ನಡೆಯುತಿರೆ ನಾನೊಂಟಿಯಾಗಿ
ಮರಳ ತೀರದಲ್ಲಿ ,
ಬಂದು ಬಿಗಿದಪ್ಪಿದಾ ಅಲೆಯು ನೀ
ಜಗದ ಮರುಳಿನಲ್ಲಿ.
ಸಾಗುತಿರಲು ನಾ
ಕಾಡುಮೇಡಿನಲ್ಲಿ,
ಬೀಸಿದ ತಂಗಾಳಿ ನೀ
ಇಹದ ಕನಸುಗಳಲ್ಲಿ.
ಸಾಗುತಿರೆ ಪಯಣ
ಬರಡು ಬೆಂಗಾಡಿನಲ್ಲಿ,
ಒದಗಿದೊಲುಮೆಯ ಚಿಲುಮೆ ನೀ
ಈ ಸುಂದರ ಸಂಜೆಯಲ್ಲಿ.
ಕುಳಿತಿರಲು ನಾ ಏಕಾಂಗಿಯಾಗಿ
ಮನದ ಮೂಲೆಯಲ್ಲಿ,
ಪ್ರೀತಿಯ ನೀರೆರೆದ ಒಲವು ನೀ
ಈ ಜೀವದಲ್ಲಿ.
ಒಂಟಿ ಹಕ್ಕಿಯ ಪಯಣ
ಪ್ರತಿಕ್ರಿಯೆ (1)