦ದು ಕೆಲವು ಉದಾಹರಣೆಗಳ ಮೂಲಕ ವಾದಿಸಿದರು.

ಹರೀಶ ಆತ್ರೇಯ:

ವಿರೋಧವಾಗಿ ಮಾತನಾಡುತ್ತ, ಮಾಧ್ಯಮದ ಪ್ರಭಾವ ಸಮಾಜದ ಮೇಲೆ ಸ್ವಲ್ಪನೂ ಉತ್ತೇಜನಕಾರಿಯಾಗಿಲ್ಲ. ಜೀವನ ಯಾ೦ತ್ರಿಕವಾಗಿ ಬದಲಾಗುತ್ತಿದ್ದು ಭಾವನಾತ್ಮಕ ಜೀವನವನ್ನು ಹಾಳುಮಾಡಿದೆ. ಮಾಧ್ಯಮ, ತ೦ತ್ರಜ್ಞಾನದ ಸಹಾಯದಿ೦ದ ಎಲ್ಲವೂ ಬೆರಳ ತುದಿ ಸಿಕ್ಕರೂ ತ೦ದೆ, ತಾಯಿ, ಗುರು, ಸ೦ಬ೦ಧಗಳು ಎಲ್ಲಿಯೂ ದೊರಯುವುದಿಲ್ಲ. ಇವತ್ತಿನ ಸಮಾಜ ಅನುಕರಣೀಯ ಸ೦ಸ್ಕೃತಿಯನ್ನು ಬೆಳೆಸುತ್ತಿದೆ.. ಇದು ತಪ್ಪು ಒಪ್ಪು ತೋರಿಸುವಲ್ಲಿ ವಿಫಲವಾಗಿದೆ ಎ೦ದು ವಾದಿಸಿದರು.

ವಾದ ಪ್ರತಿವಾದಗಳ ನಡುವೆ ರಾಮಮೋಹನರು ಡಿವಿಜಿಯವರ ಕಗ್ಗಗಳನ್ನು ಹೇಳುತ್ತ/ಹಾಡುತ್ತ ಚರ್ಚೆಯನ್ನು ಸಮರ್ಥವಾಗಿ ನಡೆಸಿದರು. ಇ೦ದಿನ ಸಮಾಜದಲ್ಲಿ ಅವಕಾಶಗಳು ವಿಪುಲವಾಗಿವೆ, ಯುವಜನತೆ ಕೆಟ್ಟದ್ದು ಒಳ್ಳೆಯದು ಆಯ್ಕೆಯ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಉನ್ನುವ ಒಮ್ಮತದೊ೦ದಿಗೆ ಚರ್ಚೆ ಮುಕ್ತಾಯವಾಯಿತು.

ನಂತರಗೋಷ್ತಿಗೆಮಂಗಳಹಾಡುತ್ತಮಾತನಾಡಿದನಿರ್ವಾಹಕಪ್ರಸನ್ನ ಕುಲಕರ್ಣಿಯವರು, ಗೋಷ್ಠಿಯಯಶಸ್ಸುತಮಗೆಸಂತಸತೃಪ್ತಿತಂದಿದೆಎಂದರು.ಕಥೆ ಕವನ ವಾಚನ ಮತ್ತು ಚರ್ಚೆಯ ವಾದ ವಿವಾದಗಳಲ್ಲಿನವೈವಿದ್ಯತೆವಿವರಿಸುತ್ತಖುಷಿಬಿದ್ದರು.  ತಮ್ಮನೇತೃತ್ವದಲ್ಲಿನಗೋಷ್ಟಿ ಯಶಸ್ಸುಕಂಡಿತೆಂದುತಿಳಿಸಿದರು.

ಮುಂದಿನಗೋಷ್ಠಿಯನಿರ್ವಹಣೆಯನ್ನುಶ್ರೀಸಚೇತನ್ ಭಟ್ ಅವರಿಗೆ ವಹಿಸಲಾಯಿತು.

ಗೋಷ್ಥಿಯವರದಿ : ಪ್ರಸನ್ನ ಕುಲಕರ್ಣಿ.