ಹಂಪೆಯ ಶಿಲ್ಪದ ಸುಂದರ ಸ್ವಾದ
ಕಲ್ಲಿನ ಕಂಭದ ಸರಿಗಮ ನಾದ
ಪಂಪಾತೀರದ ಹಂಪೆಯ ವೈಭವ
ಕನ್ನಡಿಗರ ಮೈನವಿರಿನ ಅನುಭವ
ಹಂಪೆಯ ಅರಸರ ದಸರಾ ದಿಬ್ಬ
ಕಲ್ಲಿನ ರಥವದು ಕಣ್ಣಿಗೆ ಹಬ್ಬ
ಶ್ರವಣಬೆಳಗೊಳ ಭವ್ಯದ ಗೊಮ್ಮಟ
ಬಿಜಾಪುರದಲಿ ಭರ್ಝರಿ ಗುಮ್ಮಟ
ಕಲ್ಲಿನ ಗುಹೆಗಳ ವಿಸ್ಮಯ ಬಾದಾಮಿ
ಪಟ್ಟದಕಲ್ಲಿನ ಸುಂದರ ಶಿಲ್ಪದ
ಕಲೆಗಳ ಅಲೆಯಲಿ ತೇಲುವ ತಾಣ
ಹನುಮನ ಜನುಮದ ಕನ್ನಡ ನಾಡು
ಮಹಿಷನ ವಧಿಸಿದ ಚಾಮುಂಡಿಯ ಬೀಡು
ಜೈನರ ಬೌದ್ಧರ ಶರಣರ ಸಿದ್ಧರ
ಶಂಕರ ಮಧ್ವರ ಧರ್ಮದ ಜಾಡು
ಕಲ್ಯಾಣ ಕ್ರಾಂತಿಯ ಮರ್ಮದ ಬೇರು
ಬಸವಾದಿ ಶರಣರ ಬಲ್ಮೆಯ ತವರು
ಸಹ್ಯಾದ್ರಿ ಶ್ರೇಣಿಯ ಹಸಿರಿನ ಕಾಡು
ಶ್ರೀಗಂಧ ಬೆಳೆಯುವ ಪುಣ್ಯದ ನಾಡು
ಸುಂದರ ಸೊಬಗಿನ ಪ್ರಕೃತಿಯ ಬೀಡು
ಕ್ರಿಷ್ಣೆಯ ಕೊಳ್ಳವೆ ಧಾನ್ಯದ ಬಳ್ಳವು
ತುಂಗೆಯ ನೀರಿನ ಸ್ವಾದದ ಪುಣ್ಯವು
ಭದ್ರೆಯ ಹರವು ಹಸಿರಿನ ಹಂದರ
ತುಂಗಭದ್ರೆಯ ಮಡಿಲು ಅಕ್ಕಿಯ ಕಣಜ
ಕಾವೇರಿ ಕೊಳ್ಳದ ಸಕ್ಕರೆ ಬೆಲ್ಲ
ನಮ್ಮಯ ನದಿಗಳ ದೈವಿಕ ಪಥಕ
ಹೆಮ್ಮೆಯ ಜೀವನ ಜೈವಿಕ ಉದಕ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!