ಒಬ್ಬ ನಾಸ್ತಿಕನಾದ ತತ್ವಶಾಸ್ತ್ರದ ಫ್ರೊಫೆಸರ್  ಅವರು ತಮ್ಮ ತರಗತಿಯಲ್ಲಿ ಸರ್ವಶಕ್ತ ಭಗವಂತನ ಬಗ್ಗೆ ವಿಜ್ಞಾನಕ್ಕಿರುವ ಗೊಂದಲವನ್ನು ಕುರಿತು ಹೇಳಲು ಪ್ರಾರಂಭಿಸಿದರು. ಒಬ್ಬ ಹೊಸದಾಗಿ ತಮ್ಮ ತರಗತಿಗೆ ಸೇರಿದ್ದ ವಿದ್ಯಾರ್ಥಿಯನ್ನು ನಿಂತುಕೋ....ಎಂದು ಹೇಳಿದರು.
ಫ್ರೊಫೆಸರ್ : ನೀನು ದೇವರನ್ನು ನಂಬುತ್ತೀಯಾ?
ವಿದ್ಯಾರ್ಥಿ: ಕಡಾ ಖಂಡಿತವಾಗಿ, ಗುರುಗಳೆ.
ಫ್ರೊಫೆಸರ್ : ದೇವರು ಒಳ್ಳೆಯವನೆ?
ವಿದ್ಯಾರ್ಥಿ: "ಖಂಡಿತವಾಗಿ"
ಫ್ರೊಫೆಸರ್ : ಆ ದೇವರು ಸರ್ವಶಕ್ತನೆ?
ವಿದ್ಯಾರ್ಥಿ: ಹೌದು
ಫ್ರೊಫೆಸರ್ : ನೋಡು, ದೇವರೇ ನನ್ನನ್ನು ಗುಣಪಡಿಸು ಎಂದು ಅವನನ್ನು ಪ್ರಾರ್ಥಿಸಿದರೂ ನನ್ನ ತಮ್ಮ ಕ್ಯಾನ್ಸರಿನಿಂದ ಸತ್ತ. ನಮ್ಮಲ್ಲನೇಕರು ಖಾಯಿಲೆಯಿಂದ ನರಳುತ್ತಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ; ಆದರೆ ದೇವರು ಮಾಡಲಿಲ್ಲ; ಹಾಗಾದರೆ ಈ ದೇವರು ಅದು ಹೇಗೆ ಒಳ್ಳೆಯವನಾಗುತ್ತಾನೆ. ಅಲ್ಲ......ವೇ?
ವಿದ್ಯಾರ್ಥಿ: (ಸುಮ್ಮನಿರುತ್ತಾನೆ)
ಫ್ರೊಫೆಸರ್ : ನಿನ್ನ ಬಳಿ ಇದಕ್ಕೆ ಉತ್ತರವಿಲ್ಲ ಅಲ್ಲವೆ ? ನಿನ್ನಿಂದ ಉತ್ತರಿಸಲು ಸಾಧ್ಯವೇ? ಸರಿ, ಈಗ ಮೊದಲಿನಿಂದ ಪ್ರಾರಂಭಿಸೋಣ ನವ ಯುವಕನೇ. ದೇವರು ಒಳ್ಳೆಯವನೆ ?
ವಿದ್ಯಾರ್ಥಿ: ಹೌದು.
ಫ್ರೊಫೆಸರ್ : ಮತ್ತೆ, ಸೈತಾನನು ಒಳ್ಳೆಯವನೆ?
ವಿದ್ಯಾರ್ಥಿ: ಇಲ್ಲ
ಫ್ರೊಫೆಸರ್ : ಈ ಸೈತಾನ ಎಲ್ಲಿಂದ ಬಂದ?
ವಿದ್ಯಾರ್ಥಿ: "ದೇವರ...... ಕಡೆಯಿಂದ......
ಫ್ರೊಫೆಸರ್ : ಅದು ಸರಿ. ಮಗೂ ಈ ಪ್ರಪಂಚದಲ್ಲಿ ಕೆಡುಕೆನ್ನುವುದು ಇದೆಯೇ?
ವಿದ್ಯಾರ್ಥಿ: ಹೌದು.
ಫ್ರೊಫೆಸರ್ : ಕೆಡುಕೆನ್ನುವುದು ಎಲ್ಲಾ ಕಡೆ ಇದೆಯಲ್ಲವೆ? ಮತ್ತು ದೇವರು ಎಲ್ಲವನ್ನೂ ಸೃಷ್ಠಿಸಿದ, ಸರಿ ಅಲ್ಲವೇ?
ವಿದ್ಯಾರ್ಥಿ: ಹೌದು.
ಫ್ರೊಫೆಸರ್ : ಹಾಗಾದರೆ ಈ ಕೆಡುಕನ್ನು ಯಾರು ಸೃಷ್ಠಿಸಿದರು?
ವಿದ್ಯಾರ್ಥಿ: (ಉತ್ತರಿಸದೆ ಮೌನವಾಗಿದ್ದ)
ಫ್ರೊಫೆಸರ್ : ಖಾಯಿಲೆ, ಅನೈತಿಕತೆ, ದ್ವೇಷ, ಅಸಹ್ಯ ಕೂಡ ಇವೆಯಲ್ಲವೆ? ಈ ಎಲ್ಲಾ ಭಯಂಕರ ವಸ್ತುಗಳು ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿ ಇವೆಯಲ್ಲವೇ?
ವಿದ್ಯಾರ್ಥಿ: ಹೌದು, ಸ್ವಾಮಿ.
ಫ್ರೊಫೆಸರ್ : ಹಾಗಾದರೆ, ಅವುಗಳನ್ನು ಸೃಷ್ಠಿಸಿದ್ದು ಯಾರು?
ವಿದ್ಯಾರ್ಥಿ: (ಉತ್ತರಿಸದೆ ಮೌನವಾಗಿರುತ್ತಾನೆ)
ಫ್ರೊಫೆಸರ್ : ವಿಜ್ಞಾನ ಹೇಳುತ್ತದೆ ನಿನಗೆ ಐದು ಇಂದ್ರಿಯಗಳಿವೆ ಮತ್ತು ಅವುಗಳಿಂದ ನೀನು ಹೊರಗಿನ ಪ್ರಪಂಚವನ್ನು ಗುರುತಿಸುತ್ತೀಯಾ ಮತ್ತು ಅರಿಯುತ್ತೀಯಾ. ಮಗೂ......ಈಗ ಹೇಳು....ನೀನು ಯಾವಾಗಲಾದರೂ...ದೇವರನ್ನು ಕಂಡಿದ್ದೀಯಾ?
ವಿದ್ಯಾರ್ಥಿ: ಇಲ್ಲ ಗುರುಗಳೆ.
ಫ್ರೊಫೆಸರ್ : ಹೋಗಲಿ ನೀನು ನಿನ್ನ ದೇವರನ್ನು ಯಾವಾಗಲಾದರೂ (ಧ್ವನಿಯಂತೆ) ಕೇಳಿಸಿಕೊಂಡಿದ್ದೀಯಾ?
ವಿದ್ಯಾರ್ಥಿ:ಇಲ್ಲ ಗುರುಗಳೆ.
ಫ್ರೊಫೆಸರ್ : ಹೋಗಲಿ ನೀನು ನಿನ್ನ ದೇವರನ್ನು ಯಾವಾಗಲಾದರೂ ಸ್ಪರ್ಶಿಸಿದ್ದೀಯಾ, ಇಲ್ಲಾ ರುಚಿ ನೋಡಿದ್ದೀಯಾ ಅಥವಾ ವಾಸನೆ ನೋಡಿದ್ದೀಯಾ. ಅದೂ ಹೋಗಲಿ, ನಿನ್ನ ದೇವರು ನಿನ್ನ ಯಾವುದಾದರೂ ಇಂದ್ರಿಯಕ್ಕೆ ಗೋಚರನಾಗಿದ್ದಾನೆಯೆ?
ವಿದ್ಯಾರ್ಥಿ:ಇಲ್ಲ......ಇಲ್ಲ.......ಗುರುಗಳೆ!
ಫ್ರೊಫೆಸರ್ : ಆದರೂ ಕೂಡ ನೀನು ಇನ್ನೂ ಭಗವಂತನನ್ನು ನಂಬುತ್ತೀಯ?
ವಿದ್ಯಾರ್ಥಿ: ಹೌದು.
ಫ್ರೊಫೆಸರ್ :  ಪ್ರಾಯೋಗಿಕವಾಗಿ ತೋರಿಸಲಾಗದ, ಇಂದ್ರಿಯಗಳಿಗೆ ನಿಲುಕದ/ಗೋಚರವಲ್ಲದ, ಪರೀಕ್ಷಿಸಲಾಗಾದ, ಪ್ರತ್ಯಕ್ಷವಾಗಿ ತೋರಿಸಲಾಗದ ಅಥವಾ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಗದ್ದನ್ನು ವಿಜ್ಞಾನದ ನಿಯಮದಂತೆ ಒಪ್ಪಲಾಗದು ಆದ್ದರಿಂದ ಅದರ ಪ್ರಕಾರ ನಿನ್ನ ದೇವರು ಅಸ್ತಿತ್ವದಲ್ಲಿ ಇಲ್ಲ. ಈಗ ಹೇಳು ಮಗು...ಇದಕ್ಕೆ ನೀನೇನೆನ್ನುತ್ತೀಯಾ?
ವಿದ್ಯಾರ್ಥಿ: ಏನೂ ಹೇಳಲಾರೆ ಆದರೆ ಅದರ ಬಗ್ಗೆ ನನಗೆ "ವಿಶ್ವಾಸ" ಇದೆ ಎಂದು ಮಾತ್ರ ಹೇಳಬಲ್ಲೆ.
ಫ್ರೊಫೆಸರ್ : ಹೌದು ನಂಬಿಕೆ ಅಥವಾ ವಿಶ್ವಾಸ, ಇದೇ ನೋಡು ನಮ್ಮ ವಿಜ್ಞಾನ ಒಪ್ಪಿಕೊಳ್ಳದೇ ಇರುವುದು.
ವಿದ್ಯಾರ್ಥಿ: ಗುರುಗಳೇ, ಉಷ್ಣವೆನ್ನುವ ವಸ್ತುವೇನಾದರೂ ಇದೆಯೇ?
ಫ್ರೊಫೆಸರ್ : ಹೌದು ಇದೆ.
ವಿದ್ಯಾರ್ಥಿ: ಹಾಗಾದರೆ ಶೀತ ಎನ್ನುವ ವಸ್ತುವೇನಾದರೂ ಇದೆಯೇ?
ಫ್ರೊಫೆಸರ್ : ಇದೆ.
ವಿದ್ಯಾರ್ಥಿ: ಇಲ್ಲ ಸರ್, ಶೀತವೆನ್ನುವ ವಸ್ತು ಇಲ್ಲವೇ ಇಲ್ಲ.
(ಈ ವಿಚಿತ್ರ ತಿರುವು ಪಡೆದ ವಾದ ಸರಣಿಯನ್ನು ಆಲಿಸಲು ಆ ತರಗತಿ ನಡೆಯುತ್ತಿದ್ದ ಇಡೀ ಕೋಣೆ ಸ್ತಬ್ದವಾಯಿತು.)
ವಿದ್ಯಾರ್ಥಿ: ಗುರುಗಳೇ, ನೀವು ಹೆಚ್ಚು ಉಷ್ಣ, ಅತಿ ಉಷ್ಣ, ಅತೀ ಹೆಚ್ಚು ಉಷ್ಣ, ಅತ್ಯಧಿಕ ಉಷ್ಣ, ಮಹತ್ತಾದ ಉಷ್ಣ, ಶ್ವೇತ ಉಷ್ಣ, ಅಲ್ಪ ಉಷ್ಣ ಅಥವಾ ಉಷ್ಣವಿಲ್ಲದಿರುವಿಕೆ ಇವನ್ನು ಹೊಂದಬಹುದು. ಆದರೆ ಶೀತವೆನ್ನುವ ಯಾವುದೇ ವಸ್ತು ಇರುವುದಿಲ್ಲ. ನಾವು ಶೂನ್ಯ ಡಿಗ್ರಿಗಿಂತ ೪೫೮ ಡಿಗ್ರಿ ಕಡಿಮೆ ಉಷ್ಣದ ಬಗ್ಗೆ ಹೇಳಬಹುದು ಏಕೆಂದರೆ ಅದಕ್ಕಿಂತ ಕಡಿಮೆ ಉಷ್ಣವನ್ನು ಹೊಂದಲು ಸಾಧ್ಯವಿಲ್ಲ.
    ಆದರೆ ಶೀತವೆನ್ನುವ ಯಾವುದೇ ವಸ್ತುವಿಲ್ಲ. ಶೀತವನ್ನು ನಾವು ಉಷ್ಣರಾಹಿತ್ಯವನ್ನು ತಿಳಿಸಲು ಬಳಸುವ ಪದವಷ್ಟೇ. ನಾವು ಶೀತವನ್ನು ಅಳೆಯಲಾರೆವು. ಉಷ್ಣವೆನ್ನುವುದು ಶಕ್ತಿಯ ರೂಪ. ಶೀತವೆನ್ನುವುದು ಉಷ್ಣದ ವಿರುದ್ಧ ವಸ್ತುವಲ್ಲ ಆದರೆ ಅದು (ಉಷ್ಣ) ಇಲ್ಲದಿರುವಿಕೆ.
    (ಈಗ ಆ ತರಗತಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಃಶಬ್ದವುಂಟಾಯಿತು)
ವಿದ್ಯಾರ್ಥಿ: ಗುರುಗಳೇ, ಹಾಗಾದರೆ ಕತ್ತಲೆಯ ವಿಷಯವೇನು? ಕತ್ತಲೆಯೆನ್ನುವ ವಸ್ತುವೇನಾದರೂ ಇದೆಯೇ?
ಫ್ರೊಫೆಸರ್ : ಇದೆ, ಅದಿಲ್ಲದಿದ್ದರೆ ರಾತ್ರಿ ಹೇಗಾಗುತ್ತಿತ್ತು?
ವಿದ್ಯಾರ್ಥಿ: ನೀವು ಮತ್ತೆ ಎಡವಿದಿರಿ ಗುರುಗಳೇ. ಕತ್ತಲು ಎನ್ನುವುದು ಯಾವುದೋ ಒಂದು ವಸ್ತು ಇಲ್ಲದಿರುವಿಕೆ. ನೀವು ಮಂದ ಬೆಳಕು, ಸಹಜ ಬೆಳಕು, ಪ್ರಭಲ ಬೆಳಕು, ಉಜ್ವಲವಾದ ಬೆಳಕು......ಹೀಗೆ ಹೊಂದಬಹುದು. ಆದರೆ ನಿಮಗೆ ನಿರಂತರವಾಗಿ ಬೆಳಕಿಲ್ಲದಿದ್ದರೆ, ನಿಮ್ಮ ಹತ್ತಿರ ಏನೂ ಇರುವುದಿಲ್ಲ ಅದನ್ನೇ ನೀವು ಕತ್ತಲೆ ಎನ್ನುತ್ತೀರ, ಅಲ್ಲವೆ? ಆದರೆ ವಾಸ್ತವವಾಗಿ ಕತ್ತಲೆ ಇಲ್ಲವಷ್ಟೆ. ಒಂದು ವೇಳೆ ಇದ್ದಿದ್ದರೆ ನೀವು ಕತ್ತಲೆಯನ್ನು ಇನ್ನಷ್ಟು ಗಾಢ ಕತ್ತಲೆ ಮಾಡುತ್ತಿದ್ದಿರಿ ಅಲ್ಲವೇ?
 ಫ್ರೊಫೆಸರ್ : ಸರಿ ಹಾಗಾದರೆ ನೀನು ಏನು ಹೇಳಲು ಹೊರಟಿದ್ದೀಯಾ, ನವಯುವಕನೇ ?
ವಿದ್ಯಾರ್ಥಿ: ಗುರುಗಳೇ, ನನ್ನ ಪ್ರಕಾರ ನಿಮ್ಮ ತತ್ವಶಾಸ್ತ್ರದ ತರ್ಕ ಗೋತಾ ಹೊಡೆಯಿತು.
ಫ್ರೊಫೆಸರ್ : ಗೋತಾ ಹೊಡೆಯಿತಾ? ಅದು ಹೇಗೆಂದು ವಿವರಿಸ ಬಲ್ಲೆಯಾ?
ವಿದ್ಯಾರ್ಥಿ: ಸ್ವಾಮಿ, ನೀವು ನಿಮ್ಮ ತತ್ವದ ಪ್ರಕಾರ ದ್ವಿತ್ವದ (ಎರಡು ವಸ್ತುಗಳ) ಬಗ್ಗೆ ಸಂಶೋಧನೆ ಮಾಡುತ್ತಿದ್ದೀರ. ನಿಮ್ಮ ವಾದದ ಪ್ರಕಾರ ಜೀವನ ಎನ್ನುವುದಿದೆ ಮತ್ತು ಅದರ ನಂತರ ಮರಣ ಎನ್ನುವುದಿದೆ; ಹಾಗೆಯೇ ಒಳ್ಳೆಯ ದೇವರು ಮತ್ತು ಕೆಟ್ಟ ದೇವರು. ನೀವು ದೇವರನ್ನು ಯಾವುದೋ ಒಂದು ಮಿತಿಗೊಳಪಡಿಸಿ ಅವನನ್ನು ಅಳೆಯಲು ಪ್ರಯತ್ನಿಸುತ್ತಿದ್ದೀರ! ಗುರುಗಳೆ, ವಿಜ್ಞಾನಕ್ಕೆ ಒಂದು "ಆಲೋಚನೆ" ಎನ್ನುವುದನ್ನೇ ವಿವರಿಸುವದಕ್ಕೆ ಆಗದು. ಆದರೂ, ಅದು ವಿದ್ಯುತ್ತು (Electricity) ಮತ್ತು ಕಾಂತೀಯತೆ (Magnetism) ಗಳಲ್ಲಿ ಒಂದನ್ನೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳದೇ ಬಳಸುತ್ತಿದೆ! ಮರಣವೆನ್ನುವುದನ್ನು ಜೀವನ ಎನ್ನುವುದರ ವಿರುದ್ಧ ರೂಪವನ್ನಾಗಿ ಗುರುತಿಸುವುದು ಅಮಾಯಕತ್ವವಲ್ಲದೆ ಮತ್ತೇನೂ ಅಲ್ಲ ಏಕೆಂದರೆ ವಾಸ್ತವದಲ್ಲಿ ಸಾವು ಎನ್ನುವ ವಿಷಯವಿಲ್ಲ. ಸಾವು ಎನ್ನುವುದು ಜೀವನ ಎನ್ನುವುದರ ವಿರುದ್ಧ ಸಂಗತಿಯಲ್ಲ ಆದರೆ ಕೇವಲ ಜೀವ ಇಲ್ಲದಿರುವಿಕೆ.
ಈಗ ಹೇಳಿ ಪ್ರಾಧ್ಯಾಪಕರೆ, ನೀವು ನಿಮ್ಮ ವಿಧ್ಯಾರ್ಥಿಗಳಿಗೆ ಅವರು ಮಂಗನಿಂದ ವಿಕಾಸ ಹೊಂದಿದವರೆಂದು ಪಾಠ ಹೇಳಿಕೊಡುತ್ತೀರ?
ಫ್ರೊಫೆಸರ್ : ನೀನು ಸಹಜ ವಿಕಾಸ ವಾದದ ಬಗ್ಗೆ ಮಾತನಾಡುತ್ತಿದ್ದರೆ, ಅದು ಸರಿ, ಅದನ್ನೇ ನಾನು ಭೋದಿಸುವುದು.
ವಿದ್ಯಾರ್ಥಿ: ಸ್ವಾಮಿ, ನೀವು ಎಂದಾದರೂ ನಿಮ್ಮ ಕಣ್ಣುಗಳಿಂದ ವಿಕಾಸ ಹೊಂದುವಿಕೆಯನ್ನು ನೋಡಿದ್ದೀರಾ?
(ಆಗ ಫ್ರೊಫೆಸರರು ತಮ್ಮ ತಲೆ ಅಲ್ಲಾಡಿಸಿ ಕಿರುನಗೆ ಸೂಸುತ್ತಾ ಈ ವಿದ್ಯಾರ್ಥಿಯ ವಾದ ಎಲ್ಲಿಗೆ ಕೊಂಡೊಯ್ಯುತ್ತಿದೆ ಎನ್ನುವುದನ್ನು ಅರಿಯ ತೊಡಗುತ್ತಾರೆ.)
ವಿದ್ಯಾರ್ಥಿ: ಯಾರೂ ವಿಕಸನ ಕ್ರಿಯೆಯನ್ನು ತಮ್ಮ ಸ್ವಂತ ಕಣ್ಣುಗಳಿಂದ ಗಮನಿಸದೇ ಇರುವುದರಿಂದ ಮತ್ತು ಅದನ್ನು ತೋರಿಸುವುದು ಅಸಾಧ್ಯವೂ ಕೂಡ. ಆದರೂ ವಿಕಸನ ಎನ್ನುವುದು ನಿರಂತರ ನಡೆಯುತ್ತಿರುವ ಒಂದು ಪ್ರಕ್ರಿಯೆ ಎನ್ನುವ ನಿಮ್ಮ ಅಭಿಪ್ರಾಯವನ್ನು ನೀವು ಭೋದಿಸುತ್ತಿದ್ದೀರಲ್ಲವೆ. ಹಾಗಾದರೆ ನೀವು ವಿಜ್ಞಾನಿಯಾಗಿರದೆ ಕೇವಲ ಭೋದಕರಷ್ಟೆ ?
(ಆಗ ತರಗತಿಯಲ್ಲಿ ನಗುವಿನ ಕೋಲಾಹಲವುಂಟಾಯಿತು)
ವಿದ್ಯಾರ್ಥಿ: ಈ ತರಗತಿಯಲ್ಲಿ ಯಾರಾದರೂ ನಮ್ಮ ಫೊಫೆಸರರ ಬುದ್ಧಿಯನ್ನು ಯಾವಾಗಲಾದರೂ ನೋಡಿದ್ದೀರ?
(ಮತ್ತೆ ತರಗತಿಯಲ್ಲಿ ನಗುವಿನ ಅಲೆ ಎದ್ದಿತು)
ವಿದ್ಯಾರ್ಥಿ: ಯಾರಾದರೂ ಫ್ರೊಫೆಸರರ ಬುದ್ಧಿಯನ್ನು ಕೇಳಿಸಿಕೊಂಡಿದ್ದೀರ, ಅನುಭವಿಸಿದ್ದೀರ, ಸ್ಪರ್ಶಿಸಿದ್ದೀರ ಅಥವಾ ವಾಸನೆ ನೋಡಿದ್ದೀರ. ಯಾರೂ ಅದನ್ನು ಮಾಡಿದಂತೆ ಕಾಣುವುದಿಲ್ಲ. ಆದ್ದರಿಂದ ವಿಜ್ಞಾನದ ಪ್ರಕಾರ ಪ್ರಾಯೋಗಿಕವಾಗಿ ತೋರಿಸಲಾಗದ, ಇಂದ್ರಿಯಗಳಿಗೆ ನಿಲುಕದ/ಗೋಚರವಲ್ಲದ, ಪರೀಕ್ಷಿಸಲಾಗಾದ, ಪ್ರತ್ಯಕ್ಷವಾಗಿ ತೋರಿಸಲಾಗದ ಅಥವಾ ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಗದ್ದನ್ನು ಒಪ್ಪಲಾಗದು; ಆದ್ದರಿಂದ ಅದರ ನಿಯಮಾವಳಿಗಳಂತೆ ನಿಮಗೆ ಬುದ್ಧಿಯೆನ್ನುವುದು ಇಲ್ಲ ಅಲ್ಲವೇ ಗುರುಗಳೆ?
ಗುರುಗಳೇ, ನಿಮ್ಮ ಮೇಲೆ ಸಂಪೂರ್ಣ ಗೌರವದಿಂದ ಕೇಳುತ್ತಿದ್ದೇನೆ, ಹಾಗಿದ್ದ (ಬುದ್ಧಿಯೆನ್ನುವುದ ಇಲ್ಲವೆಂದ) ಮೇಲೆ ನಾವು ನಿಮ್ಮ ಪಾಠಗಳನ್ನು ಹೇಗೆ ನಂಬಬೇಕು?
(ಆಗ ತರಗತಿ ಸಂಪೂರ್ಣ ನಿಃಶಬ್ದವಾಗುತ್ತದೆ. ಆಗ ಫೊಫೆಸರರು ಆ ವಿದ್ಯಾರ್ಥಿಯ ಮುಖವನ್ನು ನೋಡಿ ಅವನನ್ನು ಅಳೆಯಲು ನೋಡಿದರು ಆದರೆ ಇವನು ಅವರ ಊಹೆಗೆ ನಿಲುಕದಷ್ಟು ಆಳದಲ್ಲಿದ್ದ.)
ಫ್ರೊಫೆಸರ್ : ಮಗು....., ಅದನ್ನು.....ಅದನ್ನು......ನೀವು ನನ್ನ ಮೇಲೆ "ವಿಶ್ವಾಸ"ವಿರಿಸಿ ನಂಬಬೇಕು ಅಂದುಕೊಳ್ಳುತ್ತೇನೆ.
ವಿದ್ಯಾರ್ಥಿ: ಅದೇ....ಸ್ವಾಮಿ....ದೇವರಿಗೂ ಮತ್ತು ಮನುಷ್ಯರಿಗೂ ಇರುವ ಕೊಂಡಿ.....ಅದೇ...."ವಿಶ್ವಾಸ". ಇದುವೇ ಎಲ್ಲ ಆಗುಹೋಗುಗಳನ್ನು ನಿಯಂತ್ರಿಸುತ್ತದೆ ಮತ್ತು ಎಲ್ಲ ಪ್ರಕ್ರಿಯೆಗಳು ನಿರಂತರವಾಗಿ ಸಾಗುವಂತೆ ಮಾಡುತ್ತದೆ.
=================================================================================================
ವಿ. ಸೂ. >> ಇದು  ನಮ್ಮ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ. ಅಬ್ದುಲ್ ಕಲಾಮ್ ಸಾಹೇಬರ ಬಗ್ಗೆ ಪ್ರಚಲಿತವಿರುವ ಕಥೆ. ಈ ಕಥೆಯನ್ನು ಹಲವಾರು ಜನರಿಗೆ ಆರೋಪಿಸಲಾಗಿದೆ; ವಿವರಗಳಿಗೆ ಪ್ರತಿಕ್ರಿಯೆಗಳನ್ನು ನೋಡಿ. ಮೂಲ: ಮಿತ್ರನೋರ್ವ ಮಿಂಚಂಚೆಯಲ್ಲಿ ಕಳುಹಿಸಿದ ಲೇಖನದ ಕನ್ನಡಾನುವಾದ. (ಇದರ ಕೊಂಡಿಯನ್ನು ಬಹುಶಃ ಶ್ರೀಕರ್ ಅಥವಾ ಗಣೇಶರು ಕೊಡುತ್ತಾರೆಂದು ಕೊಳ್ಳುತ್ತೇನೆ)