ಪಥನಿರೀಕ್ಷೆ
ಚೆಲುವೆ ಎನ್ನೊಡನೆ ನೀ ಬರಬಲ್ಲೆಯಾ ?
ಮುಳ್ಳುಗಳ ಮೇಲಡಿಯ ಇಡಬಲ್ಲೆಯಾ ?
ಹಾರುವೆನು ಕಮರಿಯಲಿ ಜಿಗಿವೆನೆತ್ತರ ಗಿರಿಯ
ಹೊತ್ತು ಮುಳುಗುವ ಮುನ್ನ ಮತ್ತೆ ಬರುವೆ
ಚಿತ್ತದೊಳಗಂಜಿಕೆಯು ಮೃತ್ಯು ಪಾಶದ ಭಯವು
ಮತ್ತ ಮುಸುಕಿದರೇನು ಬೇಗ ಬರುವೆ
ಬಂದು ಮುತ್ತು ಕೊಡುವೆ
ನಿಲ್ಲ ನೀ ಮನೆಯಲ್ಲಿ ಹೂವಿನಂಗಳಗೊಳಿಸು
ಹೊಸ್ತಿಲಿನ ಶೋಭೆಗಿಡು ರಂಗವಲ್ಲಿ
ಹೊತ್ತಮುತ್ತಿನ ಹೊರೆಯ ದಣಿವಿಂದ ನಾನಿರಲು
ಜಡೆಯ ಬೀಸುವೆ ನೀನು ನಗುವ ಚೆಲ್ಲಿ
ಹೊತ್ತಿನ್ನು ಬಂದಿಲ್ಲ ಬಾರದಿರು ಎನ್ನರಸ
ಮೆತ್ತನೆಯ ಇರುಳನ್ನೇ ಕಾಯುತಿರುವೆ
ಸದ್ದಿರದು ನೀನಾಗ ಬಂದರೆನ್ನಾಲಯಕೆ
ನಗುವೊಂದೆ ನಿನಗೀಗ ನೀಡುತಿರುವೆ
ಎಂದು ಬಯಕೆಗಳ ರಭಸವನು ತಣಿಸುತಿರುವೆ
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂವಿಮಾನ ಯಾನ
ನಾವಿದ್ದೇವೆ
ಬೇಡಿಕೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!