ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ
ವಚನವನ್ನು ___LINK_OPEN_href="http://www.vicharamantapa.net/" target="_blank"___ವಿಚಾರ ಮಂಟಪದಿಂದ ಪಡೆದೆ :-
" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!"
ಇಷ್ಟೆ ಅರ್ಥ ಆಗಿದ್ದು ನನಗೆ:-
ನಿಚ್ಚ - ನಿಜ (?)
ಅಚ್ಚುಗ - ಮೋಹ
ಕಿಚ್ಚು - ಬೆಂಕಿ
ಬೆಂಕಿ ಹೊತ್ತುಕೊಂಡು ಅಚ್ಚನೆ(?) ಆಡಲು ಅಚ್ಚುಗ(ಮೋಹ) ಯಾಕೆ ಆಗುತ್ತೆ? :(
ಯಾಕೆ ನಿಶ್ಚಿಂತೆಯಾಯ್ತು ? :(
ಪ್ರತಿಕ್ರಿಯೆ (1)