ಸಂಪದದಲ್ಲಿ ನಾನು ಹೆಚ್ಚು ಬರೆದವನಲ್ಲ (ಅಂದರೆ ಬೇರೆಡೆ ಹೆಚ್ಚು ಬರೆದಿದ್ದೇನೆ ಎಂದರ್ಥವಲ್ಲ!). ಬರೆಯಬೇಕೆಂದುಕೊಂಡ ಕೆಲವು ಸರಣಿಗಳು ಆರಂಭದಲ್ಲೇ ನಿಂತುಹೋಗಿ ನನ್ನ ಆರಂಭ ಶೂರತ್ವವನ್ನು ಸಾರುತ್ತಿವೆ. ನೋಡೋಣ, ಮುಂಬರುವ ಕೆಲ ದಿನಗಳಲ್ಲಿ ಅವುಗಳನ್ನು ಮುಂದುವರಿಸಬಲ್ಲೆನೋ ಎಂದು ...

 

 

 

ಇರಲಿ; ಈ ಹೊತ್ತಿಗೆ ಒಂದೆರಡು ಸಾಲುಃ

 
 
 
 
ನಿಸರ್ಗದ ನಿಯಮಗಳನ್ನು ಅರಿಯಲು ಅವನು
ತನ್ನ ಜೀವನದುದ್ದಕ್ಕೂ ಬೆವರು - ರಕ್ತ ಸುರಿಸಿದ್ದ.
ಇನ್ನು ಕೆಲವೇ ಕ್ಷಣಗಳಲ್ಲಿ ತಿಳಿದೇ ಬಿಡುವವನಿದ್ದ; 
ಆದರೆ ನಿಸರ್ಗದ ನಿಯಮಗಳಿಗೆ ಅನುಗುಣವಾಗಿ
ಕೊ
ನೆ
ಯು
ಸಿ
ರೆ
ಳೆ
ದ.
 
ಇವತ್ತಿಗೆ, ಈ ಸಾಲು-ಅಕ್ಷರಗಳೊಂದಿಗೆ ವಿದಾಯ ...