ಪ್ರೀತಿ ತುಂಬಿದ ಈ ಕ್ಷಣ
ಹೀಗೆ ನಿಲ್ಲಬಾರದೆ ?
ಬೀಸುತಿರುವ ತಂಗಾಳಿ
ಹೀಗೆ ಬೀಸುತ್ತಾ ಇರಬಾರದೆ ?
ತಂಗಾಳಿಯಲಿ ತೇಲಿದೆ ನಿನ್ನ ಗಂದ
ಹೇಗೆ ವರ್ಣಿಸಲಿ ನಿನ್ನ ಅಂದ
ಸವಿಯುತಿರುವೆ ನಿನ್ನ ಚೆಂದ
ದುಂಬಿ ಹೀರಿದಂತೆ ಮಕರಂದ.
ನೀನು ಇರಲು ಎಂಥ ಚೆಲುವು
ನನ್ನ ಅರಿವು ಎಲ್ಲ ಮರೆವು
ತುಂಬಿ ಬಂದಿತೆನ್ನ ಮನವು
ಇದುವೆ ತಾನೆ ಒಲವು.......ಒಲವು.
ಪ್ರೀತಿಯಿಂದ
ರವೀ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)