ಸಮಯ ರಾತ್ರಿ 9.೩೦ ಆಗಿತ್ತು.ತುಮಕೂರಿನ ಹತ್ತಿರ ಧಾಬಾ ಒಂದರಲ್ಲಿ ಸ್ವಲ್ಪ ಊಟ ಮಾಡಿ ಮತ್ತೆ ಎಲ್ಲಾರು ಗಾಡಿ ಹತ್ತಿದರು.ಋತು ಮಂಜಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗುಸುಗುಸು ಮಾತುಗಳಾಡುತ್ತಿದ್ದರು.ಮ್ಯಾನೇಜರ್ ಹೇಳಿದ ಮಲಗಿ ಬೆಳಿಗ್ಗೆ ಬೇಗ ಶಾಟ್ ಗೆ ರೆಡಿ ಆಗಬೇಕು.ಇವನಜ್ಜಿ ಬದ್ಕೊಂತಾನೆ ಇರ್ತಾನೆ ಅನ್ನುತ್ತ ಮಂಜಿ ಋತುಗೆ ಮಲಗೋಣ ಕಣೆ ಗುಡ್ ನೈಟ್ ಅಂದು ಇಬ್ಬರು ಒಂದೇ ಹೊದಿಗೆಯನ್ನು ಹೊದ್ದುಕೊಂಡು ಗುಬ್ಬಿಮರಿಗಳ ತರಹ ಮಲಗಿದರು.ಬೆಂಗಳೂರಿನಿಂದ ಗುಲಬರ್ಗಾಗೆ ೧೨ ಗಂಟೆಯ ದೂರ.ಈ ದೂರವನ್ನು ಆದಾಗಲೇ ರಾತ್ರಿ ಆಲಂಗಿಸಿ ಬಿಳ್ಕೊಡುಗೆ ಕೊಟ್ಟಾಗಿತ್ತು.ಸಿಂಧನೂರು ಸುರಪುರ ದಾಟಿ ಗಾಡಿ ಗುಲ್ಬರ್ಗಾ ಕಡೆ ವಾಲಿತ್ತು.ನಸುಕಿನ ೫ ಗಂಟೆಯಾಗಿತ್ತು.ಜೋಮು ಹಿಡಿದ ಕಾಲುಗಳು ಋತುವನ್ನು ಎಬ್ಬಿಸಿತೋ ಅಥವಾ ತನ್ನ ಹೆಗಲ ಮೇಲೆ ಹಾಗೆ ಮಲಗಿದ್ದ ಮಂಜಿಯ ತಲೆ ಭಾರವಾಗಿತ್ತೋ ಗೊತ್ತಿಲ್ಲಾ ಕಣ್ಣಿಗೆ ಅಂಟಿಕೊಂಡಿದ್ದ ರೆಪ್ಪೆಗಳು ಆಗ ತಾನೇ ಉದಯಿಸುತ್ತಿರುವ ಸೂರ್ಯನ ಬೆಳಕಿಗೆ ಡಿಸ್ಟರ್ಬ್ ಆಗಿ ಒಂಚೂರು ಅಲ್ಲಾಡಿದವು.ಅಯ್ಯೋ ಬೆಳಗಾಯ್ತಾ ? ಅಂತ ಮನಸಲ್ಲೇ ಗೊಣಗುತ್ತ ತನ್ನ ಕೈ ಗಡಿಯಾರ ನೋಡ್ತಾಳೆ ಇನ್ನು ೫ ಗಂಟೆ ಆವಾಗಲೇ ಬೆಳಕು ಹರಿತಾ ಇದೆ.ಮಂಜಿ ಏಯ್ ಮಂಜಿ ನಿನ್ನ ತಲೆ ತೆಗಿಯೀ ತುಂಬಾ ಭಾರ ಕಣೆ,ನೋಡಿಲ್ಲಿ ಬೆಳಗಾಗ್ತಾ ಇದೆ.ಏನು ಆವಾಗಲೇ ಬೆಳಗಾಯ್ತ ಹೊಗೆಲ್ಲೇ ನಾನಿನ್ನು ಮಲಗಬೇಕು ಅಂತ ಮತ್ತೆ ಮಲಗಿದಳು ಮಂಜಿ. ಸ್ಪಾಟ್ ಬಾಯ್ ಹೇಳಿದ ಅಕ್ಕಯ್ಯ ಇದು ಉತ್ತರ ಕರ್ನಾಟಕ ಅಲ್ಲವೇ,ಇಲ್ಲೆಲ್ಲಾ ಹಿಂಗೆಯಾ ಬಲ್ ಬೇಗನೆ ಬೆಳಕು ಹರಿಯುತ್ತೆ ..... ಗಾಡಿ ಶೂಟಿಂಗ್ ಲೋಕೆಶನ್ ಅಂದರೆ ಗುಲ್ಬರ್ಗ ನಗರದ ನೂತನ ವಿಧ್ಯಾಲಯದ ಮೈದಾನದ ಕಡೆ ಮುಖ ಮಾಡಿತು.ಚಾ ರೀ ಚಾ ,ಚಾ ಬೇಕೇನ್ರಿ,ಏಳ್ರಿ ಮೇಡಂ ಅವ್ರೆ ಚಾ ತಗೋರಿ . ಮುಂಜಾನಿ ಆಗ್ಯದ್ರಿ. ಟೀ ಮಾರೋ ಹುಡುಗ ಗಾಡಿ ಏರಿ ಎಲ್ಲರಿಗೂ ಟೀ ಕೊಡೋಕೆ ಎಬ್ಬಿಸ್ತಾ ಇದ್ದ.ಋತು ಹಾಗು ಮಂಜಿ ಈ ಚಾ ಅಂದ್ರ ಏನು ಅಂತ ಒಬ್ಬರ ಮುಖ ಒಬ್ಬರು ನೋಡ್ಕೊಂತಾನೆ ಎದ್ದರು.ಆಮೇಲೆ ಗೊತ್ತಾಗಿದ್ದು ಚಾ ಅಂದ್ರೆ ಟೀ ಅಂತ.
ಹೀಗೆ ಗುಲ್ಬರ್ಗಾ ಬಂದ ದಿನಾನೆ ಋತು ರಗಳೆ ಶುರು ಇಟ್ಕೊಂದಿದ್ಲು.ಶೂಟಿಂಗ್ ತಂಡದಲ್ಲಿ ಸುಮಾರು ಮೂವತ್ತು ಜನ ಇದ್ದರು.ಗುಲ್ಬರ್ಗದಲ್ಲಿ ೨-೩ ಲೋಕೇಶನ್ ಅಲ್ಲಿ ಸಾಂಗ್ ಶೂಟಿಂಗ್ ಮಾಡೋ ಪ್ಲಾನ್ ಇತ್ತು.ಮೊದಲು ಎಲ್ಲರು ಗುಲ್ಬರ್ಗಾದ ಪ್ರಸಿದ್ಧವಾದ ಎನ್.ವಿ. ಮೈದಾನದಲ್ಲಿ ಬಿಡಾರ ಹೂಡಬೇಕಿತ್ತು.ಏಕೆಂದರೆ ಅದು ವಿಶಾಲವಾಗಿತ್ತು ಹಾಗು ಈ ಫಿಲಂ ಗೆ ಪ್ರಚಾರ ಕೂಡ ಬೇಕಿತ್ತು.ಹೀಗಾಗಿ ನಗರದ ಮದ್ಯೆ ಇರುವ ಜಾಗನೆ ಹುಡುಕಿದರು ತಂಡದವರು.ಕಾರಣ ಕಾಲೇಜ್ ವಿದ್ಯಾರ್ಥಿಗಳು ಶೂಟಿಂಗ್ ನೋಡಲು ಬಂದೆ ಬರುತ್ತಾರೆ ಹಾಗು ಉಚಿತವಾದ ಪ್ರಚಾರ ಸಿಗುತ್ತದೆ ಎಂದು.ಹಿರೋ ಮತ್ತು ಹಿರೋಯಿನ್ ಹತ್ತು ಗಂತೆವೆರಾಗ ಬರ್ತಾರೆ ನೀವೆಲ್ಲ ನಿಮ್ಮ ಕಾಸ್ಟ್ಯುಂ ರೆಡಿ ಮಾಡ್ಕೊಳ್ಳಿ ಅಂದ ಮ್ಯಾನೇಜರ.
ಗುಲ್ಬರ್ಗ ಎನ್.ವಿ ಗ್ರೌಂಡ್ ಅಲ್ಲಿ ಶೂಟಿಂಗ್ ಅಂತ ಪತ್ರಿಕೆಯವರು ಅದಾಗಲೇ ಪ್ರಕಟಿಸಿದ್ದರು.ಹೀಗಾಗಿ ಬೆಳಿಗ್ಗೆ ಒಂಬತ್ತು ಗಂಟೆಗೆಲ್ಲ ಜನ ಜಂಗುಳಿ ಸೇರಿತ್ತು.ಋತು ಹಾಗು ಮಂಜಿ ತಮ್ಮಕಾಸ್ಟ್ಯುಂ ಹಾಕಿಕೊಂಡು ಡಾನ್ಸ್ ಮಾಸ್ಟರ್ ಹತ್ರ ಹೋದರು,ಮಾಸ್ಟರ್ ಅವರಿಗೆಲ್ಲ ಸ್ಟೆಪ್ಸ್ ಹೇಳಿಕೊಡ್ತ
ಇದ್ದರು.ಅಲ್ಲಿ ಸಾಕಷ್ಟು ಜನ ಹೀರೋ ಹಿರೋಯಿನ್ ಅವರನ್ನ ನೋಡಲು ಬಂದಿದ್ದರು.ಋತು ಹಾಗು ಮಂಜಿ ತಮ್ಮಕಾಸ್ಟ್ಯುಂ ಹಾಕಿಕೊಂಡು ಡಾನ್ಸ್ ಮಾಸ್ಟರ್ ಹತ್ರ ಹೋದರು,ಮಾಸ್ಟರ್ ಅವರಿಗೆಲ್ಲ ಸ್ಟೆಪ್ಸ್ ಹೇಳಿಕೊಡ್ತ ಇದ್ದರು.ಅಲ್ಲಿ ಬಂದಿದ್ದ ಜನರೆಲ್ಲಾ ಹಿರೋ ಹಿರೋಯಿನ್ ನೋಡಲಿಕ್ಕೆ ಬಂದಿದ್ದರು.ಈ ಕಡೆ ಋತು ಮಂಜಿ ಮತ್ತು ತಂಡ ಡಾನ್ಸ್ ಪ್ರಾಕ್ಟಿಸ್ ಮಾಡ್ತಿದ್ದರು.ಅಂದು ಪ್ರೀತಿ ಹನಿಗಳು ಎಂಬ ಹಾಡಿಗೆ ಡಾನ್ಸ್ ನಡೀತಾ ಇತ್ತು.ಋತು ಬಿಳಿ ಬಣ್ಣದ ಚೂಡಿದಾರ ,ತಲೆಗೊಂದು ಬಿಳಿ ಬಣ್ಣದ ಬಟ್ಟೆ ಸುತ್ತಿಕೊಂಡು,ಡ್ರೆಸ್ ಗೆ ಸುತ್ತ ಮುತ್ತ ಕೇಸರಿ ಬಣ್ಣದ ಮಿಂಚು ಮಿಂಚಾದ ಡಿಸೈನ್ ಅಲ್ಲಲ್ಲಿ ಸೆಟ್ ಮಾಡ್ಕೊಂಡು ಓಡಾಡುತಿದ್ದಳು.ಕಂದು ಬಣ್ಣದ ಬಳೆಗಳು ಅವಳ ಕೈಗಳ ಅಂದ ಇಮ್ಮಡಿ ಮಾಡುತಿದ್ದವು.ಕನ್ನಡಿಯಲ್ಲಿ ತನ್ನ ಮೃದುವಾದ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ಹಿಂದೆ ಯಾರೋ ತನ್ನನ್ನೇ ನೋಡುತಿದ್ದಾರೆ ಎಂಬುದನ್ನ ಗಮನಿಸಿದಳು.ಹಿಂದೆ ತಿರುಗಿ ನೋಡುವಷ್ಟರಲ್ಲಿ ಆ ಮುಖ ತನ್ನೆದುರಿಗೆ ಬಂದು ಆಟೋಗ್ರಾಫ್ ಪ್ಲೀಸ್ ಅನ್ನುವ ಶಬ್ದ.ಎಲ್ಲರು ಹಿಂದೆ ತಿರುಗಿ ನೋಡಿ ಹಿರೋಯಿನ್ ಅವಳಲ್ಲ ಮಾರಾಯ,ನೀವು ಆಮೇಲೆ ಬನ್ನಿ ಎಂದು ಕಳುಹಿಸಿದರು.ಋತು ಮಂಜಿನ ನೋಡಿ ಯಾರೋ ಹುಡುಗ ನನ್ನ ಹಿರೋಯಿನ್ ಅಂತ ತಿಳ್ಕೊಂಡು ಆಟೋಗ್ರಾಫ್ ಕೇಳ್ತಾ ಇದಾನೆ ಕಣೆ ಪಾಪ,ಕೊಡಬೇಕಾಗಿತ್ತು ಅಂದ್ಲು ಮಂಜಿ.ಅದೆಂಗೆ ಆಮೇಲೆ ಅವನಿಗೆ ನಾನು ಡಾನ್ಸ್ ಮಾಡೋಳು ಅಂತ ಗೊತಾದರೆ ಬೇಜಾರು ಮಾಡ್ಕೋತಾನೆ ಅದಕ್ಕೆ ನಾನೇನು ಮಾತಾಡಲೇ ಇಲ್ಲ.ಈ ಕಡೆ ಹುಡುಗ ಕೈಯಲ್ಲಿರೋ ಪೆನ್ನು ಹಾಗು ಹಾಳೆನಾ ಹಾಗೆ ಎದೆಗೆ ಹಚ್ಚಿಕೊಂಡು ಹಾಗೆ ರುತುನಾ ನೋಡ್ಕೊಂಡೆ ಹೋದ.
ಮುಂದುವರೆಯುವುದು....
ಪ್ರತಿಕ್ರಿಯೆ (1)