ಲೋಹದ ಮೋಹದ ಮಾಹಿತಿ ಮಲ್ಲರು

ವಿಧವಿಧ ರೀತಿಯ ಯರಕವ ಬಲ್ಲರು

ಕರಗಿಸಿ ಕುಗ್ಗಿಸಿ  ಹಿಗ್ಗಿಸಿ ಬಗ್ಗಿಸಿ

ಮೆರುಗನು ನೀಡುತ ರೂಪವ ಕರುಣಿಸಿ

ಯಾಂತ್ರಿಕ ತಂತ್ರದ ಯಂತ್ರವ ನಿರ್ಮಿಸಿ

ನೀರಲಿ ತೇಲುವ ಮುಳುಗಿಯೆ ಚಲಿಸುವ

ಬಾನಲಿ ಹಾರುವ ಭುವಿಯಲಿ ಓಡುವ

ಬ್ರಹ್ಮನ ಗಮ್ಯದ ವ್ಯೋಮಕೆ ಚಿಮ್ಮುವ

ವಿಸ್ಮಯ ವಾಹನ ನಿರ್ಮಾಣ ನಿಪುಣರು

ಶಬ್ದದನಿಃಶಬ್ದದ ಬೆಳಕಿನ ಬಳುಕಿನ

ತರಂಗಾಂತರಂಗದ ಮರ್ಮವ ಬಲ್ಲರು

ನಮ್ಮಯ ನಾಡು ಹೆಮ್ಮೆಯ ವಿಶ್ವಕರ್ಮರ

ಮಯಾಸುರ ಆರ್ಯಭಟ ಭಾಸ್ಕರ ಕಣಾದರ

ವಿಶ್ವದ ವಿಸ್ಮಯ ವಿದ್ವತ್ತಿನ ತವರು