ಅವರ ಚಿಂತೆ ಅವರಿಗೆ ಗೊತ್ತು.
ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಲಂಡನ್ನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇದ್ದರಂತೆ. ಟಿಕೆಟ್ ಕಲೆಕ್ಟೆರ್ ಬಂದು ಎದುರು ನಿಂತಾಗ ಷಾ ರವರು ತಮ್ಮ ಕೋಟಿನ ಜೇಬು, ಪಾಂಟಿನ ಜೇಬು ಎಲ್ಲ ಕಡೆ ತಡಕಾಡ ತೊಡಗಿದರು. ಎಲ್ಲಿ ನೋಡಿದರು ಟಿಕೇಟು ಸಿಗಲಿಲ್ಲ. ಕೊನೆಗೆ ತಮ್ಮ ಟ್ರಂಕನ್ನು ತೆಗೆದು ಬಟ್ಟೆ ಎಲ್ಲವನ್ನು ಹೊರಗೆಳೆದು ತಡಕಾಡ ತೊಡಗಿದರು. ಆದರೆ ಟಿಕೆಟ್ ಮಾತ್ರ ಸಿಗಲೇ ಇಲ್ಲ.
ಇದನ್ನೆಲ್ಲಾ ಗಮನಿಸಿದ ಟಿಕೆಟ್ ಕಲೆಕ್ಟೆರ್ " ಸಾರ್, ನೀವು ಬರ್ನಾರ್ಡ್ ಷಾ ಎಂಬುದು ನನಗೆ ತಿಳಿದಿದೆ. ನಿಮ್ಮಂತಹವರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದಿಲ್ಲವೆಂದು ನನಗೆ ಗೊತ್ತಿದೆ. ಅದಕ್ಕೆ ಯಾಕೆ ತಲೆ ಕೆಡಿಸಿ ಕೊಳ್ಳುತ್ತಿರಿ? ಚಿಂತೆ ಮಾಡಬೇಡಿ." ಎಂದು ಸಮಾಧಾನ ಹೇಳಿದ.
ಷಾ ರವರು ಟಿಕೆಟ್ ಕಲೆಕ್ಟೆರ್ ಕಡೆ ತಿರುಗಿ " ಧನ್ಯವಾದಗಳು, ಆದ್ರೆ, ನನ್ನ ಚಿಂತೆ ಈಗ ಟಿಕೆಟ್ ಸಿಗದಿದ್ದರೆ ನಾನು ಎಲ್ಲಿ ಇಳಿಯಬೇಕೆಂಬುದು ಗೊತ್ತಾಗುವುದಿಲ್ಲವಲ್ಲ? " ಎಂದು ತಮ್ಮ ಚಿಂತೆ ತೋಡಿಕೊಂಡರಂತೆ.
ಅವರವರ ಚಿಂತೆ ಅವರಿಗೆ ತಾನೇ ತಿಳಿಯುವುದು.
ಪ್ರಕಾಶ್
ಪ್ರತಿಕ್ರಿಯೆ (1)