ನೆನಹು ಹಾಡಿತು.. ಮನವ ಕದಡಿತು..
ಮಾತು ಹೊರಳದೆ ನಿಂತಿತು..
ಹರುಷಮೂಡಿಸಿ ಹೃದಯ ತೆರೆದಿತು..
ಮರೆತ ಹಾಡದು ಉಲಿಯಿತು…..
ಕಳೆದು ತೀರದ ಮಧುರ ಕ್ಷಣವದು..
ಪ್ರೀತಿ, ಬದುಕಲಿ ಕಲೆತಿತು..
ಅವಳನೋಡಿದ ಮೊದಲ ದಿನವದು..
ಒಲವು ಮಿಂಚಿಸಿ ಬೆಸೆದಿತು.....
ಬರೆದು ಗೀಚಿದಪ್ರೇಮ ಕವನದಿ..
ಭಾವ ಹೊಸಯಿಸಿ ಹಾಡಲು..
ನಗುತ ಮೀದಳು ಹಾರಿ ಗಗನದಿ..
ಸುಖದಸೆಲೆಯಲಿ ತೇಲಲು.....
ಎಂದೋ ಮೀಟಿದ ನಾದ ಸುಸ್ವರ-
-ವಂದು ನಾಟಿದ ಘಳಿಗೆಗೆ..
ಮಿಂದುನಾಕದಿ ನಿಂದು ಮಾಮರ-
-ದಂದು ಶಿಂಜಿತ ಕೂಗಿಗೆ.....
ಹಕ್ಕಿ ಹಾರಿತು ಮರಳಿಗೂಡಿಗೆ..
ಋತುಗಳುರುಳುತ ಬಾಳ್ವೆಗೆ..
ಪ್ರೀತಿ ಹುದುಗಿತು ಮನದಿ ಮೂಲೆಗೆ..
ನೆನಹುಉಳಿದಿತು ನಾಳೆಗೆ.....
ಕಲೆತು ಹಾಡಿದ ಅಮರ ಗೀತೆಯು ..
ಗುನುಗಿ ಕಾಡುತಲಿಂದಿಗು..
ಬೆರೆತು ಸುಖಿಸಿದ ದಿನಗಳೆರಡವು..
ಜಿನುಗಿ ಮನದೊಳಗೆಂದಿಗು.....
ಬಾ ವಸಂತವೆ ಮರಳಿ ಬಾ - ಕವಿ..
ಮಿಡಿತ ನುಡಿಯೊಳಗೊಲವ ತಾ..
ಹರುಷ ತಾ ಮನದಣಿಸ ಬಾ - ಕವಿ..
ಹೃದಯ ಸ್ಪರ್ಷಿಸಿ ಹರಸುತ....
ಪ್ರತಿಕ್ರಿಯೆ (1)