--ದಿನಾಂಕ 17.6.2012 ಭಾನುವಾರ ಹಾಸನದಲ್ಲಿ ;ಚಿನ್ಮಯ ಸತ್ಸಂಗದ ಶುಭಾರಂಭವಾಯ್ತು. ಬೆಳಿಗ್ಗೆ 11.00 ಗಂಟೆಗೆ ನಡೆದ ಆಸಕ್ತರ ಸಭೆಯಲ್ಲಿ ತಿಪಟೂರು ಚಿನ್ಮಯಾ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು;ಮಾರ್ಗದರ್ಶನ ಮಾಡಿದರು. ಸಂಜೆ 6.00 ಗಂಟೆಗೆನಡೆದ ಸತ್ಸಂಗದಲ್ಲಿ ಹಾಸನದ ನೂರಾರು ಜನ ಭಕ್ತರು ಪಾಲ್ಗೊಂಡು ಸತ್ಸಂಗದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಲಿತಾರಮೇಶರ ಪ್ರಾರ್ಥನೆಯೊಂದಿಗೆ ಆರಂಭವಾದ ಸತ್ಸಂಗದಲ್ಲಿ ಶ್ರೀಹರಿಹರಪುರ ಶ್ರೀಧರರು ಹಾಸನದಲ್ಲಿ ಚಿನ್ಮಯ ಸಂಸ್ಥೆಯ ನ್ನು ಆರಂಭಿಸಲು ಎಲ್ಲರ ಸಹಕಾರ ಕೋರಿ ಸಭೆಗೆ ಸ್ವಾಮೀಜಿಯವರನ್ನು ಪರಿಚಯಿಸಿದರು. ಸ್ವಾಮೀಜಿಯವರು ನಡೆಸಿಕೊಟ್ಟ ಭಜನೆ ಮತ್ತು ನಂತರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆಯಿಂದ ಭಕ್ತರು ಪಾಲ್ಗೊಂಡು ;ಕೊನೆಯಲ್ಲಿ ಸ್ವಾಮೀಜಿಯವರಿಂದ ಪ್ರಸಾದವನ್ನು ಪಡೆದರು. ಮುಂದಿನ ಸತ್ಸಂಗವು ಈಶಾವಾಸ್ಯಮ್ ;ಸಭಾಂಗಣದಲ್ಲಿಯೇ ಜುಲೈ 8 ರಂದು ಅಪರಾಹ್ನ 4.00 ಗಂಟೆಗೆ ನಡೆಯಲಿದ್ದು ;ತದನಂತರ ಜುಲೈ 22 ರಂದು ಅದೇ ಸ್ಥಳದಲ್ಲಿ ಅಪರಾಹ್ನ 4.00 ಗಂಟೆಗೆ ನಡೆಯುವ ಸತ್ಸಂಗದಲ್ಲಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಳ್ಳಲಿರುವರು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!