ಹೆಣ್ಣೊಂದ ನೋಡ ಹೊರಟ
ನಮ್ ಸೂಪರ್ ಸುಬ್ಬ
ಆ ದ್ರುಶ್ಯವೋ ನೋಡೋರ್ ಕಣ್ಣಿಗ್ ಹಬ್ಬ..!
ನೋಡೋಕೆ ಮುಂಚೆ ಹೆಣ್ಣು
ಅದುರಿತು ಎಡ ಗಣ್ಣು!!
ಮುಂದಿತ್ತು ತಿಂಡಿ ತೀರ್ಥ
ಅದರತ್ತ ಎಲ್ರ ಚಿತ್ತ..!!
ಸುಬ್ಬನ ಕಣ್ಣು
ಹುಡುಕುತಿದೆ ಹೆಣ್ಣು
'ಮುತ್ತು' ಬಾಮ್ಮ -ಭಾಮಳ ಕರೆ
ಆಹಾ.!! ಮುತ್ತು -ಹೆಸರೇ ಚೆನ್ನ
ಇನ್ನು ಅವಳೇ ನನ್ ಚಿನ್ನ
ಬಂದಳು ಮುತ್ತು
ನಡೆಯಲ್ಲಿತ್ತು ಗತ್ತು ಗೈರತ್ತು
ತಂದಿಟ್ಟಳು ಮುಂದೆ ಉಪ್ಪಿಟ್ಟು
ಅದ್ನೋಡಿ ಅವನ ಮುಖ ಕಪ್ಪಿಟ್ಟು
ಕಣ್ಣೆತ್ತಿ ಅವಳೊಮ್ಮೆ ನೋಡಿ
ಮನದಲಿ ದಿಗಿಲು ಮೂಡಿ
ಅಯ್ಯೋ..! ಇವಳೇ ಮುತ್ತು
ನನಗೆ ಬಂತೇ ಆಪತ್ತು
ಹೆಸರು ಅಲ್ಲ ಬರಿ ಮುತ್ತು
ಪೂರ್ತ ಹೆಸರು ಭಾರಿ(ರೀ) ಮುತ್ತು !!
ಅವ್ಳಿಗ್ ಹೆದರಿ -ಬೆದರಿ -ಹೌಹ್ಹಾರಿ
ನಮ್ಸುಬ್ಬ ಕಿತ್ತ ಪೇರಿ
ಕಂಪೌಂಡು ಹಾರಿ
ಹಿಡಿದ ತನ್ ಮನೆ ದಾರಿ..!!
==================
>>> ಭಾರಿ ಮುತ್ತು ಮತ್ತು
......... ಅಣ್ಣ ಅವರ ಕ್ಚಮೆ ಕೋರಿ...:()))
ಚಿತ್ರ ಮೂಲ:
terrymarotta.files.wordpress.com/2011/06/running-scared.png
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹಳೆಯ ಬರಹದ ಪ್ರಸ್ತುತತೆ ...ಆ ಒಂದು ಭಯಾನಕ ಅನುಭವ ..!
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -2)
ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -1)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)