ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -
http://sampada.net/blog/%E0%B2%B8%E0%B3%81%E0%B2%A7%E0%B2%BE-%E0%B2%B5%E0%B2%BE%E0%B2%B0-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%AF-%E0%B2%AF%E0%B3%81%E0%B2%97%E0%B2%BE%E0%B2%A6%E0%B2%BF-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%BE%E0%B2%82%E0%B2%95-%E0%B3%A8%E0%B3%A6%E0%B3%A7%E0%B3%A8-%E0%B2%93%E0%B2%A6%E0%B2%BF%E0%B2%A6%E0%B2%BF%E0%B2%B0%E0%B2%BE/18/03/2012/36039
ಅದನ್ನು ನೀವೆಲ್ಲ ಓದಿರುವಿರಿ ಪ್ರತಿಕ್ರಿಯಿಸಿರುವಿರಿ -
ಈ ಸಾರಿಯೂ ತರಂಗ ಮತ್ತು  ಸುಧಾ ವಿಶೇಷಾಂಕ (ಯುಗಾದಿ) ತೆಗೆದುಕೊಂಡು ಬಂದೆ ಏನೇನೋ ಇದೆ ಎಂದು  ಓದಲು ಕುಳಿತರೆ , ೧,೨ ,೩, ೪ ,೬,೮  ಪೇಜ್ವರ್ಗೆ  ಬರೀ ಜಾಹೀರಾತು ...! ಆಮೇಲೆ ಕಥೆಗಳು ಹನಿಗವನಗಳು  ಕವನಗಳು  ಸಿನೆಮ ಸಂಬಂಧಿ  ವಿಷ್ಯ  ಹಾಸ್ಯ  ಉಹೂ ಯಾವುದೂ ಇಷ್ಟವಾಗಲಿಲ್ಲ .. ಎಲ್ಲವೂ ಸಪ್ಪೆ ಸಪ್ಪೆ  ;((
ಇದ್ದುದರಲ್ಲಿ  ಓದುಗರ ಅನುಭವಗಳು -ಮದುವೆಯಲ್ಲಿ ಆದ ಪಜೀತಿ ,ಇತ್ಯಾದಿ  ಬರಹಗಳು ಮುದ ನೀಡಿದವು ಆಷ್ಟೇ ...
ಇದ್ದುದರಲ್ಲಿ ಹೇಳಿಕೊಳ್ಳುವಂತ ಒಂದಾದರೂ ಬರಹ ಇಲ್ಲವೇ? ಎಂದರೆ
 ಇಲ್ಲ ಎಂದೇ ಹೇಳುವೆ .... !
ಹೀಗಾಗಿ ಆ ಬಗ್ಗೆ ಬರೆವುದಕ್ಕಿಂತ  ವಿಶೇಷಾಂಕಗಳು ನಿಜವಾಗಿ ವಿಶೇಷಾಂಕ ಆಗುವುದಕ್ಕೆ  ನಮ್ ಸಂಪದಿಗರು ಪ್ರಯತ್ನಿಸಲಿ  ಆ ವಿಶೇಷಾಂಕಗಳಿಗೆ ಅವರ ಬರಹಗಳು  ಸೇರಿ  ನಿಜವಾದ ಅರ್ಥದಲ್ಲಿ ವಿಶೇಷಾಂಕ ಆಗಲಿ  ಎಂದು ಈ ಬರಹ ...
ಪ್ರತಿ ವರ್ಷ  ಯುಗಾದಿ ಮತ್ತು ದೀಪಾವಳಿ ಸಂದರ್ಭದಲ್ಲಿ  ಹೊಸ ಕಥೆ ಕಾದಂಬರಿ ಕವನ ಹಾಸ್ಯ ಬರೆಯುವವರಿಗಾಗಿ  ಸ್ಪರ್ಧೆ ಏರ್ಪಡಿಸಿ  ಬಹುಮಾನ  ಘೋಷಿಸಿ (೧೦ ಸಾವಿರ - ೫ ಸಾವಿರ  ಹೀಗೆ) ಆಗ ಬರುವ ೧ ೦ ೦ ೦ ೬ ಕಥೆ - ಕವನ ಬರಹಗಳನ್ನು ಸೋಸಿ  ಅವುಗಲ್ಲಿ ಚೆನಾಗಿವೆ ಎಂಬುವ ಬರಹಗಳನ್ನು ನಾಡ್ನ ಖ್ಯಾತ ವಿಮರ್ಶಕರು ಕಥೆಗಾರರಿಗೆ ಕೊಟ್ಟು  ಪ್ರಥಮ ದ್ವಿತೀಯ,  ತ್ರುತೀಯ ಎಂದು ಪ್ರಕಟಿಸುವ  ಬರಹಗಳ ಗುಣಮಟ್ಟ  ಕಥಾ ವಸ್ತು ವಿಷ್ಯ ವಿಶೇಷತೆ  ಬರು ಬರುತ್ತಾ ಕುಗ್ಗುತಿದೆ ಎಂದು ಹೇಳಲು  ಖೇದವಾಗುತ್ತಿದೆ ;(೯
ಕರುನಾಡಲ್ಲಿ ಎಂಥೆಂತ ಬರಹಗಾರರು ಇದ್ದರು(ಇರುವರು) -ಕುವೆಂಪು-ತೇಜಸ್ವಿ-ಕಾರಂತರು ,ಮಾಸ್ತಿ ,ಬೈರಪ್ಪ ಅನಂತ ಮೂರ್ತಿ,ಕುಂ ವೀ , ಹೀಗೆ ಪಟ್ಟಿ ಮಾಡುತ್ತಾ ಹೋದರೆ  ಅಚ್ಚರಿ ಆಗುವಸ್ಟು  ಶ್ರೇಷ್ಠ ಬರಹಗಾರರು  ಅವರಲ್ಲಿ ಕೆಲವರಂತೂ ಬರಹದ ಎಲ್ಲ ಪ್ರಕಾರಗಳಲ್ಲಿ ಹಿಡಿತ ಇದ್ದವರು (ಕಥೆ ಕವನ- ಹಾಸ್ಯ-ನಾಟಕ ವ್ಯಕ್ತಿ ಚತ್ರಾಣ ಇತ್ಯಾದಿ ), ನಾ ಚಿಕ್ಕವನಾಗಿದ್ದಾಗ  ಕಾಲೇಜಿಗೆ  ಹೋಗುವಾಗಲೆಲ್ಲ ಬರುತಿದ್ದ  ಯುಗಾದಿ ದೀಪಾವಳಿ ವಿಶೇಷಾಂಕಗಳು ಮತ್ತು ಪ್ರತಿ ತಿಂಗಳು- ವಾರ ಬರುವ ತುಷಾರ -ಕರ್ಮವೀರ-  ಕಸ್ತೂರಿ- ತರಂಗ -ಸುಧಾ  -ಮಯೂರ  ತಪ್ಪದೆ ಕೊಂಡು  ಓದುತ್ತಿದ್ದೆ ಅಲ್ಲಿ ಬರೆವ ಬರಹಗಾರರು ಅವರ ಬರಹಗಳು ಸೂಜಿಗಲ್ಲಂತೆ ಸೆಳೆಯುತ್ತಿದ್ದವು,ಹಲ ವರ್ಷಗಳವೆರೆಗೆ ಆ ಕಥೆ ಕವನ  ನೆನಪಿರುತ್ತಿದ್ದವು ,ಆದರೆ ಈಗ ಬರುವ ಅದೇ ಪುಸ್ತಕ - ವಿಶೇಷಾಂಕಗಳಲ್ಲಿ ಆ ಮಟ್ಟದ  ಆಕರ್ಷಣೆ ಇಲ್ಲ ಎಂದು ಹೇಳಲು  ಖೇದವಾಗುತ್ತಿದೆ /
 ಆಗ ನನಗೆ ಅನ್ನಿಸಿದ್ದು  ಈ ಸಂಪದದಲ್ಲಿ  ಬರುವ ಏಷ್ಟೋ ಬರಹಗಳು  ಅದು ಕಥೆ ಕವನ  ಹಾಸ್ಯ  ಇತ್ಯಾದಿ  ಆ ವಿಶೇಷಾಂಕಳಿಗಿಂತ  ಬಹು ಪಾಲು ಶ್ರೇಷ್ಟ  ಮತ್ತು ರಂಜನೀಯ ... ಒಂದು ವೇಳೆ ಆ ತರಹದ ಸ್ಪರ್ಧೆಗಳಿಗೆ  ಅಥವಾ ಮಾಮೂಲಾಗಿ ವರ- ತಿಂಗಳಿಗೆ ಬರುವ ಪುಸ್ತಕಗಳಿಗೆ  ಪ್ರಕಟಣೆಗೆ ಕಳುಹಿಸಿದರೂ  ಪ್ರಕಟ ಆಗೋದ್ರಲ್ಲಿ ಸಂಶಯವೇ ಇಲ್ಲ ,ಈ ವಿಷಯವಾಗಿ  ಹಿಂದೊಮೆಮ್ ಶ್ರೀಯುತ ಪಾರ್ಥ ಸಾರಥಿ  ಮತ್ತು ಶ್ರೀಧರ್ ಜೀ  ಅವರೊಡನೆ  ಚರ್ಚಿಸಿದ್ದೆ ...
ಸಂಪದ ಲೇಖಕ - ಬರಹಗಾರರಲ್ಲಿ
ಅದರಲ್ಲು  ಕಥನ ಕಾವ್ಯ  ವಿಷಯಕ್ಕೆ  ಬಂದರೆ  ಶ್ರೀಯುತ ಪಾರ್ಥ ಸಾರಥಿ  ಅವರು  ಹಿರಿಯರಾದ ಹನುಮಂತ ಪಾಟೀಲರು (ಇಬ್ಬರೂ ಕಥೆ ಕವನ  ವ್ಯಕ್ತಿ ಚಿತ್ರಣ ಕಟ್ಟಿ ಕೊಡುವಲ್ಲಿ ವಿಶೇಷ ಪರಿಣಿತಿ - ಹಿಡಿತ ಇರುವವರು ) ಹಾಸ್ಯ /ವಿಡಂಭನೆಯಲ್ಲೂ ಚಾಟಿ ಬೀಸುವ  ಎಚ್ಹ್ಹೆರಿಸುವ  ಬರಹಗಾರರಲ್ಲಿ  ಗಣೇಶ್ ಅಣ್ಣ  ಶ್ರೀಯುತ ಶ್ರೀನಾಥ್  ಭಲ್ಲೆ  , ಕೋಮಲ್ಲು (ಈಗೀಗ ಕಾಣೆಯಾಗಿದ್ದಾರೆ) ಗ್ರೇಟು ..
ಕಥೆಗಳನ್ನು  ರಚಿಸುವ  ಸ್ಪರ್ಧೆ  ಎಂದು ಇದ್ದರೆ ಅದ್ರಲ್ಲಿ ನಿಸ್ಸಂಶಯವಾಗಿ  ಪ್ರಥಮ ಸ್ಥಾನ ಗಳಿಸುವವರು  ಶ್ರೀಯುತ ಜಯಂತ್ ರಾಮಾಚಾರ್  ಅವರು ,ಅವರು ಎಷ್ಟು ಬರಹ ಬರೆದಿರುವರು ಎಂದು ನೀವೇನಾರ ಅವರ ಇತ್ತೀಚಿನ ಬರಹಗಳು ಲಿಂಕ್ ಕ್ಲಿಕ್ಕಿಸಿದರೆ  ಅಚ್ಚರಿ ಆಗದೆ ಇರದು ...!!
ಅಸ್ಟು ಕಥೆಗಳು  ಅವ್ರು ಬರೆದಿರುವರು.. !!
. ಆದ್ಯಾತ್ಮ -ವ್ಯಕ್ತಿತ್ವ ವಿಕಸನ ಇತ್ಯಾದಿ ಬಂದಾಗ ನೆನಪಾಗುವ ಹೆಸರುಗಳು  ಹಿರಿಯರಾದ ಶ್ರೀಯುತ ಕವಿ ನಾಗರಾಜ ಅವರು ಮತ್ತು ಶ್ರೀಯುತ ಶ್ರೀಧರ್ ಜೀ  ಅವರದು .
ಇವರಲ್ಲಿ  ಶ್ರೀಯುತ ಪಾರ್ಥ ಸಾರಥಿ  ಅವರು -ಹಿರಿಯರಾದ ಕವಿ ನಾಗರಾಜ ಅವರು  ಜಯಂತ್ , ತಮ್ಮದೇ ಬ್ಲಾಗ್ ರಚಿಸಿ ಅದರಲ್ಲೂ ತಮ್ಮ ಬರಹಗಳನ್ನು ಪ್ರಕಟಿಸುವರು .
ಇನ್ನು ಬರೀ ಕವನ- ಹನಿಗವನ - ಘಜಲ್  ಬರೆವ ಯುವ ಬರಹಗಾರರು ಅಸಂಖ್ಯಾತ  ಜನ  ಸಂಪದದಲ್ಲಿ ಇರುವರು ,ಅವರಲ್ಲ್ಲಿ ಕೆಲವರ ಬರಹಗಳು ಮಾತ್ರ ನಾಡಿನ ಮುಖ್ಯ ಪತ್ರಿಕೆ -ಪುಸ್ತಕಗಳಲ್ಲಿ ಅಚ್ಚಾಗಿ  ಇನ್ನುಳಿದವರ ಬರಹಗಳು ಕೇವಲ ಸಂಪದದಲ್ಲಿ ಓದುಗರ ಮೆಚ್ಚುಗೆ  ಪ್ರತಿಕ್ರಿಯೆ ಪಡೆದು ಮರೆಯಾಗುವವು.  ಹೀಗೆ ಎಲೆ ಮರೆ ಕಾಯಿಯಂತೆ  ಒಳ್ಳೊಳ್ಳೆ ಬರಹಗಳನ್ನು ಬರೆವ ಈ ಎಲ್ಲ ಬರಹಗಾರರ ಬರಹಗಳು  ಕೇವಲ ಸಂಪದ ಮಾತ್ರ  ಅಲ್ಲದೆ ಕರುನಾಡಿನ ಸಮಸ್ತರನ್ನು ತಲುಪಬೇಕು  ಎನ್ನುವುದು ನನ್ನ  ಬಯಕೆ ,ಅದಕಾಗಿ ಅವರೆಲ್ಲರಿಗೆ ಒಂದು ಕೋರಿಕೆ ..
>>>>ನೀವುಗಳು ಎಲ್ಲ ನಿಮ್ಮ ಬರಹಗಳನ್ನು ಈ ತರಹದ ವಿಶೇಷಾಂಕಳಿಗೆ -ಸ್ಪರ್ಧೆಗಳಿಗೆ ಕಳುಹಿಸಿ ,
ನಿಮ್ಮ ಬರಹಗಳನ್ನು ಸಂಪದಕ್ಕೆ ಮಾತ್ರ ಸೀಮಿತಗೊಳಿಸದೆ ಇನ್ನಿತರ ಮಾಧ್ಯಮಗಳಿಗೂ ವಿಸ್ತರಿಸಿ ..
ಶುಭವಾಗಲಿ ..
================================================================================================