ವಿದ್ಯಾರಣ್ಯರ ಶಂಕರ ದಿಗ್ವಿಜಯ

ಹರಿಹರ ಕವಿಗಳ ರಗಳೆಯ ಆಗರ

ರಾಘವಾಂಕನ ಷಟ್ಪದಿ ಸುಂದರ

ಪುರಂದರ ಕನಕರ ಕೀರ್ತನ ಸಾರ

ಶರಣರ ದಾಸರ ಭಕ್ತಿಯ ಪೂರ

ಹರಿಹರ ರಾಘವ ಕನಕ ಪುರಂದರ

ಪಂಪ ರನ್ನ ಜನ್ನ ಬಸವ ಕುಮಾರರ

 ಕನ್ನಡ ನಾಡಿನ ಕವಿಗಳ  ಪ್ರವರ     

ಪಂಪನ ಕಾವ್ಯದ ಕಂಪಿನ ಕನ್ನಡ

ರನ್ನನ ಪದಗಳ ಸುಂದರ ಸ್ಪಂದನ

ಗದುಗಿನ ವೀರನ ಭಾರತ ಕಥನ

ಬಸವನ ಭಕ್ತಿಯ ಸಂಗಮ ವಚನ

ಅಕ್ಕನ ವಚನದ ಭಕ್ತಿಯ ಸಿಂಚನ

ಕನ್ನಡ ಜನಪದ ಜೀವನ ಪಾವನ  

ಕವಿಕುಲ ತಿಲಕರ ಪುಳಕದ ಧಾಮ

ಕನ್ನಡ ಕವಿಕುಲ ಪುಂಗವ ನಾಮ    

ಜನಪದ ಕವಿಗಳ ಪಂಚಮರಾಗ

ಅನುದಿನ ರಂಜಿತ ಜೀವನ ಭೋಗ           

ಸರ್ವಙ್ಞ ಪದಗಳ ಙ್ಞಾನದ ರಾಶಿ

ಕನ್ನಡ ಕವಿಕೋಗಿಲೆಗಳ ಕಾಶಿ

ಹೆಳವನಕಟ್ಟೆಯ ಗಿರಿಯಮ್ಮ ಗೀತೆ

ಹರಿಹರ ಭಕ್ತಿಯ ಸಮರಸ ಗಾಥೆ

ಶಿಶುನಾಳ ಷರೀಫರ ಅವಧೂತ ವಾಣಿ

ಕನ್ನಡ  ಸಂತರ ಭಕ್ತಿರಸ ಪುಷ್ಕರಣಿ   

ಸೊನ್ನಲಾಪುರದ ಶರಣ ಸಿದ್ಧರಾಮ

ಕೆರೆ ಮಂದಿರ ಸೃಷ್ಠಿಯ ಗುಣಧಾಮ

ದಲಿತ ಕವಿಗಳ ಸ್ಖಲಿತದ ಕವನ

ನೋವಿನ ಜೀವನ ಅನುಭವ ಕಥನ

ಜನಪದ ರಂಜಿತ ಉನ್ನತ ಜೀವನ      

ಗಮಕದ ಕಲೆಯ ಸೌರಭ ದವನ

ನವ್ಯ ನವೋದಯ ಕನ್ನಡ ಕವನ

ಕನ್ನಡ ಕವಿಗಳ ಹೆಮ್ಮೆಯ ಸದನ   

ಕಬ್ಬಿಗ ಮುದ್ದಣನ ಕನ್ನಡ ಕಸ್ತೂರಿ

ಹೆಂಡ್ಗುಡಕ ರತ್ನನ್ ಕನ್ನಡ್ ತುತ್ತೂರಿ

ಕನ್ನಡ ಗಂಗೆಯ ಗಂಗಾವತರಣ

ಬೇಂದ್ರೆ ಕವನದ ವಿರಾಟ ದರ್ಶನ

ದಿನಕರ ದೇಸಾಯಿ ದುಂಡಿರಾಜನ

ಚುಟುಕದ ಚಾಟಿಯ ಕನ್ನಡ ಖಜಾನೆ

ಕನ್ನಡ ಕವಿಗಳ ಕಾವ್ಯದ ಕಮ್ಮಟ

ಕನ್ನಡ ನಾಡಿನ ಹಿರಿಮೆಯ ಪ್ರಕಟ