ಬೆಳಕು  ಬೇಕೆಂದು ಹಾರೈಸಿದೆ

ಬೆಳಕು ಕಂಡು ನೊಂದೆ

ಕತ್ತಲು  ಕಾಣಲು  ತವಕಿಸಿದೆ

ಕತ್ತಲು ಕಂಡು  ನಿರಾಸೆ.

ಈಗ ನನಗಿಲ್ಲ  ಏನೂ ಹಾರೈಕೆ -ಅರಿಕೆ

ಸುಖ-ದುಖಃದ  ಹಿಗ್ಗು-ತಗ್ಗು ಅರಿವಿಲ್ಲ

ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ

ಮದ-ಮೋಹದ ಮಂಜು-ಮುಸುಕು  ಹರಿದಿದೆ                            

ಲೋಭ-ಮಾತ್ಸರ್ಯದ ತೆರೆ ಮರೆ  ಜಾರಿತು

ಐಹಿಕ- ಸುಖಕೆ ನಾ ಶತ್ರುವಾದೆ

ವಿಷಯಾಸಕ್ತಿಗಳಿಗೆ  ನಾ ನಿರ್ವಿಕಾರನಾದೆ

ಅವಿದ್ಯಾ -ಮಾಯಾ ಮರೀಚಿಕೆಗೆ  ಸಿಂಹ ಸ್ವಪ್ನ ವಾದೆ

ಇಂದ್ರಿಯ ವಿಜಯದ ಹಾದಿಯಲ್ಲಿ  ನಾ ಯಾತ್ರಿಯಾದೆ

ಒಟ್ಟನಲ್ಲಿ  ನಾ ಭಾವೋದ್ರೇಕ - ನಪುಂಸಕನಾದೆ.

 

ಶ್ರೀ ನಾಗರಾಜ್