ಸಿದ್ರಾಮಣ್ಣ ಕೇಳಣ್ಣ
ಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣ
ನೀಗು ಬೇಗ ಈ ಬವಣೆ ಜನರ ಸದ್ದನ್ನ ॥
ಬಲು ಮೋಸಗಾರರಿಹರವರೆಲ್ಲರೊಂದುಗೂಡಿ
ಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ ನಿನ್ನ ದೂಡಿ ।
ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ ಮುಖದಿ ॥
ಅತಿ ವಿನಯವನ್ನು ನಿನ್ನೆದಿರು ತೋರಿ ಧರ್ಪದಲಿ ಜನಗಳೆದಿರು
ಮಿತಿಯಿಲ್ಲದಂತೆ ಧನಕನಕ ಗಳಿಸಿ ಮೆರೆವವರ ದೂರವಿರಿಸು ॥
ಎಚ್ಚರಿಕೆಯಿರಲಿ ಕಷ್ಟದಲಿ ನೊಂದು ಬೆಂದವರ ನಾಡಿ ನೋಡು
ಕಚ್ಚಾಟವಿರದಲಂತವರ ದುಃಖ ತಣಿಸಣ್ಣ ಶಾಂತಿ ನೀಡು ॥
ಅಭ್ಯುದಯ ಬೇಕು ಸಾರ್ಥಕ್ಯ ಬೇಕು ಮಾನವತೆ ಬೆಳಗಬೇಕು
ಸಭ್ಯತೆಯಲಿರುವ ಸಜ್ಜನರ ಮುಖದಿ ನಗುವೊಮ್ಮೆ ಮಿನುಗಬೇಕು ॥
ನೀನಂತಹವನು ಬಲು ದಿಟ್ಟನಾಗಿ ಮನಗಟ್ಟಿ ತೋರಿದವನು
ಏನಾದರೊಂದು ಸಾಧನೆಯ ಮಾಡಿ ಮನಮುಟ್ಟಿ ತೋರುವವನು ॥
ಎಂದೆನಿಸುತಿಹುದು ಹೊಗಳಿಕೆಯದಲ್ಲ ಈ ಮಾತ ಮರೆಯಬೇಡ
ಮುಂದಿರುವ ದಿನದ ಕನಸುಗಳನೆಲ್ಲ ಭ್ರಮೆಯೆಂದು ತೊರೆಯಬೇಡ ॥
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!