ಬರದ ಬಿರುಸು ಬಿಸಿಯ ಉಸಿರು
ಬಿಸಿಲ ಉರಿಸಿ ಧರೆಯ ದಹಿಸಿ
ಕಾಡು ಬೆಂದು ನಾಡು ನೊಂದು
ಜೀವ ಜಾಲ ನೊಂದು ಬೆಂದು
ನಿನ್ನ ಕೋಪ ನಮ್ಮ ತಾಪ
ಬಿಸಿಲ ಝಳದ ಸುಡುವ ನೆಲದ
ನಡುವೆ ಛಲದ ಬಾಳು ಬದುಕು
ನಿತ್ಯ ಗೋಳು ಸಿಗದ ಕೂಳು
ಖಾಲಿ ಕೊಡದ ಬಿಡದ ಪಾಳಿ
ಬರದ ಬಟ್ಟೆ ಹಸಿದ ಹೊಟ್ಟೆ
ಸಾಕು ನಿಲಿಸು ನಿನ್ನ ಶಾಪ
ಮಳೆಯ ಸುರಿಸಿ ನದಿಯ ಹರಿಸು
ಹಸಿರ ಬರಿಸಿ ಸುಖವ ಹರಸು
ಬೇಗೆ ಹರಿಸಿ ಕಷ್ಟ ಸರಿಸು
ಹಸಿರ ಸರಸ ಸುಖದ ಬಸಿರು
ಭುವಿಯ ಹಸಿರೆ ನಮ್ಮ ಉಸಿರು
ಧರೆಯ ಹರಸಿ ಜೀವ ಉಳಿಸು
ಹಸಿವ ಮರೆಸಿ ಸುಖವ ಹರಸು
ಹಸಿರ ನಗಿಸಿ ಬರವ ಹರಿಸು
ಸಿರಿಯ ಸುರಿಸಿ ಹಸಿರ ಮೆರಸು
ನಗೆಯ ದಿರುಸ ಬಿಡದೆ ಧರಿಸಿ
ಜನರ ಹರಸಿ ಜೀವ ಬೆಳಸು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!