ಈ ಪುಸ್ತಕದಲ್ಲಿ ನೀವು ಸ್ವಲ್ಪ ಮೋಸ ಹೋಗುವ ಸಾಧ್ಯತೆಗಳಿವೆ . ಇದು ನಿಜಕ್ಕೂ ಅನೇಕ ಕಥಾಸಂಕಲನಗಳ ಸಂಕಲನ . ಒಂದು ಪುಸ್ತಕ ಮುಗಿಯಿತು ಎಂದು ತಿಳಿಯಬಹುದು . ನಂತರ ಒಂದೆರಡು ಖಾಲಿ ಪುಟಗಳ ನಂತರ ಇನ್ನೊಂದು ಶುರುವಾಗುತ್ತದೆ ಆಯಾ ಭಾಗದ ಪರಿವಿಡಿಗಳೂ ಬೇರೆ. ಒಟ್ಟು ೫೬೭ ಪುಟಗಳ ಪುಸ್ತಕ ಎಂಬುದನ್ನು ಮರೆಯಬೇಡಿ.
ಮಾಸ್ತಿಯವರ ಬರವಣಿಗೆಯೇ ಸುಖಕರ . ಏನು ತಿಳಿವಳಿಕೆ , ಏನು ವಿಶಾಲಹೃದಯ , ಏನು ಕರುಣೆ? . ನಾನು ಎಂದೂ ಮರೆಯದ ಅನೇಕ ಕತೆಗಳು ಇಲ್ಲಿವೆ . ಪರಿವಿಡಿಗಳು ೧೨ , ೧೮೦ , ೨೬೪ , ೩೨೭ , ೪೨೬ ಪುಟಗಳಲ್ಲಿವೆ ಎಂಬುದನ್ನು ಮರೆಯದಿರಿ.
ನನ್ನ ಮೆಚ್ಚಿನ ಕತೆಗಳು ಇವು .
೧. ರಂಗಸ್ವಾಮಿಯ ಅವಿವೇಕ
೨. ಬಾದಷಹನ ದಂಡನೆ
೩. ಮಸುಮತ್ತಿ
೪. ಸಾರಿಪುತ್ರನ ಕಡೆಯ ದಿನಗಳು
೫. ಜೋಗ್ಯೊರ ಅಂಜಪ್ಪನ ಕೋಳಿ ಕತೆ
೬. ಮಲೆನಾಡಿನ ಒಂದು ಪಿಶಾಚ - ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ಓದಿ
೭ ಹೇಮಕೂಟದಿಂದ ಬಂದ ಮೇಲೆ
ಎಲ್ಲ ಕತೆಗಳನ್ನು ಓದಿದರೆ ಒಳ್ಳೇದು . ಆದರೆ ಇವನ್ನು ಮಾತ್ರ ಓದಲೇಬೇಕು ಎಂದು ನನ್ನ ಶಿಫಾರ್ಸು! ಈ ಪುಸ್ತಕ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027964" target="_blank" title="ಇಲ್ಲಿದೆ"___ಇಲ್ಲಿದೆ.
ಪ್ರತಿಕ್ರಿಯೆ (2)