ಭಾಗ ೧ - ಗಂಡಸರು
 
        ಅಕ್ಕ ಪಕ್ಕದ ಮನೆಯ ಇಬ್ಬರು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು. ಒಬ್ಬಳೆಂದಳು, “ಏನೂಂದ್ರೆ! ನಮ್ಮ ಯಜಮಾನರು ತುಂಬಾ ಬುದ್ಧಿವಂತರು ಕಣ್ರೀ, ಅವರು ಬರೆದದ್ದು ಯಾರಿಗೂ ಅರ್ಥವಾಗೊಲ್ಲಾ!” ಆಗ ಇನ್ನೊಬ್ಬಳೆಂದಳು, “ಓ ಅದೇನ್ ಮಹಾ ವಿಷ್ಯಾ! ನಮ್ಮ ಯಜಮಾನರು ಇನ್ನೂ ಬುದ್ದಿವಂತರು ಕಣ್ರೀ, ಅವರು ಬರೆದದ್ದು ಅವರಿಗೇ ಅರ್ಥವಾಗೋದಿಲ್ಲಾ!!!”
 
ಭಾಗ -೨ : ಹೆಂಗಸರು

 
ಗಂಡಂದಿರ ಮೀಟಿಂಗ್ ನಡೆದಿತ್ತು; ಅವರಲ್ಲಿ ಚರ್ಚೆಗೆ ಬಂದ ವಿಷಯ ಯಾರ ಹೆಂಡತಿ ಹೆಚ್ಚು ಜಾಣೆ ಎಂದು? ಆಗ ಒಬ್ಬ ಕೊಚ್ಚಿಕೊಳ್ಳಲಿಕ್ಕೆ ಷುರು ಮಾಡಿದ, "ನನ್ನ ಹೆಂಡತಿ ಯಾವುದೇ ವಿಷಯ ಕೊಟ್ಟರೂ ಅದರ ಬಗ್ಗೆ ನಿರರ್ಗಳವಾಗಿ ಅರ್ಧ ಘಂಟೆ ಮಾತನಾಡಬಲ್ಲಳು" ಆಗ ಇನ್ನೊಬ್ಬ ಪತಿ ಮಹಾಶಯ ಅಂದ, " ಓ ಅದೇನು ಮಹಾ! ನನ್ನ ಹೆಂಡತಿ ಯಾವುದೇ ವಿಷಯವಿಲ್ಲದಿದ್ದರೂ ಅರ್ಧ ದಿವಸ ಮಾತಾಡ್ತಾಳೆ!!!”