ಕಾಗೆಯಂತೆ ಕಪ್ಪಗಿದ್ದರೇನಂತೆ
ನಿನ್ನ ಗಾನ ಮಾಧುರ್ಯ ಕಪ್ಪೆ?
ಅದಕೆ ತಲೆದೂಗದವರ ಕಂಡ್ಯಾ?
ಕಪ್ಪು ಕಪ್ಪೆಂದು ತೆಗಳುವರೆಲ್ಲಾ
ಬಲಸುತ್ತಾರಲ್ಲಾ ದೃಷ್ಟಿ ಬೊಟ್ಟಾಗಿ ಕಪ್ಪು
ಕಪ್ಪು ಕಸ್ತೂರಿ ಎನ್ನುತ್ತಾ.......
ಸುರಿಸುತ್ತಾರಲ್ಲಾ ಕಪ್ಪು ಚೆಕ್ಕಾಗಿ ನಿನ್ನ...
ಜಗಕೆಲ್ಲ ಬೇಕಿರುವ ಚಂದ್ರನಲ್ಲೇ
ನೀನಂಟಿರುವೆಯಲ್ಲ ಕಪ್ಪು
ಮುಗ್ದ ಮಗುವಿನ ಶೃಂಗಾರಕೆ
ನೀನಾದೆಯಲ್ಲಾ ದೃಷ್ಟಿ ಕಪ್ಪು
ಎಲ್ಲದರಲ್ಲೂ ಮಿಂಚುವ ನಿನ್ನ
ಅದೃಷ್ಟದಾಟವ ನೋಡು!!!!!!
ಕೆಲವರಿಗೆ ಪ್ರತ್ಯಕ್ಷವಾಗಿಯಾದರೆ
ಮತ್ತಲವರಿಗೆ ಅಪ್ರತ್ಯಕ್ಷವಾಗಿ ಬೇಕಾಗುವೆಯಲ್ಲಾ
ಕಪ್ಪು ನೀನೆಂದೂ.......
ಕಸ್ತೂರಿಯೇ........
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!