ಕಣ್ತೆರೆದು ನೋಡು
ಸೊಗಸಾಗಿ ಜೋಡಿಸಿದ
ಕಲ್ಲ ಸಾಲುಗಳಲಿ
ನವಿರಾಗಿ ಕೆತ್ತಿದ
ಸ್ಫುಟವಾದ ಶಿಲ್ಪಗಳನು
ತಲೆಯೆತ್ತಿ ನಿಂತ
ಸಧೃಢ ಗೋಪುರದಲಿ
ಮನುಕುಲವ ಬೆಳಗುವ
ಮಿಣುಕು ದೀವಿಗೆಯನು
ತನ್ನ ತಾನೇ ಸುಡುತ
ದೇವರ ಮುಖಾರವಿಂದವ
ಪ್ರಕಾಶಮಾನವಾಗಿ ಬೆಳಗುತಿರುವ
ಹಣತೆಯ ಧನ್ಯತೆಯನು
ಗೆಳೆಯ, ಕಣ್ತೆರೆದು ನೋಡು
ನನ್ನ ಮನದ ಗುಡಿಯಲಿ
ದೇವರನೇ ಹೋಲುವ
ನಿನ್ನದೇ ಪ್ರತಿಬಿಂಬವನು!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)