ನಿನ್ನ ನೆನಪಿನ ಕಿಚ್ಚಿನಲ್ಲಿ.
ಉರಿವೆದೆಯ ಜ್ವಾಲೆಯಲಿ
ನೋದಳುತಿಹ ಕಂಗಳಲ್ಲಿ
ನಾ ಏನೆಂದು ಹಾಡಲಿ
ಎಳಕ್ಷರದ ಸ್ವರದಲ್ಲಿ
ನಿನ್ನೋಡನಿರುವ ನನ್ನೀ ಭಾವನೆ!
ನಿನ್ನನೆ ನೆನವ ಹೃದಯದಲಿ
ನಿನ್ಹೆಸರಹೊತ್ತ ಉಸಿರಿನಲಿ
ನಿನ್ನ ಸಂದಸವೇ ಕಂಡ ಕಂಗಳಲಿ
ಕನಸಾಗಿ ಮತೂಮ್ಮೆ ಬರಡಾಗಿ ನನ್ನ ಬಾಳಿನಲಿ
ಕೊನೆಗೊಂದು ಕೊರಗುಳಿಸಿ ಹೊರಟೆಯಲ್ಲೇ
ಕೊಲ್ಲುವಂತರಂಗದ ವೇದನೆ!
ಎನ್ನಪ್ಪಣೆಯಿಲ್ಲದೆನ್ನ ಎದೆಯoಗಳಕ್ಕೆ ಬಂದಿಳಿದ ಅಪರಿಚಿತಳು ನೀನು
ಬಂದಿಳಿದು ಮನದಾಳದ ಕದವ ತಟ್ಟಿ ನೀನು
ತಿಳಿಯದ ಮನಸಿಗೆ ತಿಳಿಸಿ ಪ್ರೀತಿಯನ್ನು
ಭಾವನೆಗಳಲೇ ತೇಲಿಸಿ ನನ್ನನು
ಮುಗ್ಧ ಮನಸಿನಾಪುಟದ ತುಂಬಾ ನಿನ್ನೆತ್ತರ ಹೆಸರ ಬರೆದ್ಹೋದೆಯಲ್ಲೇ
ನಾನೀಗ್ಹೇಗೆ ತಡೆಯಲ್ಲೆ ನೀನಿಲ್ಲದರಿವಿನ ಯಾತನೆ!
ನಿನ್ನಿರುವೆನ್ನಿಂದ ದೂರವಾದರು ನಿನ್ನ ಪ್ರೀತಿಯ ಪ್ರೀತಿಯಿಂದಲೇ ಭಾವಿಸಿ
ಪ್ರತಿಕ್ಷಣವು ನಿನ್ನಗಲಿಕೆಯ ನೋವನನುಭವಿಸಿ
ನಿನ್ನ ನೆನಪಲ್ಲಿ ತಹತಹಿಸಿ
ಮರೆಯದಾಗದೆ ನಿತ್ಯವೂ ನಿನ್ನಾನೆಪುಗಳನ್ನೇ ವರಿಸಿ
ಇನ್ನು ಬದುಕಿರುವೆನೇ ಪ್ರಿಯೆ, ಕೃಪೆದೂರಿ ಬಂದೆನ್ನಪ್ಪಿ ಪ್ರೀತಿಯಾಮೃಥವುನಣಿಸೆಲೇ.
ಆ ಕ್ಷಣವೇ ಅರ್ಪಿಸುವೆ ನಿನಗೆ ನನ್ನನೇ!!!
ಹರೀಶ್ ಶರ್ಮ....................................... :(
ಪ್ರತಿಕ್ರಿಯೆ (1)