ದೋಣಿ-ದಿಶೆ
                  - ಲಕ್ಷ್ಮೀಕಾಂತ ಇಟ್ನಾಳ
                               

ಯೋಚನೆಯನು ಬದಲಿಸು
      ಒಲಿಯುವವು ತಾರೆಗಳು

ದೃಷ್ಟಿಯನು ಬದಲಿಸು
      ಕಾಣುವವು ತೋಟಗಳು

ಕಣ್ದೆರೆದೇ ಕಾಣು ಕನಸು
      ಬಿಸಿಲೇ ಬೆಳದಿಂಗಳು

ನಿಂತ ಮನಸದು ಮಲಿನ
     ಹರಿವ ನೀರಂತೆ ಚಲಿಸು

ಅರುಹುವ ವೊದಲು ಜಗಕೆ
    ಇರಲಿ ತನಗೇ ಅರಿಕೆ

ಗುರಿಯೆಡೆಗಿನ  ಪಯಣ
ಅಡೆತಡೆಗಳ   ಚಾರಣ

 ಹುಟ್ಟು ಹಾಕು ಸತತ
 ಗಟ್ಟಿ ಮನಸು  ಸಹಿತ

ಅದೋ ನೋಡು ಗುರಿಯ ಗಮ್ಯ
    ಕಾಣುತಿಹುದು ಕಣ್ಣು ರಮ್ಯ

 ತಿಳಿದು ನೋಡು ನೀತಿಯನ್ನು
ಬದಲಿಸ ಬೇಡ ದೋಣಿಯನ್ನು

     ಬದಲಿಸು ಮಾತ್ರ ದಿಶೆಯನ್ನು
   ಸೇರು ಗುರಿಯ  ದಡವನ್ನು