ಕನಸು
ಮನಸಿನ ಗಾಳದಲ್ಲಿ ಬೀಳುವ ಕನಸು ಯಾವುದೋ...?
ಬೀಳುವ ಕನಸು ಎಂದು ನನಸಾಗುವುದೋ....?
ಕನಸು ನನಸುಗಳ ಜಂಜಾಟದಲಿ, ಮನಸು
ಗೊಂದಲದಲ್ಲಿರುವಾಗ,
ಬೀಳುವ ಹಗಲುಗನಸು ಯಾವುದೋ...?
ಕನಸನು ನನಸಾಗಿಸಲು ಮನಸು ಒದ್ದಾಡುತಿರುವಾಗ
ಮತ್ತೊಂದು ಕನಸು ಬೇಕೆ....?
ಕನಸನು ನನಸಾಗಿಸಲು ಸಮಯವು ಮುಗಿದಿರಲು
ಮತ್ತೆ ನನಸಿನ ಕನಸು ಏಕೆ.....?
ಕನಸು ನಿಜವಾದಂತೆ ಬಿದ್ದ ಹಗಲುಗನಸಿನಲಿ
ಮನಸು ಮರೆತು ಹೋಯಿತು
ಹಗಲುಗನಸಿನಲಿ ಮರೆತ ಮನಸಿನ ಕನಸು
ಮತ್ತೆ ಕನಸಾಗಿ ಉಳಿಯಿತು......!!!
:-ವಿಶ್ವನುಡಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!