ಆತ್ಮ  ನನ್ನ  ಆತ್ಮ !

ಮಾಡಬೇಕು ಅದೆಷ್ಟು   ಹರ ಸಾಹಸ 

ನಿನ್ನೊಳಗೆ ಲೀನವಾಗಲು ಪರಮಾತ್ಮ !      

 

ನೀನು ಅನಂತ ನಿತ್ಯ-ನೂತನ ಆನಂದ ಸವಿ

ನಾನು ರಾಗ-ದ್ವೇಷಗಳ  ಬೇವು ಕಹಿ

ನೀನು ಅಮರ ಸಾಗರದ ಅಖಂಡ ಖನಿ

ನಾನು ಮದ-ಮೋಹ, ಮಾತ್ಸರ್ಯದ ಗಣಿ

ನೀನು ಆದಿ ಅಂತ್ಯವಿಲ್ಲದ  ಚಿರ ಚೇತನ !

          ನಾನು  ವಿಕಲ್ಪ 

         ನೀನು  ನಿರ್ವಿಕಲ್ಪ 

ನೀನು ಜನನ-ಮರಣ ಕಾಲಚಕ್ರದಲಿ ನಿಲುಕದ ಸಿಂಧು

ನಾನು ಬದುಕು-ಸಾವಿನ ಸುಳಿವಿನಲಿ ಕೇಂದ್ರ ಬಿಂದು.

 

ಈ ಚಕ್ರವ್ಯೂಹ ಭೇಧಿಸಲು ಕೊಡು ಶಕ್ತಿ

ಸಾವೇ ಸಾವನಪ್ಪಿದ  ಮೇಲೆ ಇನ್ನೆಲ್ಲಿಯ  ಸಾವು

ಪಡೆಯುವುದು   ಆತ್ಮ  ಜೀವನ್ಮುಕ್ತಿ    !

 

ಶ್ರೀನಾಗರಾಜ್.