ನಾನು ಭೀಮ ಭಟ್ಟನಾದಾಗ
ಮಹಾಭಾರತದ ಭೀಮ ಭಟ್ಟ ಆದ ಕಥೆ ಓದಿದೆನು
ನಾನು ಅದರಿಂದ ಸ್ಪೂರ್ತಿ ಗೊಂಡೆನು
ಭೀಮ ಭಟ್ಟ ಆಗಬೇಕು ಎಂದು ತಿರ್ಮಾನಿಸಿದೆನು
ಅದಕ್ಕಾಗಿ ಅಡುಗೆ ಪುಸ್ತಕ ಓದಿ ತಯಾರಿ ಮಾಡಿಕೊಂಡೆನು ,
ಉಪ್ಪಿಟು ಮಾಡಲು ಶುರು ಮಾಡಿದೆನು
ರವೆ ಉರಿದೆನು , ಈರುಳ್ಳಿ ಎಚ್ಚಿದೆನು ,
ಸ್ಟವ್ ಮೇಲೆ ರವೆ ನೀರು ಹಾಕಿ ಬೇಯಿಸಿದೆನು ,
ಅದಕ್ಕೆ ಈರುಳ್ಳಿ ಹಾಕಿದೆನು , ಹಾಕಿ ಬೇಯಿಸಿದೆನು
ತದನಂತರ ಅಣ್ಣನಿಗೆ ಬಡಿಸಿದೆನು ,
ಅಣ್ಣ ತಿಂದು ಅಯ್ಯ ಭಟ್ಟ ಶಿರಾ ಚೆನ್ನಾಗಿ ಇದೆ ಅಂದನು ,
ನನ್ನಗೆ ಅವಾಗ ಗಣೇಶನ ಮಾಡು ಅಂದರೆ ಅವರ ಅಪ್ಪನ ಮಾಡಿದೆಯ್ಲೋ ಅನ್ನುವ ಹಾಗೆ ಆಯಿತು
ಇದರಿಂದ ಧೃತಿ ಕೆಡದೆ ಮರಳಿ ಯತ್ನ ಮಾಡು ಅನ್ನಿಸಿತು ,
ಈ ಭಾರಿ ಅಮ್ಮ ರುಬ್ಬಿ ಇಟ್ಟ ದೋಸೆ ಮಾಡೋ ಮನಸು ಆಯಿತು ,
ಸ್ಟವ್ ಮೇಲೆ ಎಂಚು ಇಟ್ಟು ಬಿಸಿ ಆಗುವವರೆಗೂ ಕಾದೆನು ,
ಕಾದು ದೋಸೆ ಇಟ್ಟು ಎಂಚಿನ ಮೇಲೆ ಹಾಕಿದೆನು ,
ತದನಂತರ ಮಗಚ್ಚೆ ಕೈ ಹಿಡಿದು ದೋಸೆ ಎತ್ತಲು ಪ್ರಯತ್ನಿಸಿದೆನು ,
ದೋಸೆ ಎಂಚಿನ ಮೇಲೆ ಹಾಗೆ ಆಂಟಿಕೊಂಡು ಬಿಟ್ಟಿತು ,
ಅಯ್ಯೋ ಶಿವನೆ ಅಂತ ಸ್ಟವ್ ಆಫ್ ಮಾಡಿ ಅಲ್ಲಿಂದ ಕಾಲು ಕಿತ್ತೆನು
ಈ ಭಾರಿ ಅನ್ನ ಮಾಡೋಣ ಅನ್ನಿಸಿತು ,
ಕುಕ್ಕರ್ ನಲ್ಲಿ ಅಕ್ಕಿ ಹಾಕಿ , ನೀರು ಹಾಕಿ ,
ಕುಕ್ಕರ್ ಮುಚ್ಚಿ ಸ್ಟವ್ ಮೇಲೆ ಇಟ್ಟೆನು ,
ಪ್ರೆಷರ್ ಬಂದಾಗ ವೇಟ್ ಹಾಕಿದೆನು ,
ಸ್ವಲ್ಪ ಸಮಯದಲ್ಲಿ ಕುಕ್ಕರ್ ವೇಟ್ ಕಿತ್ತು ಕೊಂಡು ಬಂದಿತು ,
ಅನ್ನ ಎಲ್ಲಾ ಹಾರಿ ಗೋಡೆಗೆ ಆಂಟಿತು ,
ಆಮೇಲೆ ಅಮ್ಮನ ಕೈಯಲ್ಲಿ ಭಾರಿ ಭೋಗುಳ ಕೇಳುವಂತೆ ಆಯಿತು ,
ಕೊನೆಗೆ ನಾನು ಭೀಮನು ಬೇಡ ಭಟ್ಟನು ಬೇಡ ಅಂದು
ಅಡುಗೆ ಮನೆ ಕಡೆ ತಿರುಗಿಯೂ ನೋಡಲ್ಲಿಲ
ಬರೆದ ಎಡಬಿಡಂಗಿ ,
ಹರೀಶ್ ಎಸ್ ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!