ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್  ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ. ಅವಳಿಗೆ ಮೊನ್ನೆ ಸನ್ಮಾನ ನಡೆಯಿತು. ಸ್ಯಾಂಟ್ರೊ  ಕಾರ್ ನ್ನು  ಅವಳಿಗೆ ಬಹುಮಾನವಾಗಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ವಾತಿಯ ಭರತನಾಟ್ಯ ಪ್ರದರ್ಶನ ಕೂಡ ಏರ್ಪಾಡು ಮಾಡೋಣ" ಕೂಡಲೇ ಸ್ವಾತಿಯ ತಂದೆ ಪ್ರಕಾಶ್ ರನ್ನು ಸಂಪರ್ಕಿಸಲಾಯ್ತು. ಅವರೂ ಒಪ್ಪಿದರು. ಭರತನಾಟ್ಯ ಕಾರ್ಯಕ್ರಮವೂ ನಿಶ್ಚಯವಾಗಿ ಆಮಂತ್ರಣ  ಮುದ್ರಣವಾಯ್ತು. ಆಮಂತ್ರಣವನ್ನು ಹಿಡಿದು ಚೆನ್ನರಾಯ ಪಟ್ಟಣದತ್ತ ಕಾರ್ ತಿರುಗಿತು. ಅವರ ಮನೆಯೊಳಗೆ ಕಾಲಿಟ್ಟ ಕೂಡಲೇ ಕಂಡ ಪ್ರಶಸ್ತಿಗಳ ಸರಮಾಲೆಯನ್ನು ನನ್ನ ಕ್ಯಾಮರಾ ಕ್ಲಿಕ್ಕಿಸಲು ವಿಫಲವಾಯ್ತು. ಅದಕ್ಕಾಗಿಯೇ ಒಂದು ವೀಡಿಯೋ ತೆಗೆದೆ. ಸಾಮಾನ್ಯ ಕ್ಯಾಮರಾವಾದ್ದರಿಂದ ವೀಡಿಯೋ ಗುಣಮಟ್ಟ ಅಷ್ಟು ಚೆನ್ನಾಗಿಲ್ಲವಾದರೂ ಅದು ಹೇಳಬೇಕಾದ್ದನ್ನು ಹೇಳುತ್ತದೆಯಾದ್ದರಿಂದ ಆ ಕ್ಲಿಪ್ ಇಲ್ಲಿ ಅಳವಡಿಸಿರುವೆ .

http://youtu.be/kH5lWw4Og2k

 ಜೊತೆಗೆ ಫೋಟೋಗಳನ್ನೂ    ಪ್ರಕಟಿಸಿರುವೆ. ಕು|| ಸ್ವಾತಿ ಭಾರಧ್ವಾಜ್ ,ಇವರ ವೆಬ್ ಸೈಟ್ ಕೊಂಡಿ ಕೆಳಗಿದೆ. ಹೆಚ್ಚಿನ ವಿವರ ಅಲ್ಲಿ ಲಭ್ಯ.
http://www.indiandancinglegend.com/

http://youtu.be/kH5lWw4Og2k