ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।
ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥
ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ ದುಃಖ ಹೀಗೆ ಕಷಟಗಳಿಂದ ಕೂಡಿರುವ ಐಶ್ವರ್ಯಕ್ಕೆ ಧಿಕ್ಕಾರವಿರಲಿ. ಐಶ್ವರ್ಯವಂತನಿಗಿರುವ ಸುಖಕ್ಕಿಂತ ಬಡವನ ಸುಖವೇ ಅದೆಷ್ಟೋ ಮೇಲು. ಬಡ ತನದಲ್ಲಿ ತೃಪ್ತಿ ಇರುತ್ತದೆ ಸಿರಿತನದಲ್ಲಿ ದುರಾಸೆಗಳಿರುತ್ತವೆ.
ನನ್ನ ಮಾತು:
ನಮ್ಮ ಪೂರ್ವಜರು ತಮ್ಮ ಅನುಭವದ ಮಾತನ್ನೇ ಹೇಳಿದ್ದಾರೆ. ಈ ಸೂಕ್ತಿಯಲ್ಲಿ ಅದೆಷ್ಟು ಸತ್ಯವಿದೆ! ಬಡ ವನಿಗೆ ಆ ದಿನಕ್ಕೆ ಹೊಟ್ಟೆಗೆ ಅನ್ನ ಸಿಕ್ಕಿದರೆ ಸಾಕು, ಇಚ್ಚೆಯಿಂದ ಊಟಮಾಡಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಹಣ ಗಳಿಸುತ್ತಾ ಗಳಿಸುತ್ತಾ ಅದರ ಜೊತೆಗೇ ಭಯ ಕೂಡ ಮನೆಮಾಡುತ್ತದೆ. ಸಂಪಾದಿಸಿದ ಹಣವನ್ನು ರಕ್ಷಣೆ ಮಾಡುವುದು ಬಲು ಕಷ್ಟದ ಮಾತು.ಆದರೆ ಈ ಸಂಪಾದನೆ ಸಮಾಜದಿಂದ ನನಗೆ ಬಂದದ್ದು. ನಾನು ಇದರ ವಿಶ್ವಸ್ತನಷ್ಟೇ ಎಂದು ಯೋಚಿಸಿದಾಗ ಸಂಪತ್ತಿನ ಸದ್ವಿನಿಯೋಗದ ಮಾರ್ಗ ಗೊತ್ತಾಗುತ್ತದೆ. ಭಗವಂತನು ಸಂಪತ್ತನ್ನು ಕೊಟ್ಟಾಗ ತನ್ನ ನಿತ್ಯದ ಬದುಕಿಗೆ ಅಗತ್ಯವಾದಷ್ಟನ್ನು ತಾನು ಇಟ್ಟುಕೊಂಡು ಉಳಿದದ್ದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಅದರಿಂದ ಅವನಿಗೆ ಸಂತೋಷ-ಸಮಾಧಾನಗಳೂ ಲಭ್ಯವಾಗುತ್ತದೆ. ಕಳ್ಳನಿಂದ ತನ್ನ ಸಂಪತ್ತನ್ನು ರಕ್ಷಿಸಬೇಕೆಂಬ ಕೊರಗೂ ತಪ್ಪುತ್ತದೆ.
ವಿತ್ತೇ ತ್ಯಾಗ: ಕ್ಷಮಾ ಶಕ್ತೌ,.............ಸ್ವಭಾವೋಯಮ್ ಮಹಾತ್ಮನಾಮ್||
ಮಹಾತ್ಮರ ಸ್ವಭಾವದ ವರ್ಣನೆ ಮಾಡುತ್ತಾ. ಹಣವಿದ್ದಾಗ ತ್ಯಾಗಮಾಡಬೇಕು, ಶಕ್ತಿ ಇದ್ದಾಗ ಅಶಕ್ತನನ್ನು ಕ್ಷಮಿಸಬೇಕು...........ಎಂದು ಹೇಳಿದೆ. ಭಗವಂತನು ಕೊಟ್ಟಿರುವ ಬುದ್ಧಿ, ಹಣ ಮತ್ತು ದೇಹಬಲವನ್ನು ಸದ್ವಿಚಾರಗಳಿಗೆ ವಿನಿಯೋಗಿಸಿದಾಗ ಅವನು ನಿರಾತಂಕನಾಗಿ ನೆಮ್ಮದಿಯಿಂದ ಇರಬಹುದಲ್ಲವೇ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವೇದಜ್ಞಾನವೆಂದರೆ ಕೇವಲ "ಮಂತ್ರಪಾಠವೇ?
ಈ ದೇಹವು ಭಗವಂತನು ನಿರ್ಮಿಸಿದ ದೇವಾಲಯ
ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)