ನನ್ನ ಯಾಹೂ ಮೇಲ್ ಬಾಕ್ಸ್ ನಲ್ಲಿ ಕಾಣಿಸಿ ಕೊಂಡ ಮೇಲು. ಇಂಥ ರೈಲು ಬಿಡುವ ಮೇಲುಗಳ ಬಗ್ಗೆ ಎಚ್ಚರ ದಿಂದಿರಿ. ಈ ಮೇಲನ್ನು ಹೆಚ್ಚಾಗಿ ನೈಜೀರಿಯಾದ ಖದೀಮರು ಕಳಿಸುತ್ತಾರೆ.

ಡಿಯರ್ ಯಾಹೂ ಚಾಟ್ ಮೆಂಬರ್,

ಯಾಹೂ ಚಾಟ್ ನ ನಿಗಾ ಕೇಂದ್ರ ಪ್ರತೀ ದಿನ ಚಾಟ್ ರೂಂ ಗಳಲ್ಲಿ ಭಾಗವಹಿಸುವವರ ಭಾಷೆ, ವರ್ತನೆಯನ್ನ ಗಮನಿಸುತ್ತಿದ್ದು, ನೀವು ಇದುವರೆಗೆ ಅತ್ಯಂತ ಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ತಮಗೆ ನಮ್ಮ ನಿಗಾ ಕೇಂದ್ರದ ವತಿಯಿಂದ "ನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ" ಅಮೇರಿಕನ್ ಡಾಲರುಗಳ ಪುರಸ್ಕಾರ ಪ್ರದಾನ ಮಾಡಲಾಗಿದೆ. ತಮ್ಮ ಚೆಕ್ ಪಡೆಯಲು ಈ ಕೆಳ ಕಂಡ ವಿಳಾಸವನ್ನ ಸಂಪರ್ಕಿಸಿ. ತಮ್ಮ ಉತ್ತಮ ನಡತೆಗೆ ನಮ್ಮ ವಂದನೆಗಳು.

 

 

Contact Person: Mr. Austin Onye

Email: [email protected]
Telephone: +2348034161082