ಬದುಕು ಭವಣೆ ಬದಲಾಯಿಸಿತೇ

ವಿಧಿಯು ಬರೆದ ಬರಹ

ನೋವು-ನಲಿವು, ಹುಟ್ಟು-ಸಾವು

ಹೀಗೆ ಹತ್ತು-ಹಲವು ತರಹ!

 

ಸುಖ-ದುಖಗಳೆರಡು ಒಂದೇ

ಎಂದು ಬಾಳಿದರೆ ಬದುಕು

ಅರಿತು ಬಾಳಿದರೆ ತಾನೇ

ಮೂಡುವುದು ಮನದಿ ಬೆಳಕು!

 

ತನುವು ಬೇಕು, ಮನವು ಬೇಕು

ಈ ಜೀವನ ಸಾಗಲು

ರಾತ್ರಿ-ಹಗಲುಗಳೆರಡು ಬೇಕು

ಒಂದು ದಿನವು ಕಳೆಯಲು!

 

ಬಣ್ಣ ಬಣ್ಣದ ಲೋಕ ನೋಡಲು ಬೇಕು

ಕಪ್ಪು-ಬಿಳುಪಿನ ನಯನ

ಉಬ್ಬು-ತಗ್ಗುಗಳಿರದೆ ಸಾಗಿತೇ

ನಮ್ಮ ಬದುಕಿನ ಪಯಣ!

 

        -- ಮಂಜು ಹಿಚ್ಕಡ್