ನಮ್ಮ ಮನೆ ನಾಯಿ, ಜಿಮ್ಮಿ. ಅಮ್ಮನ ಮುದ್ದಿನ ಗೆಳೆಯ. ಆವಳೆ ಹೆಚ್ಚು ಸಮಯ ಕಳೆಯೋದು ಅದರ ಜೊತೆ. ಜಿಮ್ಮಿ, ಅವಳ ಮಾತು ಯಾವಗಲು ಕೇಳುತ್ತಾನೆ ಮತ್ತು ಹೆಚ್ಚು ಪ್ರೀತಿ . ಆವನು ಹೆಚ್ಚು ಸೋಮಾರಿಯೆನಲ್ಲ, ಅದರೆ ಅವನದು ಆರಾಮದ ಜೀವೆನ. ನನಗೆ ಅವನ ಮೇಲೆ ಕೊಂಚ ಹೊಟ್ಟೆಕಿಚ್ಚು. ಈ ಕವನದ ಸ್ಪೂರ್ತಿ ಜಿಮ್ಮಿ . ಅಮ್ಮ ಮತ್ತು ಜಿಮ್ಮಿಗೆ ಈ ಕವನ ಅರ್ಪಿಸುತ್ತ..
ಜಿಮ್ಮಿ, ನಿನಗೇನು ಕಮ್ಮಿ?
ಕಣ್ಣು ಮುಚ್ಚಿ, ನಿದ್ದೆ ಹಚ್ಚಿ
ಮೈ ಮುರಿದು, ಮೂಳೆ ಕಡಿದು
ಗೆಳೆಯ ಬಳಗ ಕೂಡಿ-ಆಡಿ
ಊರ ಕೇರಿಯಲ್ಲಿ ತಿರುಗಿ
ತಿಂದ ಅನ್ನ ಅರಗಿ
ಮನೆಯ ಮುಂದು, ಬಂದು ಬೊಗಳಿ
ಅಮ್ಮ ನಿನ್ನ ಹೊಗಳಿ..ಹೊಗಳಿ
ಹಾಲನೆರೆದು, ಸೇವೆ ಮಾಡಿ
ನೀ ಗೋಡೆ ಒರಗಿ, ಅಲ್ಲೆ ಮಲಗಿ
ಸುಖದ ನಿದ್ದೆಯಲ್ಲಿ ತೇಲಿ
ಮೆರೆವ ಜಿಮ್ಮಿ, ನಿನಗೇನು ಕಮ್ಮಿ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!