ತಾಯಿ ಮಗುವಿಗೆ ಕೊಡುವ ಮೊದಲ ಮುತ್ತು

ಸತಿಗೆ ಪತಿ ಕೊಡುವ ಮೊದಲ ಮುತ್ತು
ಪ್ರಿಯತಮನಿಗೆ ಪ್ರಿಯತಮೆ ಕೊಡುವ ಮೊದಲ ಮುತ್ತು


ಮಗಳಿಗೆ ತಂದೆ ಕೊಡುವ ಆಸರೆಯ ಮುತ್ತು
ಅಕ್ಕಳಿಗೆ ತಂಗಿ ಕೊಡುವ ಸಂತೋಷದ ಮುತ್ತು
ತಂಗಿಗೆ ಅಣ್ಣ ಕೊಡುವ ಭರವಸೆಯ ಮುತ್ತು


ಗೆಳತಿಗೆ ಗೆಳೆಯ ಕೊಡುವ ವಿಶ್ವಾಸದ ಮುತ್ತು
ವಿಜೇತರು ಪ್ರಶಸ್ತಿಗೆ ಕೊಡುವ ಗೆಲುವಿನ ಮುತ್ತು
ಮುತ್ತಿಗೆ ಮುತ್ತೇ ಸಾಟಿ


ನೆನಪಿರಲಿ ಸವಿಯಲು ಆ ಮೊದಲ ಮುತ್ತು
ನೆನಪಾದರೆ ಖಂಡಿತ ಹೆಮ್ಮೆಯ ಗತ್ತು