ಅವಳು!!! !!!!  ............ ಅವಳೆಂದರೆ!!..............ಅವಳೇ ......... ಮೂವತ್ತೈದು ವರ್ಷಗಳ ಹಿಂದಿನ ಮನಸಿನ ಹುಡುಗಿ!!. ಈಗ ಅವಳೆಲ್ಲಿದ್ದಾಳೆ....ಏನು ಮಾಡ್ತಾ ಇದ್ದಾಳೆ.... ಹೂ..ಹೂ..ಗೊತ್ತಿಲ್ಲ.....ಆದರೆ!!!!!! ನನ್ನೆದೆಯ ಗೂಡಲ್ಲಿ ಗುಬ್ಬಿಮರಿಯಾಗಿ  ಕೂತುಬಿಟ್ಟಿದ್ದಾಳೆ.

ಎಂ. ಎ ಮುಗಿಸಿದ ಕೂಡಲೇ ತತ್ತ್ವಶಾಸ್ತ್ರದಲ್ಲಿ  ಪಿಹೆಚ್.ಡಿ  ಮಾಡಲು ಬನಾರಸ ಹಿಂದೂ ವಿಶ್ವ  ವಿದ್ಯಾನಿಲಯಕ್ಕೆ ಸೇರಿ ಆರು ತಿಂಗಳು ಕಳೆದಿತ್ತು.  ಪ್ರತಿ ಹದಿನೈದು ದಿನಗಳಿಗೊಮ್ಮೆ ಸಂಶೋಧನಾ ವಿರ್ದಾರ್ಥಿಗಳೆಲ್ಲ ಸೇರಿ ಒಂದೊಂದು ವಿಷಯದ ಮೇಲೆ ಚರ್ಚೆಯನ್ನು ನಡೆಸುತ್ತಿದ್ದೆವು.  ಆ ದಿನ ನನ್ನ ಪತ್ರಿಕೆ ಸರದಿ. ಅಂದೇ ಅವಳು ಬಂದುದು....ನಾನು ಮಂಡಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಂಡವಳು. (ಆದರೆ ಬದುಕಿನ ಪ್ರಶ್ನೆಗಳಿಗೆ ಉತ್ತರ......) ಯಾಕೋ ಏನೋ ಆವತ್ತು ನೋಡಿದಾಗಲೇ ಮನದಾಳದಲ್ಲಿ ಕೂತುಬಿಟ್ಟಳು. ನಾಕು ವರ್ಷ ಆರು ತಿಂಗಳು ಯಾವ ಸುಳಿವನ್ನೂ ಕೊಡದೆ ನನ್ನೆದೆಯ ಗೂಡಿನಲ್ಲಿ ಅವಳನ್ನು ಬಂಧಿಸಿಟ್ಟುಕೊಂಡೆ. ಇದಕ್ಕೇ ಎನ್ನುವುದಾ ಮೊದಲ ಪ್ರೇಮವೆಂದು ? .....

ಎಲ್ಲರಿಗಿಂತಲೂ ನಾನೆಂದರೆ ಸ್ವಲ್ಪ ಸಲುಗೆ, ಗೌರವ, ಪ್ರೀತಿ ಅವಳಿಗೆ. ಅವಳ(ಲ್ಲಿ ಏಳುವ ಎಲ್ಲ ಪ್ರಶ್ನೆಗಳಿಗೆ) ಎಷ್ಟೋ ಸಮಸ್ಸೆಗಳಿಗೆ ನನ್ನ ಅಭಿಪ್ರಾಯ, ನನ್ನಿಂದ ಸಲಹೆ ಸಿಕ್ಕುತ್ತಿತ್ತು. ನಮ್ಮಿಬ್ಬರ ಚರ್ಚೆಯೆಲ್ಲಾ ನಮ್ಮ ಸಂಶೋಧನಾ ವಿಷಯದ ಮೇಲೆಯೇ. ಆದರೆ ನನ್ನಂತೆಯೇ  ಅವಳೂ(ಪ್ರೀತಿಸುವ ವಿಷಯದಲ್ಲಿ) ನನ್ನೆದುರು ಮನಸ್ಸು ಸಂಪೂರ್ಣ ಬೆತ್ತಲೆಗೊಳಿಸಲಿಲ್ಲ. ಇಬ್ಬರಲ್ಲಿ ಯಾರೊಬ್ಬರಾದರೂ ಹಾಗೆ ಮಾಡಿದ್ದರೆ.....ಹೂ.. ಹೂ...

ಪಿ ಹೆಚ್.ಡಿ ಮುಗಿಸಿ ನಾನು ವಾಪಸ್ಸು ನಮ್ಮೂರಿಗೆ  ಹೊರಡಲು ಐದು ದಿನಗಳು ಉಳಿದಿತ್ತು. ಇಬ್ಬರೂ ಹೊರಗೆ ಊಟಕ್ಕೆ ಹೋದೆವು. “ಮುಂದೇನು ಮಾಡಬೇಕು ಅಂತಾ ಇದ್ದೀರಾ”...ಅವಳ ಪ್ರಶ್ನೆಗೆ   “ಮಾಡೋದೇನು ನಮ್ಮೂರಲ್ಲಿ ಹೋಗಿ ಲೆಚ್ಚರರ್ ಆಗಿ ಕೆಲಸಕ್ಕೆ ಸೇರಬೇಕು ಅದೇ ನನ್ನ ಕನಸು, ಇನ್ನು ಇದೆಲ್ಲಾ ಬರಿ ನೆನಪು ಅಷ್ಟೆ. ಮತ್ತೆ ಇಲ್ಲಿಗೆ ಬರುವ ಅವಕಾಶ ಇಲ್ಲ ಅನ್ನಿಸುತ್ತೆ”  ಅವಳ ಕಣ್ಣಿಂದ  ಒಂದೊಂದೇ ಹನಿಗಳು ಕೇಸರಿಬಾತು ತಟ್ಟೆ ಮೇಲೆ.  ಹೃದಯ ನಿಂತುಹೋದ ಹಾಗಾಯ್ತು. ಸಾವರಿಸಿಕೊಂಡು “ಯಾಕೆ ? ಏನಾಯ್ತು” ? ಎಂದೆ. “ನಾನು ನಿಮ್ಮನ್ನು ತುಂಬಾ ಇಷ್ಟಪಡ್ತೀನಿ.  ನಿಮ್ಮ ಜೊತೆ ನನ್ನ ಜೀವನ ಹಂಚಿಕೊಬೇಕು ಅಂತ ಅನ್ನಿಸುತ್ತೆ. ನಿಮ್ಮ ಮನಸ್ಸು ....ನಂಗೆ ಗೊತ್ತಿಲ್ಲ. ನೀವು ಊರಿಗೆ ಹೋಗಿ ವಾಪಸ್ ಬನ್ನಿ. ನಾನು ನಿಮಗಾಗಿ ಕಾಯ್ತಾ ಇರ್ತೀನಿ”.ನಾನೇನು ಮಾತಾಡೋ ಸ್ಥಿತಿಯಲ್ಲಿರಲಿಲ್ಲ. “ಯಾಕೆ ಮಾತಾಡಿ, ನಾ ತಪ್ಪಾಗಿ ಮಾತಾಡಿದೆನಾ” ? ಅವಳ ಪ್ರಶ್ನೆಗೆ ನನ್ನುತ್ತರ ಮೌನ. ನಾನ್ಯಾಕೆ ಹಾಗೆ ಮಾಡಿದೆ, ಮನಸಾರೆ ಅವಳನ್ನ  ಇಷ್ಟ ಪಡ್ತಾಇದ್ದ ನಾನು ಒಳ್ಳೆ ನಿರ್ಧಾರ ತೆಗೆದುಕೊಳ್ಳೋ ಸಮಯದಲ್ಲಿ ಮೌನ ಯಾಕಾದೆ ? ನಾನೂ ನಿನ್ನ ಪ್ರೀತಿಸ್ತಾ ಇದ್ದೀನೀಂತ ಹೇಳಿದ್ದರೆ ಅವಳೆಷ್ಟು ಸಂಭ್ರಮಿಸ್ತಾ ಇದ್ದಳಲ್ಲವಾ ? ಆದರೆ ನಾ ಮಾಡಿದ್ದು? ? ? ? ? ? ? ? ? ?.........

ಮತ್ತೆರಡು ದಿನದಲ್ಲೇ ನಮ್ಮೂರಿಗೆ ಮಾಪಸ್ಸಾದೆ. ಕೆಲಸಕ್ಕೆ ಸೇರಿ  ನಾಕು ವರ್ಷವಾದರೂ ಅವಳನ್ನು ಸಂಪರ್ಕಿಸುವ ಪ್ರಯತ್ನಮಾಡಲಿಲ್ಲ. ತಂದೆ ತಾಯಿ ಮನಸಿಗೆ ಹಿಡಿಸಿದ ಹುಡುಗಿ, ಕೆಲವೇ ದಿನಗಳಲ್ಲಿ ನನ್ನ ಮನೆ ಮನ ತುಂಬಿದ ಮಡದಿಯಾದಳು. ಮುದ್ದಾದ ಮಗಳಿಗೆ  ತಂದೆಯಾಗಿ ಸಂತೃಪ್ತ ಜೀವನ ನನ್ನಾಕೆಯೊಡನೆ.(ಪ್ರೀತಿಸಿದವರೊ ಡನೆ ಮದುವೆಯಾಗದೆ ಇನ್ನೊಬ್ಬರ ಜೊತೆ ಮದುವೆಯಾದರೆ ಅವರೊಡನೆ ಎಷ್ಚೇ ಸಂತೋಷ, ಸಮೃದ್ಧಿ, ನೆಮ್ಮದಿ ತುಂಬಿದ ಬದುಕು ಇದ್ದರೂ ಮೊದಲು ಮೆಚ್ಚಿದ ಆ ಪ್ರೀತಿ ಯಾವತ್ತಿಗೂ ನೆನಪಿಂದ ಮಾಸೋದೇ ಇಲ್ಲ. ಮನದೊಳಗೇ ಯಾರಿಗೂ ಗೊತ್ತಾಗದ ಹಾಗೆ ಇದ್ದುಬಿಡುತ್ತೆ. ಯಾರೊಡನೆಯೂ ಹೇಳಿಕೊಳ್ಳಲಾಗದ ನೋವು, ಹಾಗೇ ಅದರಲ್ಲೇ ಒಂಥರಾ ಸಂತೋಷ. ಇದಕ್ಕೇನೆನ್ನಬೇಕು)

ಆದರೆ.... ಇಷ್ಟು ವರ್ಷದ ಮೇಲೆ ಇಂದು ಕನಸಲ್ಲಿ ಅವಳು!!!!!  ಅಂದು ಹೇಗಿದ್ದಳೋ ಇಂದು ಹಾಗೆಯೇ.. ಸ್ವಲ್ಪ ವಯಸ್ಸಾಯಿತೆನ್ನುವುದು ಬಿಟ್ಟರೆ ಅದೇ ದಟ್ಟ ಕಪ್ಪುಬಟ್ಟಲ ಕಣ್ಗಳ ಸಾಧಾರಣ ಸುಂದರಿ. ಮದುವೆಯಾಗಿಲ್ಲ... ತತ್ತ್ವಶಾಸ್ತ್ರದ ಪ್ರೊಫೆಸರ್.  ಅವಳು ಕೇಳಿದ್ದು “ಹೇಗಿದ್ದೀರಾ ? ನಿಮ್ಮ ತಲೆಯಲ್ಲಿ ಬೆಳ್ಳಿಕೂದಲು ಬಂದಿದೆ ನನ್ನ ಹಾಗೆ (ನಗು) ..ನೀವು ತಿರುಗಿ ಬರ್ತೀರಾ ಅಂತ ಕಾಯ್ತಾ ಇದ್ದೆ”..(ಗಂಭೀರ ಮುಖ) ಆಗಲೂ ನಾ ಏನೊಂದೂ ಮಾತಾಡದ ಮೂಕ. ಪರವಾಗಿಲ್ಲ ಬನ್ನಿ ಒಟ್ಟಿಗೆ ಊಟ ಮಾಡೋಣ”ವೆಂದು ಕೈಹಿಡಿದಳು...ತಕ್ಷಣ ಎಚ್ಚರವಾಯಿತು..ಅಬ್ಬಾ ಇದು ಕನಸಾ... ಇಷ್ಟು ವರ್ಷ ಎದೆಗೂಡೊಳಗೆ ಇದ್ದವಳು ಇಂದೇನು ? ಧುತ್ತನೆ ಕನಸಲ್ಲಿ  ಬಂದಳು ಹೀಗೇಕೆ ? ಇನ್ನು ನಿದ್ದೆಯೆಲ್ಲಿಂದ ಬರಬೇಕು...ಹೊರಳಾಟದ ಪರಿಣಾಮ  ಹೆಂಡತಿಗೆ ಎಚ್ಚರ. “ಯಾಕೆ ನಿದ್ದೆ ಬರಲಿಲ್ಲವಾ, ಏನಾಯ್ತು ? ಪ್ರೀತಿ ತುಂಬಿದ ಮಾತುಗಳು “ಏನೂ ಆಗಿಲ್ಲ ಆರಾಮಾಗಿ ಮಲಕ್ಕೊ”...ಹೂ ಎಂದವಳು ನನ್ನೆದೆ ಮೇಲೆ ತಲೆಯಿಟ್ಟು ಹತ್ತು ನಿಮಿಷದಲ್ಲೇ ನಿದ್ರಾದೇವಿ ಮಡಿಲಿಗೆ ಜಾರಿದಳು...ಆದರೆ ಇಡೀ ರಾತ್ರಿ ನಾನು...........