ಕೆಳಗೆ ಕೊಟ್ಟಿರುವ ಕೊಂಡಿಯನ್ನ್ನು ಜಗ್ಗಿದರೆ,  ನಮ್ಮ ಪೂಜೆಯ  ವಿಧಿವಿಧಾನಗಳನ್ನು ಕೇಳಬಹುದು : ನಾನು ನನ್ನ ಬಳಿಯಲ್ಲಿದ ಪುಟ್ಟ 'ವಾಯ್ಸ್ ರೆಕಾರ್ಡರ್,' ನಲ್ಲಿ ಆ ಧ್ವನಿಯನ್ನೂ ಸೆರೆಹಿಡಿದೆ :  ಬಹಳ ದೊಡ್ದ ಫೈಲ್ ಆಗಿರುವುದರಿಂದ ಅಪ್ಲೋಡ್ ಆಗಲಿಲ್ಲ.

https://mail.google.com/mail/u/0/?hl=en&shva=1#sent/13a14c3f69c852c6

ನಮಗೆ ಕೆನಡಾದ 'ಟೊರಾಂಟೋನಗರ'ದಲ್ಲಿ  ಅತ್ಯಂತ ಮುದಕೊಟ್ಟ ಸ್ಥಳವೆಂದರೆ, 'ಶ್ರೀ. ಸ್ವಾಮಿನಾರಾಯಣ ದೇವಸ್ಥಾನ'. ಪ್ರಕಾಶನಿಗೆ ಇಲ್ಲಿಗೆ ಬರಲು ಸಾಧ್ಯವಾಗದೆ ಹೋಯಿತು. ಆಫೀಸ್ ಕೆಲಸದವತಿಯಿಂದ. ನಾವೇ ಅವನು ತಿಳಿಸಿದ ಪ್ರಕಾರ, 'ಸ್ಟ್ರೀಟ್ ಕಾರ್', ಮತ್ತು ಬಸ್ಸಿನಲ್ಲಿ ಪ್ರಯಾಣಿಸಿ, 'ಸ್ವಾಮಿನಾರಾಯಣ ಮಂದಿರ'ವನ್ನು ತಲುಪಿದೆವು. ಅಲ್ಲಿ 'ಸ್ವಾಮಿನಾರಾಯಣ ದೈವ ಪರಂಪರೆಯಲ್ಲಿ,  'ನೀಲಕಂಠವರ್ಣಿ'ಯೆಂಬ ದೈವಸಂಭೂತನಿಗೆ ಅಭಿಷೇಕ ಮಾಡಿಸಿದೆವು. ಅಲ್ಲಿ ಮರಾಥಿ, ಹಿಂದಿ, ಗುಜರಾತಿ, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅರ್ಚಕ, 'ಕಾಂತಿ ಭಾಯಿ'ಯವರು ಮಾಡಿಸುತ್ತಿದ್ದರು. ಅವರು 'ಇಂಗ್ಲೀಷ್' ನಲ್ಲಿ ಮಾಡಿಸಿದರೆ ಉತ್ತಮವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನನಗೂ ಇಂಗ್ಲಿಷ್ ಭಾಷೆಯಲ್ಲಿ ಹೇಗೆ ಮಾಡಿಸುತ್ತಾರೆ ನೋಡೋಣ ಎನ್ನಿಸಿತು. ತಕ್ಷಣ ಅವರ ಅರ್ಚನಾ ಮಂತ್ರದ ಧ್ವನಿಯನ್ನು ನನ್ನ ಪುಟ್ಟ ರೆಕಾರ್ಡರ್ ನಲ್ಲಿ ಧ್ವನಿಮುದ್ರಿಸಿಕೊಂಡೆನು. ಅದೇನೋ ಈ ಸನ್ನಿವೇಶ ನನ್ನ ಜೀವನದಲ್ಲಿ ಒಂದು ಮರೆಯಲಾರದ ಕ್ಷಣಗಳಲ್ಲೊಂದು ಅನ್ನಿಸಿದೆ. ಈ ಅರ್ಚಕ,  ಕೆನಡಾದಲ್ಲಿ ಹುಟ್ಟಿ ತನ್ನ ಜೀವನವನ್ನೆಲ್ಲ ಅಲ್ಲೇ ಕಳೆದನಂತೆ. ಆತನಿಗೆ ಭಾರತಕ್ಕೆ ಬರುವ ಆಶೆ. ಆದರೆ ಆ ಭಾಗ್ಯ ಇನ್ನೂ 

ತನಗೆ ಸಾಧ್ಯವಾಗಿಲ್ಲ ಎನ್ನುವ ವಿಷಯ ಹೇಳುವಾಗ ಆತನ ಕಣ್ಣಂಚಿನಲ್ಲಿ ನೀರು ಬಂದಿತ್ತು. ಅದೊಂದು ಅತ್ಯಂತ ಸುಂದರ ಹಾಗು ಭಾವುಕ ಕ್ಷಣವಾಗಿತ್ತು !

Photo

Image (69).jpg      

ದೇವಸ್ಥಾನಗಳು ಎಲ್ಲೇ ಇರಲಿ, ಭಾರತೀಯರಾದ  ನಾವು,  ಅರ್ಚನೆ ಮಾಡಿಸಿಯೇ ತೀರುತ್ತೇವೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದು ಬಹುಶಃ ನಮಗೆ ಅರಿವಿಲ್ಲದಂತೆಯೇ ನಮ್ಮ ಮನಸ್ಸಿನಲ್ಲಿ ಮುದ್ರಿತವಾಗಿದೆ ! ಇದೂ ಒಂದು ಕಾರಣವಿರಬಹುದೇ !?

ನೀಲಕಂಠವರ್ಣಿ (ಸ್ವಾಮಿನಾರಾಯಣ್) ರವರ ಪುಥಳಿಗೆ ಅಭಿಷೇಕ ಸೇವೆ :

ವಿಶ್ವದಾದ್ಯಂತ, ನಿರ್ಮಿಸಿರುವ ಅತ್ಯಾಕರ್ಷಕ ಪ್ರೇಕ್ಷಣೀಯ ಮಂದಿರಗಳಲ್ಲಿ ಭಾರತದ ಹೊಸ ದೆಹಲಿಯ ಸ್ವಾಮಿನಾರಾಯಣ ಮಂದಿರ ಅಗ್ರಸ್ಥಾನವನ್ನುಗಳಿಸಿದೆ.ಈ ಮಂದಿರಗಳ ವಿನ್ಯಾಸ ಕೆತ್ತನೆಯ ಶೈಲಿ, ಅಚ್ಚ ಹಸುರಿನ ಪರಿಸರ ಚಿತ್ತಾಕರ್ಷಕ ನೀರಿನಕಾರಂಜಿಗಳು, ವಿಶಾಲ ಹುಲ್ಲಿನ ಉದ್ಯಾನಗಳು, ವಿಶಾಲವಾದಪ್ರಾಂಗಣ ಗಳಿಂದ ಒಳ ಆವರಣ ಪೂರ್ಣ ಸ್ವಾಮಿನಾರಾಯಣ ಭಗವಾನ್, ಅಕ್ಷರಬ್ರಹ್ಮ, ಹರಿಕೃಷ್ಣ ಮಹಾರಾಜ್, ಬಾಲಾಜಿ ಪದ್ಮಾವತಿ,ಶಿವಪಾರ್ವತಿ, ರಾಧಾಕೃಷ್ಣ, ವಿಗ್ರಹಗಳು, ಇವುಗಳೊಂದಿಗೆ ನೀಲಕಂಠಿ ವರ್ಣಿಯವರ ಅಭಿಷೇಕ ಮಂಟಪವಿದೆ. ಇದೇ ತರಹದ ವಿನ್ಯಾಸವನ್ನು ನಾವು ಟೊರಾಂಟೋನಗರದ ಸ್ವಾಮಿನಾರಾಯಣ ಮಂದಿರದಲ್ಲೂ ಕಂಡೆವು. ಸಂಪೂರ್ಣ ಮಂದಿರ ಇಟಲಿದೇಶದಿಂದ ತರಿಸಿದ  ಹಾಲು ಬಿಳುಪಿನ ಕಲ್ಲಿನಲ್ಲಿ ನಿರ್ಮಿತವಾಗಿದೆ. ಚಂದ್ರನ ಬೆಳಕಿನಲ್ಲಿ ಅಧ್ಬುತವಾಗಿ ಕಾಣಿಸುತ್ತದೆ.
 
ಬಾಲಕ ಸ್ವಾಮಿನಾರಾಯಣರು, ಬಾಲ್ಯದಲ್ಲಿ  'ನೀಲಕಂಠ ವರ್ಣಿ'ಯೆಂಬ ಹೆಸರಿನಿಂದ ತಮ್ಮ ೧೧ ನೆಯ ವಯಸ್ಸಿನಲ್ಲಿಯೇ ವಿರಾಗಿಯಾದರು. ಭಾರತಪರ್ಯಂತ ಕಾಲುನಡಿಗೆಯಲ್ಲೇ  ಯಾತ್ರೆನಡೆಸಿದರು. ಧಾರ್ಮಿಕ, ಅಧ್ಯಾತ್ಮಿಕ ಚಿಂತನೆಗಳು, ಭಕ್ತಿ, ಅಹಿಂಸೆ, ಶಾಂತಿ ಪ್ರತಿಪಾದನೆಯಲ್ಲಿ ಅತ್ಯಂತ ಶ್ರಮವಹಿಸಿ ತಮ್ಮ ಜೀವನದ ಸಮಯವನ್ನೆಲ್ಲಾ ಮಾನವ ಕಲ್ಯಾಣಕ್ಕೆ ದುಡಿದರು. ನೀಲಕಂಠವರ್ಣಿಯವರ ಚಿಂತನೆಗಳ ಪ್ರಸಾರ, ಹಾಗೂ ಭಾರತದಾದ್ಯಂತ ಮಾಡಿದ ಪಾದಯಾತ್ರೆಯ ಸ್ಮರಣಾರ್ಥವಾಗಿ ದೇಶವಿದೇಶಗಳಲ್ಲೆಲ್ಲಾ ಸ್ವಾಮಿನಾರಾಯಣ ಮಂದಿರಗಳನ್ನು ನಿರ್ಮಿಸಲಾಗಿದೆ. ವಿಶಿಷ್ಠರೀತಿಯ ಅಭಿಷೇಕ ಮೂರ್ತಿಯೊಂದನ್ನು ವೇದೋಕ್ತ ರೀತಿಯಲ್ಲಿ ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ನಿತ್ಯ ಪೂಜೆ, ಅಭಿಷೇಕ ಸತತವಾಗಿ ನಡೆಯುತ್ತಿದೆ.  ಅರ್ಚನೆ, ಸತ್ಸಂಗ್ ಗಳು  ಆಯಾಯ ಪ್ರದೇಶಗಳ ಅನುಕೂಲಕ್ಕೆ ತಕ್ಕಂತೆ  ಜರುಗುತ್ತವೆ. 
ಮತ್ತೊಂದು ವಿಷಯವೆಂದರೆ, 'ಟೊರಾಂಟೋನಗರ'ದ ಕೆಲವು ಜನ, ಮತ್ತು ಅಮೇರಿಕಾದಲ್ಲಿ ನಾವು ಹಿಂದೆ ಜನರನ್ನು ವಿಚಾರಿಸಿದಾಗ ಕಂಡುಬರುವ ವಿಷವೆಂದರೆ, ಹೆಚ್ಚಿನ ಜನ ಭಾರತಕ್ಕೆ ಭೆಟ್ಟಿ ನೀಡಿಲ್ಲ. ಅವರೆಲ್ಲ 'ಭಾರತದ ಬೇರು'ಗಳನ್ನು ಹೊಂದಿದ್ದಾರೆ. 'ಗಯಾನ', 'ವೆಸ್ಟ್ ಇಂಡಿಸ್', ಮೊದಲಾದ ಪ್ರದೇಶಗಳಿಂದ ಬಂದ ಜನ ಅದೆಷ್ಟೋ ವರ್ಷ ಭಾರತಕ್ಕೆ ಹೋಗೆಇಲ್ಲ. ಇನ್ನು ಕೆಲವರು ಭಾರತದ ಸೈನಿಕರು, ಇಂಗ್ಲೆಂಡ್ ಗೆ 'ವಿಕ್ಟೋರಿಯಾ ರಾಣಿಯ ಗೋಲ್ದನ್ ಜ್ಯುಬಿಲಿ ಸಮಾರಂಭ,' ಕ್ಕೆ ಹೋದವರು, ವಾಪಸ್ ಭಾರತಕ್ಕೆ ಬರದೆ ಕೆನಡಾದಲ್ಲಿ ನೆಲೆಸಿದ್ದಾರೆ. ಬ್ರಿಟಿಷ್ ಸರಕಾರ ಅವರಿಗೆ ಜಮೀನು, ಮತ್ತು ಮನೆಗಳನ್ನು ಅತಿ ಸೋವಿಯಾಗಿ ಕೊಟ್ಟು ಅವರನ್ನು ತಮ್ಮ ಕೈಲಿ ಇಟ್ಟುಕೊಂಡರು. ಈಗ ಅವರೆಲ್ಲ 'ಬಿಲಿಯನೇರ್' ಆಗಿ ಹಲವಾರು 'ಮಾಲ್ ಗಳ ಮಾಲೀಕ'ರಾಗಿದ್ದಾರೆ. ಅತಿ ಶ್ರೀಮಂತ ವರ್ಗದ ಜನರವರು !