ಗೃಹ - ಸಂಭ್ರಮ
ಬಾಡಿಗೆ ಕಟ್ಟಿ ಕಟ್ಟಿ ರೋಸಿತು ಮನವು ,
ಸ್ವಂತ ಸೂರು ಮಾಡಿಕೊಳಬೇಕೆಂಬ ಕನಸಾಯಿತು ,
ಕನಸು ಹಂಬಲವಾಯಿತು,
ಕನಸನ ನನಸು ಮಾಡಿಕೊಳೋ ಮನಸ್ಸು ಆಯಿತು ,
ಬಾಳ ಸಂಗಾತಿಯೊಂದಿಗೆ ವರುಷಗಳು ಕಷ್ಟ ಪಟ್ಟಿದು ಆಯಿತು,
ಬಿಗಿ ಹಿಡಿತದ ಜೀವನ ಸಾಗಿಸಬೇಕಾಯಿತು ,
ಈ ಶ್ರಮದ ಫಲವೇ ಸ್ವಂತ ಸೂರು ಮಾಡಿಕೊಳುವಂತೆ ಆಯಿತು,
ಏನೋ ಸಾದಿಸಿದಂತೆ ಅನಿಸಿತು ,
ಆಕಾಶದಲ್ಲಿ ತೇಲಾಡುವಂತೆ ಆಯಿತು,
ಹೇಳಲಾಗದ ಸಂತೋಷವಾಯಿತು,
ಸಂಗತಿಯ ಮೊಗದಲ್ಲಿ ಸಂತಸದ ನಗೆ ಮೂಡಿತ್ತು ,
ನಾನೇ ಧನ್ಯ ಅನಿಸಿತು ,
ಇದನೆಲ್ಲ ಸ್ನೇಹಿತರ ಜೊತೆ ಹಂಚಿಕೊಳಬೇಕೆಂದು ಅನಿಸಿತು ,
ಸ್ನೇಹಿತರೊಂದಿಗೆ ಸಂತೋಷ ಕೂಟ ಏರ್ಪಡಿಸಿದೆನು,
ನಗೆ ಹನಿಗಳೊಂದಿಗೆ ಸಂತೋಷ ಕೂಟ ನಡಿಯಿತು
ಅವರೆಲ್ಲರ ಆಶೀರ್ವಾದದೊಂದಿಗೆ ನನ್ನ ಸಂತೋಷ ಇಮಡಿಸಿತ್ತು
ಸದಾ ಈ ನಗು ಹೀಗೆ ಇರಲಿ ಅಂತ ಆಶಿಸುವ ಸ್ನೇಹಿತರ ತಂಡ..
ಪ್ರತಿಕ್ರಿಯೆ (1)