ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ
ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ
ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ
ನಾಳಿನ ಲಾಭದ ಆಸೆಯೇ ಈ ಜೀವನ
ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು
ನಾಳಿನ ಸ್ವರಗಳಿಗೆ ಎಲ್ಲೆ ಮೀರದಂತೆ ಇಲ್ಲಿ ಶ್ರುತಿ ಹಿಡಿಯಲಾಗದು
ಬೇಡವಾದ ಕನಸುಗಳಿಗೆ ಪರದೆ ಕಟ್ಟಿ ಮರೆಮಾಡಲಾಗದು
ಜಗವು ಸಂತೆ ಮತ್ತು ಒಂದು ದಿನದ ವರ್ತಕನು ಈ ಜೀವವು
ಅಲ್ಲಿ ನೀನು ಒಂಟಿಯಾದರೂ ಕ್ರಯ-ವಿಕ್ರಯಗಳಿರಲೇ ಬೇಕು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!