ಬಡವರ ಬಂಗಾರವಾದೆನೆಂದು
ಕೊರಗದಿರು ಮರುಳೆ
ಸಂಕಷ್ಟಗಳ ಹಾವಳಿಗೆ
ಕುಗ್ಗದಿರು ಮನವೆ

ಇಂದು ಎನ್ನುವುದು ಶಾಶ್ವತವಲ್ಲ
ನಾಳೆ ಎಂಬುದು ಬಾರದೆ ಇರುವುದಿಲ್ಲ
ಇಂದಿರುವ ನೋವುಗಳಿಗೆ
ಕೊಲ್ಲದಿರು ನಾಳಿನ ಕನಸುಗಳ

ಸೂರ್ಯ  ಮುಳುಗುವನು ಸಂಜೆಯಲಿ
ಚಂದ್ರ ಮರೆಯಾಗುವನು ಮುಂಜಾನೆಯಲಿ
ಹಣ್ಣೆಲೆ ಉದುರಿ ಚಿಗುರೊಡೆಯುವುದು ಚೈತ್ರದಲಿ
ಚಿಗುರೆಲೆ ಹಣ್ಣಾಗಿ ಉದುರುವುದು ಮಾಗಿಯಲಿ

ಗುಡುಗೊಂದು ಇಲ್ಲಿ ಮಿಂಚೊಂದು ಅಲ್ಲಿ
ಸಿಡಿಲಂತು ಎಲ್ಲೆಲ್ಲು ಇಹುದಿಲ್ಲಿ
ಏರಿಳಿತ ಸಹಜ ಈ ಸೃಷ್ಟಿಯಲಿ
ಇದಕೆಂದು ಬೆದರದಿರು ಬಾಳಿನಲಿ

ಹುಟ್ಟು ಒಂದು ಗುರುತು
ಸಾವೊಂದು ಗುರುತು
ಹುಟ್ಟು ಸಾವಿನ ಮಧ್ಯದಲಿ
ತುಂಬು ಸಾಧನೆಯ ಹೆಗ್ಗುರುತಿನಲಿ