ಪ್ರತಿ ಹೆಣ್ಣಿಗೂ ತಾಯ್ತನದ ಬಯಕೆ,
ಮಮತೆಯ ಕುಡಿಗಾಗಿ ನೂರಾರು ಹರಕೆ !
ದೇವಾ, ಕನಸು ನನಸಾಗಲೆನಗೆ
ಗಂಡೋ, ಹೆಣ್ಣೋ ಬೇಕೊಂದು ಮಗು ಎನಗೆ !!
ಕನಸು ನನಸಾಗಲೊಂದು ದಿನ
ಕುಣಿದಾಡಿತೆನ್ನ ತನು-ಮನ !
ಜನನ ದತ್ತ ಪಯಣ
ನಡೆಸಿತೆನ್ನ ಗರ್ಭದಲ್ಲಿನ ಭ್ರೂಣ !!
ಸಂತಸದಿ ಮೈಮರೆತೆ ನಾ
ಕಡೆಗಾಣಿಸುತ್ತಾ ವೈದೈಯ ಸಲಹೆಯನ್ನ !
ತಿಂಗಳೊಂಭತ್ತು ತುಂಬುವಾ ಮುನ್ನ
ಕಂಡೆ ನನ್ನ ಕರುಳ ಕುಡಿಯನ್ನ !
ಉಸಿರಾಡದೆ ಆಗಿತ್ತದು ಅಂಗಹೀನ
ಅದ ನೋಡುತ್ತಾ ಛಿದ್ರವಾಯಿತೆನ್ನ ಮನ
ನುಚ್ಚು ನೂರಾಗಿತ್ತು ನನ್ನ ಕನಸು, ಸ್ಥಾನ-ಮಾನ !!
ಬೇಡ ತಂಗಿ ಯಾರಿಗೂ ಈ ಪರಿಸ್ಥಿತಿ
ಅರಿಯೋಣ ನಮ್ಮ ಆರೋಗ್ಯದ ಸ್ಥಿತಿಗತಿ !
ಆಲಿಸೋಣ, ಪಾಲಿಸೋಣ ವೈದ್ಯರ ಕಿವಿ ಮಾತು
ಗರ್ಭ ಧರಿಸುವ ಮುನ್ನ, ಗರ್ಭಿಣಿಯಾದಾಗ
ಪ್ರಸವದ ನಂತರ ಅಷ್ಟೇ ಅಲ್ಲ, ಸದಾ ನಿರಂತರ !!
ಡಾ.ಶಶಿಕಲಾ.ಪಿ.ಕೃಷ್ಣಮೂರ್ತಿ.
ದಾವಣಗೆರೆ.
ಫೋನ್ 9972509785
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)