ನಾವು ಮಾತಾಡಿದೆವು
ಹೊಂಗೆ ನೆರಳಲಿ
ತುಂಗೆ ಮರಳಲಿ
ಕಾಲದ ಪರಿವೆಯಿರದೆ
ಸೂರ್ಯ ಬೆಳಗಿ
ಸೂರ್ಯ ಮುಳುಗಿ
ಕತ್ತಲ ಕಡಲು ಬೋರ್ಗರೆದು
ಆಕಾಶ ನೀರ್ಗರೆದು
ಪುಳಕಿತ ಇಳೆ
ಹಸಿರಾಗುವವರೆಗು
ನಾವು ಮಾತಾಡಿದೆವು.
ಗಡಿಯಾರದ ಮುಳ್ಳುಗಳ ಮುರಿದೆವು
ರವಿಚಂದ್ರರ ನಿಲ್ಲಿಸಿದೆವು
ಹುಟ್ಟು ಸಾವುಗಳ ಜರಿದೆವು
ನಾವು ಮಾತಾಡಿದೆವು!
ಅಷ್ಟು ಕಾಲ ಮಾತಾಡಿದ ನಂತರವೂ
ನಮಗೆ
ಅರ್ಥವಾಗಿದ್ದೆಷ್ಟು ಮತ್ತು ಏನು?
ನನಗೆ ನೀನು
ನಿನಗೆ ನಾನು!
==================
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!