ಹೇಗಿದೆ ದೀಪಾವಳಿ ಹಬ್ಬ
ಸಜ್ಜನ ಬಂಧುಗಳೇ ನೀವೆನ್ನಿರಿ
ಹೇಗಿದೆ ದೀಪಾವಳಿ ಹಬ್ಬ ||
ಹಚ್ಚಿದ ದೀಪಗಳೆಲ್ಲವು ಬೆಳಗಲಿ
ಎನ್ನುವವರಲಿ ನಾನೊಬ್ಬ ||ಪ||
ತೈಲಭ್ಯಂಗದ ನರಕ ಚತುರ್ದಶಿ
ಊಟಕೆ ಬೂರೆಯ ಕಡುಬಿರಲಿ ||
ಮನಮೆಚ್ಚಿನ ಸೊಸೆ ಅಳಿಯರ ಜೊತೆಯಲಿ
ಮನೆತನವೆಂಬುದು ತುಂಬಿರಲಿ ||೧||
ಧನಲಕ್ಷ್ಮಿಯ ಪೂಜೆಯು ಅಮಾವಾಸ್ಯೆಯ
ಮುಸ್ಸಂಜೆಗೆ ಅದ ಮರೆಯದಿರಿ ||
ಜಣ ಜಣ ಸದ್ದಿನ ಕಾಲಂದುಗೆಗಳ
ನಿನದವು ಸಂತತ ಮೆರೆದಿರಲಿ ||೨||
ಬಲಿಪಾಡ್ಯಮಿ ಶುಭ ದಿವಸದ ಹೋಳಿಗೆ
ರುಚಿ ಕಟ್ಟಲಿ ದೀಪಾವಳಿಗೆ ||
ಸಂಜೆಗೆ ಬೆಳಗಿದ ದೀಪದ ಸಾಲಿಗೆ
ನಳನಳಿಸಲಿ ಸಂಭ್ರಮ ಘಳಿಗೆ ||೩||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂವಿಮಾನ ಯಾನ
ನಾವಿದ್ದೇವೆ
ಬೇಡಿಕೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!