ಹಾಗು ಹೀಗೂ ಏನೋ ಮಾಡಿ ಬರೆಯಲು ಕುಂತೆ
ಆದರೆ ಬರೆಯುವುದು ಏನನ್ನ
ಕಳೆದ ನೆನ್ನೆಯನ್ನೇ
ಬರುವ ನಾಳೆಯನ್ನೆ
ಅಥವಾ ಬದುಕುತ್ತಿರುವ ಇವತ್ತಿನದನ್ನೇ
ನೆನ್ನೆ ನನ್ನ ಹಿಡಿತದಲ್ಲಿಲ್ಲ
ನಾಳೆಯದು ಭರವಸೆ, ವಾಸ್ತವವಲ್ಲ
ಹಾಗಾದರೆ ಇಂದಿನದನ್ನು ಬರೆಯಲೇ
ಏನೆಂದು ಬರೆಯಲಿ ನೆನ್ನೆಯ ಕನಸುಗಳನ್ನು
ನಾಳೆಗೆ ಮುಂದೂಡಿದೆ ಎಂದು ಬರೆಯಲೇ
ಇಂದಿನ ಸುಖವನ್ನು ನೆನ್ನೆಯ ನೋವಿನಲ್ಲಿ
ಮರೆತೇ ಎಂದು ಬರೆಯಲೇ
ನಾಳೆ ಬಣ್ಣವಾಗಿ ಬದುಕುವ ಕನಸು
ಇಂದಿನ ದಿನವನ್ನು ರೋಮಂಚನವಾಗಿಸಿದೆ
ಎಂದು ಬರೆಯಲೇ
ನಾಳೆಯದು ಭವಿಷ್ಯ ಎಂದರು
ನೆನ್ನೆಯನ್ನು ಭೂತಕಾಲ ಎಂದರು
ಈ ಭೂತ ಭವಿಷ್ಯದ ನಡುವಲ್ಲಿ
ವಾಸ್ತವ ಒಂದು ಅಚಲ ಚಲನಶೀಲ ಬಿಂದು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ನನ್ನೂರಿನ ನುಡಿ ಜಾತ್ರೆಗೆ ಸ್ಪಂದಿಸದ ರಾಜಕಾರಣಿಗಳಿಗೆ, ಕನ್ನಡ ಸಂಘಗಳಿಗೆ ನನ್ನದೊಂದು ಧಿಕ್ಕಾರ.
ಹುಡುಕಾಟ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)