ಅಬ್ಭಾ...! ಒಂದು ಕರಪತ್ರವಿಲ್ಲ, ಒಂದು ಫ್ಲೆಕ್ಸ್ ಇಲ್ಲ, ಒಂದು ಬಂಟಿಂಗ್ಸ್ ಇಲ್ಲ, ಆದರೆ ಮನೆ ಮನೆಗೆ ಹೋಗಿ ಯುವಕರನ್ನು ಮಾತನಾಡಿಸಿ ಮಹಾ ಸಾಂಘಿಕ್ ಗೆ ಹೊರಡಿಸುವ ಕೆಲಸ ಮಾತ್ರ ಯಜ್ಞ ದಂತೆ ನಡೆದಿತ್ತು. RSS ಕಾರ್ಯಕರ್ತರು ಮನೆ ಮಠ ತೊರೆದರು, ಅವರ ಕಣ್ಮುಂದೆ ಒಂದೇ ವಿಚಾರ ಫೆಬ್ರವರಿ 3ಕ್ಕೆ ಒಂದು ಲಕ್ಷ ಯುವಕರನ್ನು ಸೇರಿಸಬೇಕು. ಎಲ್ಲರೂ ಮಂಗಳೂರು ಮತ್ತು ಮಡಕೇರಿ ಜಿಲ್ಲೆಯವರು ಮಾತ್ರ. ನೋಡುವುದಕ್ಕೆ ಹೋಗಿದ್ದ ನಮ್ಮಂತವರೂ ಸಾವಿರಾರು ಮಂದಿ ಇದ್ದೆವು. ಮಹಾ ಸಾಂಘಿಕ್ ನಡೆಯುವ ಸ್ಥಳಕ್ಕೆ ಹೋಗುವ 15 ಕಿಲೋ ಮೀಟರ್ ರಸ್ತೆ ತುಂಬ ಹೊರಟಿದ್ದ ಸ್ವಯಂಸೇವಕರ ಜನಸಾಗರ ಮತ್ತು ಸಾವಿರಾರು ವಾಹನಗಳನ್ನು ನೋಡಿ ನಮ್ಮ ಕಾರ್ ಚಾಲಕ ಸುನಿಲ್ ಹೇಳಿದ "ನಾವು ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೋಗಿರುತ್ತೆ.!  RSS ಕಾರ್ಯಾಲಯ ಸಂಘನಿಕೇತನದಿಂದ ಸುಮಾರು 15 ಕಿಲೋ ಮೀಟರ್ ದೂರದ ಕಾರ್ಯಕ್ರಮದ ಮೈದಾನ ಕ್ಕೆ ಮೂರು ಗಂಟೆ ಮುಂಚೆ ಹೊರಟಿದ್ದ ನಮ್ಮ ಸ್ಥಿತಿ ಇದು. ಹೌದು ನಾವೇನೋ ಸರಿಯಾಗಿ ತಲುಪಿದೆವು. ಆದರೆ ಮಡಕೇರಿಯ ಸ್ವಯಂ ಸೇವಕರು ಮೈದಾನ ತಲುಪುವಾಗ ಸಮಾರಂಭ ಮುಗಿದಿತ್ತು. ಅವರೂ ಕೂಡ ಸಮಯಕ್ಕೆ ಸರಿಯಾಗಿಯೇ ಹೊರಟಿದ್ದರು. ಆದರೂ ಜನ ಸಾಗರದ ಮಧ್ಯೆ ಗಂಟೆಗೆ ಎರಡು ಕಿಲೋ ಮೀಟರ್ ದೂರ ಕಾರ್ ಸಾಗಲು ಕಷ್ಟವಾಗುತ್ತಿತ್ತು. ನಾನಂತೂ ಕಾರ್ ನಿಂದ ಇಳಿದು ಜನಸಾಗರದ ಮಧ್ಯೆ ನಡೆದೇ ಕಾರ್ಯಕ್ರಮ ಸ್ಥಳ ಸೇರಿದೆ. ಅಲ್ಲಿನ ಕಾರ್ಯಕ್ರತರ ಪರಿಶ್ರಮ ಕೇಳಿದರೆ ಮೈ ಝುಮ್ ಎನ್ನುತ್ತೆ. ಒಬ್ಬ ಕಾರ್ಯಕರ್ತನಂತೂ ಮನೆ ಬಿಟ್ಟು 84 ದಿನಗಳಾಗಿದೆಯಂತೆ. ನಿನ್ನೆ ರಾತ್ರಿಯೂ ಹೋಗಿರಲಾರ. ಇವತ್ತು ಹೋಗಬಹುದೇನೋ..!

ಇದು ಎಲ್ಲರಿಗೂ ತಕ್ಕ ಉತ್ತರವೇ ಹೌದು. ಸರಸಂಘಚಾಲಕರೇ ಹೇಳಿದಂತೆ RSS ಗೆ ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇಲ್ಲ. ಆದರೂ ಬೆಳೆಯುತ್ತಿರುವ ಸಂಘದ ಶಕ್ತಿ ಗೋಚರವಾಗದೆ ವಿಧಿ ಇಲ್ಲ. 

ಕಾಂಗ್ರೆಸ್ ನವರ ಕಾಲ್ನಡಿಗೆಯಾಗಲೀ  BJP ಸೇರಿದಂತೆ  ಯಾವುದೇ ರಾಜಕೀಯ ಪಕ್ಷಗಳ ಕಾರ್ಯ ವೈಖರಿಗೂ ಸಂಘದ ಕಾರ್ಯ ಪದ್ದತಿಗೂ ಅಜಗಜಾಂತರ. 

ಸಂಘದ ಕಾರ್ಯಕರ್ತನ ಹೃದಯಲ್ಲಿ ಒಂದೇ ವಿಚಾರ-ತಾಯಿ ಭಾರತಿಯ ಗೌರವ ಉಳಿಸಲು ನನ್ನ ಜೀವವನ್ನು ಒತ್ತೆ ಇಟ್ಟಾದರೂ ಹಗಲಿರಳು ಶ್ರಮಿಸಬೇಕು. ಅಷ್ಟೆ...ಅಷ್ಟೆ...ಅಷ್ಟೆ... ಬೇರೇನೂ ಚಿಂತೆ ಇಲ್ಲ. "ಸದೃಢ ಭಾರತವನ್ನು ಕಟ್ಟಲು ನಾವು ಮೀಸಲು"..ಇಷ್ಟೇ ಸ್ವಯಂಸೇವಕರ ವಿಚಾರ. ಅದರಂತೆ ಅವರ ಎಲ್ಲಾ ಕಾರ್ಯಶೈಲಿ. ವಿವೇಕಾನಂದರು ಬಯಸಿದ್ದು ಇಂತಹ ನೂರು ಜನ ಯುವಕರನ್ನು  RSS ಆದರೋ ಅಂತಹ  ಲಕ್ಷ್ಜ-ಲಕ್ಷ ಯುವಕರನ್ನು ಬೆಳೆಸುತ್ತಿದೆ. ದುಷ್ಟ ಶಕ್ತಿಗಳ ಎದೆ ನಡುಕ ಉಂಟಾಗುವಂತೆ ಬೆಳೆಯುತ್ತಲೇ ಇದೆ.