ನಂಬಿದೆ ಜಗದಂಬೆ ನಿನ್ನನು
ನಂಬಿದೆ ಜಗದಂಬೆ ನಿನ್ನನು |
ಹೇ ಶಂಭು ಸತಿಯೇ |
ನಂಬಿದೆ ಜಗದಂಬೆ ನಿನ್ನನು ||ಪ||
ಹೇಳಲೆಂತು ನಿನ್ನ ಮಹಿಮೆಯ |
ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ ||
ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡು |
ಕಾಳಿಯಾಗಿ ಯಮಳರನ್ನು ತರಿದ ಶೌರ್ಯ ದೇವಿ ನೀನು ||೧||
ಮಹಿಷ ದಾನವೆಂದ್ರ ತಾಪವ |
ಸಹಿಸದಾದ ಘೋರ ತರದ ನಿನ್ನ ಕೋಪವ ||
ಅಹಮು ಮಮಗಳೆಂಬ ಭಾವ ಕಾಮ ಕ್ರೋಧ ಲೋಭ ಮೋಹ |
ಧಹನ ಗೈವ ಮಹಿಮಳಾದ ನೀನು ಮರೆಸು ಜಗದ ನೋವ ||೨||
ಚಂಡ ಮುಂಡ ರೆಂಬ ಭಂಡರ |
ರುಂಡ ಮಾಲೆ ಧರಿಸಿ ನೀನು ಕೊಂದೆ ಪುಂಡರ ||
ಚಂಡಿಯಾಗಿ ಆರ್ತಮೊರೆಗೆ ಮೂಲರಾದ ದೈತ್ಯರನ್ನು |
ಕಂಡು ಬಡಿದು ನಾಶಮಾಡಿ ಸಾತ್ವಿಕರನು ಕಾಯುವವಳೇ ||೩||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!