ಬೆಳಕಿನ ಮೂಲವರಿಯಬೇಕೆ ?
ಅಂಜಬೇಡ ಕತ್ತಲೆಗೆ
ಅಂಧಕಾರದಲ್ಲಿಯೇ ಹುಡುಕು
ಅದರ ಗರ್ಭದಲ್ಲಿದೆ ಬೆಳಕಿನ ಮೂಲ !
ನೀರಿನ ಆಳ ತಿಳಿಯಬೇಕೆ ?
ಮೊದಲು ನೀರಿಗೆ ಧುಮುಕು
ಈಜು ಕಲಿ ಸುಳಿಗೆ ಸಿಲುಕಬೇಡ
ನೀರನಾಳ ಹೆದರಿಸದು ನಿನ್ನ !
ಆಕಾಶದ ಅನಂತ ದರ್ಶನ ವಾಗಬೇಕೆ ?
ರೆಕ್ಕೆ ಬಿಚ್ಚಿ ಹಾರು ಗರುಡನಂತೆ
ಧ್ಯಾನಸ್ಥವಾಗು ವಿಹರಿಸು ಸ್ವೇಷ್ಛೆಯಾಗಿ
ದೊರೆವ ಆನಂದ ಅವರ್ಣನೀಯ !
ಕುದುರೆ ಸವಾರಿ ಮಾಡಬೇಕೆ?
ಏರು ಕುದುರೆ ಇರಲಿ ಲಗಾಮು ಭದ್ರ
ಅದರ ಮೈದಡವು ಮಾಡು ಸವಾರಿ
ಕುದುರೆ ನಿನ್ನ ಕೈವಶವಾದಂತೆ !
ಹೆಣ್ಣು ನಿನಗರ್ಥವಾಗಬೇಕೆ ?
ಅವಳ ಮನದಾಳಕಿಳಿ ಚಂಚಲತೆ ತಿಳಿ
ಆಕೆಯನ್ನು ಪ್ರೀತಿಸು ಗೌರವಿಸು
ನೀ ಹೆಣ್ಣ ಗೆದ್ದಂತೆ !
ಜೀವನದ ಸಾರ್ಥಕ್ಯ ಅರಿಯಬೇಕೆ ?
ಭೋಗವನು ತ್ಯಜಿಸು ರಾಗಗಳ ಗೆಲ್ಲು
ಸಜ್ಜನೆರ ಶೋಷಿತರ ಪರ ನಿಲ್ಲು
ಆಗುವುದು ನಿನಗಾಗ ' ಜೀವನ ದರ್ಶನ '
ಪ್ರತಿಕ್ರಿಯೆ (6)