ಅವಕಾಶವಾದ

ಬಿಗಿತ ಸಡಿಲಿಸು ಕೊಂಚ
ಜಾವ ಹರಿಯಿತು, ಬೇಗ
ಕಣ್ಣ ರೆಪ್ಪೆಗಳನೀಗ ತೆರೆದುಕೊಳಲೇ

ಉಸಿರು ಏರಿಳಿಯುತಿದೆ
ಬೆಳಕು ಹಬ್ಬುತಿದೆ, ಬೇಗ
ಕಣ್ಣ ತೆರೆದೊಮ್ಮೆ ನೋಡಿಕೊಳಲೇ

ಬೆವರು ಹನಿಯುತಿದೆ
ಬದಿಗೊಮ್ಮೆ ಸರಿ, ಬೇಗ
ಎದ್ದು ಕಾರ್ಯಗಳ ಮಾಡಿಕೊಳಲೇ