ಕೋಟಿ(ತಿ)-ಅಧಿ-ಪತಿ ೨

ಪುನಿತ್ : ಇವತ್ತು ನಮ್ಮ ಜೊತೆ ಆಡೋಕ್ಕೆ ಬಂದಿದ್ದಾರೆ ಮಂಡ್ಯ ಜಿಲ್ಲೆಯ ಕೆರೆಗೊಡ್ ಗ್ರಾಮದ ಹಿರಿಯರಾದ ಡಿ ಗೋಪಾಲ್ ರಾಯರು ಮತ್ತು ಅವರ ಶಿಷ್ಯ ತಿಪ್ಪ . ರಾಯರೇ ಲೆಟ್ಸ್ ಪ್ಲೇ

ಡಿ ರಾಯರು : ' ಪ್ಲೇಗ್ಆ  , ಬಿಟ್ಟು ಬುಡಿ ಸಿವಾ ಹಂಗೇ ವಾಪಸು ಹೊಂಟು ಹೋಯಿತಿನಿ "

ಪುನಿತ್ : ರಾಯರೇ ನಾನು ಹೇಳ್ತಾ ಇದಿದ್ಹು ಪ್ಲೇ ಅಂತ , ಪ್ಲೇಗ್ ಅಂತ ಅಲ್ಲಾ , ಬನ್ನೀ ಆಟ ಶುರು ಮಾಡೋಣ

(ಸೀಟ್ ನಲ್ಲಿ ಕೂತು ಆದಮೇಲೆ )

ಪುನಿತ್ : ನೀವು ಇಲ್ಲಿಗೆ ಆಡೋಕೆ ಸೆಲೆಕ್ಟ್ ಆಗಿ ಬಂದಿದು ಹೇಗೆ ಅನಿಸುತ್ತಾ ಇದೆ ರಾಯರೇ

ಡಿ ರಾಯರು: " ಚೆನ್ನಾಗಿ ಅದೇ ಸಿವಾ , ಸಾನೆ ಕುಸಿ ಆಗಿ ಬುಟ್ಟದೆ "

ಪುನಿತ್ : ಆಟ ಶುರು ಮಾಡೋಣವ ರಾಯರೇ

ಡಿ ರಾಯರು : " ಆಗಾಬ್ಯಿದು ಸಿವಾ :

---------------

ಪುನಿತ್ : ರಾಯರೇ ನಿಮ್ಮ ಮೊದಲ ಪ್ರಶ್ನೆ ಇಲ್ಲಿ ಇದೆ

Q ೧ : " ಏರೋಪ್ಲೇನ್ ಟೇಕ್ ಅಪ್ ಅಥವ ಟೇಕ್ ಆಫ್ ಆಗುವಾಗ ಯಾವ ಬೆಲ್ಟ್ ಹಾಕಬೇಕು "

ಆಪ್ಷನ್ : a . ಸೀಟ್ ಬೆಲ್ಟ್  b . ನಾಯಿ ಬೆಲ್ಟ್  c. ಸೊಂಟದ ಬೆಲ್ಟ್  d . ಯಾವದು ಇಲ್ಲ

ಡಿ ರಾಯರು : " ಲೇ ತಿಪ್ಪ ಯಾವದೋ ಇ ವಯ ಕೇಳ್ತಾ ಇರೋದು "

ಪುನಿತ್ : ರಾಯರೇ ನಿಮ್ಮ ಸಮಯ ಹೋಡುತ್ತ ಇದೆ ಬೇಗ ಹೇಳಿ

ತಿಪ್ಪ : ಆಪ್ಷನ್ ಅ ಬುದ್ದಿ

ಪುನಿತ್ : ಲಾಕ್ ಮಾಡಲ್ಲ ರಾಯರೇ

ಡಿ ರಾಯರು : " ಸಿವಾ ಆಡಿಸಿದಂಗೆ ಆಗಲಿ , ಲಾಕ್ ಮಾಡಿ "

ಪುನಿತ್ : ಸರಿಯಾದ ಉತ್ತರ .....

ಪುನಿತ್ : ಏಕೆ ರಾಯರೇ ಕನ್ಫ್ಯೂಸ್ ಆದರ

ತಿಪ್ಪ : ಅದು ಹಂಗಲ್ಲ ಬುದ್ದಿ , ನಾನು ನಮ್ಮ ಯೆಜಮನರು ಏರೋಪ್ಲೇನ್ ನಲ್ಲಿ ಬರೋವಾಗ , ಪ್ಲೇನ್ ಟೇಕ್ ಅಪ್ ಆಗೋದರಲ್ಲಿ ಇತ್ತು , ಅವಾಗ ಗಗನ ಸಕಿ ಒಬ್ಬಳು ಎಲ್ಲರು ನಿಮ್ಮ ನಿಮ್ಮ ಬೆಲ್ಟ್ ಹಾಕಿ ಕೊಳ್ಳಿ ಅಂದಳು ಅದಕ್ಕೆ ನಮ್ಮ ಯೆಜಮನರು ಎದ್ದು ಅವರ ಪ್ಯಾಂಟ್ ಬೆಲ್ಟ್ ಟೈಟ್ ಮಾಡಿಕೊಂಡು ಕುಂತ್ ಕೊಂಡರು , ಅದಕ್ಕೆ ಇ ಪರಿ ಕನ್ಫ್ಯೂಷನ್ ಅವರಿಗೆ

ಡಿ ರಾಯರು  : " ಲೇ ತಿಪ್ಪ ಜಾಡಿಸಿ ಒದ್ರೆ ಊರಿಗೆ ಹೋಗಿ ಬಿಡಬೇಕು ಹುಷಾರು , ಸಾಹೇಬರು ಮುಂದೆ ಮರಿಯಾದೆ ತೆಗಿ ಬೇಡ ಕಣಲ್ಲ "

:):):):):)

----------------

ಪುನಿತ್ : ರಾಯರೇ ನಿಮ್ಮ ಎರಡನೇ ಪ್ರಶ್ನೆ ಇಲ್ಲಿ ಇದೆ

Q ೨ : " ನೀವು ನಿಮ್ಮ ಊರಿಗೆ ಮೇವು ಹಗರಣ ವಿಚಾರಣೆ ಮಾಡೋಕೆ ಬಂದಿದ್ದ ತನಿಖಾ ಅಧಿಕಾರಿಗೆ ಯಾವ ಹಣ್ಣು ತಿನಿಸಿದಿರಿ ಎಂದು ಹೇಳಲಾಗುತ್ತೆ "

ಆಪ್ಷನ್  ಅ. ಬಾಳೆ ಹಣ್ಣು  b . ಬ್ಯಾಲದ ಹಣ್ಣು  c. ಚಳ್ಳೆ ಹಣ್ಣು d. ಹತ್ತಿ ಹಣ್ಣು

ಡಿ ರಾಯರು : " ಚಳ್ಳೆ ಹಣ್ಣು , ಲಾಕ್ ಮಾಡಿ ಸಿವಾ , ಆ ನನ್ನಮಗನಿಗೆ ಇನ್ನು ಏನು ತಿನಿಸೋಕೆ ಆಗುತೆ "

(ಲಾಕ್ ಮಾಡಿದ ಬಳಿಕ , ಉತ್ತರ ಸರಿ ....)

ಪುನಿತ್ : ಏನ್ ರಾಯರೇ ಚಳ್ಳೆ ಹಣ್ಣು ತಿನಿಸಿದಿರಿ ಅಂದರೆ ಅರ್ಥ

ತಿಪ್ಪ : ಬುದ್ದಿ ಅದರ ಕಥೆ ನಾನು ಹೇಳ್ತೀನಿ ಕೇಳಿ , ನಮ್ಮ ಊರಿಗೆ ಸಾನೆ ಬರಗಾಲ ಬಂದು ದನ ಕರಿಗೆ ಮೇವು ಇಲ್ಲದಂಗೆ ಆಯಿತು , ನಮ್ಮ ಯೆಜಮನರು ಇದೆ ನೆವ ಮಾಡಿಕೊಂಡು ಊರಲ್ಲಿ ಇದ ದನ ಕರಗಳನೆಲ್ಲ ಖಾಸಯಿ ಖಾನೆ ಮಾರಿ ಬಿಟ್ಟರು , ಆಮೇಲೆ ಪರಿಹಾರ ಕೇಳಿಕೊಂಡು ಸರಕಾರಕೆ ಪತ್ರ ಬರೆದರೂ , ಸರಕಾರ ತನಿಖಾ ಅಧಿಕಾರಿನ ಕಳಿಸಿ ಕೊಟ್ಟರು , ಆ ವಯನಿಗೆ ನಮ್ಮ ಯೆಜಮನರು ನಮ್ಮ ಊರಿನ ದೇವಿರಮ್ಮನ ಆಸೆ ಹುಟ್ಟಿಸಿ ಪರಿಹಾರ ಚೆಕ್ ಗೆ ಸಹಿ ಹಾಕಿಸಿಕೊಂಡು ಚಳ್ಳೆ ಹಣ್ಣು ತಿನಿಸಿದರು

ಡಿ ರಾಯರು" ಲೇ ಬೋ .... ಊರಿಗೆ ಬಾ ಮಾಡ್ತೀನಿ ನಿನ್ನಗೆ "

(ಸರಿಯಾದ ಉತ್ತರ .....)

ಪುನಿತ್ : ರಾಯರೇ ನೀವು ಇತ್ತೀಚಿಗೆ ಏನೋ ಡಯಟ್ ಕಂಟ್ರೋಲ್ ಮಾಡುತ್ತಾ ಇದ್ದಿರಂಥಲ್ಲ ಏನು ವಿಶೇಷ

ತಿಪ್ಪ : ಸಾಹೇಬ್ರ ನಮ್ಮ ಊರಿನ ಪಂಚಾಯೀತ್ತಿ ಕಮಿಟಿನಾಗೆ  ಚೆಲ್ಲುವಮ್ಮ ಅಂತ ಒಬ್ಬಳು ಇದ್ದಾಳೆ , ಆವಮ್ಮ ನಮ್ಮ ಯೆಜಮನರ ಹಳ್ಳೆ ಫೋಟ ನೋಡಿ ಎಷ್ಟು ಚೆನ್ನಕಿದಿರಿ ನೋಡೋಕ್ಕೆ ಇವಾಗ ಏಕೆ ಹಿಂಗೆ ಅಂದಳು ಅವತ್ತಿಂದ ಶುರುವಾಯಿತು ನೋಡಿ ನಮ್ಮ ಯೆಜಮನರ ವರಸೆ , ಇ ಡಯಟ್ ಕಂಟ್ರೋಲ್ ಅನೋದು , ಹಳ್ಳೆ ಕನ್ನಡಕ ಏನು ..

ಡಿ ರಾಯರು : " ಮುಚ್ಚಲ್ಲ ಬಾಯಿ "

-----------------------

 

Q ೩. ಟೋಪಿ ಗ್ರೂಪ್ ಅವರು ನಿಮ್ಮಗೆ ಯಾವ ಟೋಪಿ ಹಾಕಿ ಪರಾರಿಯಾದರು

ಆಪ್ಷನ್ a. ಮಕ್ಮಲ್ ಟೋಪಿ  b. ರುಮಾಲ್ ಟೋಪಿ c. ಮಂಕಿ ಟೋಪಿ d. ಯಾವುದು ಇಲ್ಲ

ಡಿ ರಾಯರು : " ಮಕ್ಮಲ್ ಟೋಪಿ , ಲಾಕ್ ಮಾಡಿ ಸಿವಾ "

ಪುನಿತ್ : ಸರಿಯಾದ ಉತ್ತರ .....

ಪುನಿತ್ : ಏನ್ ರಾಯರೇ ಇದು ಮಕ್ಮಲ್ ಟೋಪಿ ಹಾಕಿಸಿಕೊಂಡು ಇದ್ದೀರಾ , ಏನು ಆಯಿತು

ಡಿ ರಾಯರು : " ಆ ಟೋಪಿ ಗ್ರೂಪ್ ನವರು ಒಬ್ಬಳು ರಂಬೆ ಅಂತ ಹುಡುಗಿನ ಮುಂದೆ ಇಟ್ಟಿಕೊಂಡು ನನ್ನ ತಲೆ ಕೆಡಿಸಿ ಒಂದಕ್ಕೆ ಎರಡರಷ್ಟು ದುಡ್ಡು ಕೊಡ್ತೀವಿ ಅಂತ ಹೇಳಿ , ಎಲ್ಲರ ಹತ್ತೀರ ದುಡ್ಡು ಇಸಿಕೊಂಡು ನನ್ನಗೆ ನಮ್ಮುರುನವರಿಗೆ ಎಲ್ಲಾ ಮಕ್ಮಲ್ ಟೋಪಿ ಹಾಕಿ ಕಾಣದಂಗೆ ಓಡಿ ಹೋಗವರೆ , ನನಗು ಏನು ಮಾಡೋದು ಅಂತ ತಿಳಿತ್ತಿಲ್ಲ  ಬುದ್ದಿ ತಿಳಿತ್ತಿಲ್ಲ "

ಪುನಿತ್ : ರಾಯರೇ ನಿಮ್ಮ ಮುಂದಿನ ಪ್ರಶ್ನೆ ನಿಮ್ಮ ಮುಂದೆ

Q ೪ : " ಮನ್ಯೆಯಾಳ ನಾಟಕ ಮಂಡಳಿ " ನಿಮ್ಮನ ಏನು ಮಾಡಿ ಹೋದರು ಎಂದು ಹೇಳುತ್ತಾರೆ ?

ಆಪ್ಷನ್ a . ಬಕರ b. ಮಂಕ c. ಪೆಂಗ d . ಏನು ಇಲ್ಲ

ಡಿ ರಾಯ : "ಆಪ್ಷನ್ a , ಕೀಲಿ ಹಾಕಿ ಸಿವಾ , ಏನೋ ಎಲ್ಲಾ ನನ್ನ ಗುಣ ಗಾನ ಮಾಡೋ ಪ್ರಯತ್ನ ಅನಿಸುತ್ತೆ "

ಪುನಿತ್ : ಸರಿಯಾದ ಉತ್ತರ ....

ಪುನಿತ್ : ಏನ್ ರಾಯರೇ ಯಾವುದಾದರು ಟಿವಿ ಶೋಗೆ ಹೋಗಿದ್ರ ಹೆಂಗೆ , ಏನು ಇದು ಬಕರ ಮಾಡಿದು ಅಂದರೆ

ತಿಪ್ಪ : ಅದು ಒಂದು ದೊಡ್ಡ ಕಥೆ ಬುದ್ದಿ , ನಮ್ಮರುನಾಗೆ ಇ ನಾಟಕ ಮಂಡಳಿ ಅವರು ಮಹಾಭಾರತ ನಾಟಕ ಆಡಿಸಿದರು , ಅದರಲ್ಲಿ ಬಲು ಪಸಂದಾಗಿ ಇದ ಹೆಣ್ಣು ಮಗಳ ಕೈ ಅಲ್ಲಿ ದೌಪದಿ ಪಾಲ್ಟು ಮಾಡಿಸಿದರು , ನಮ್ಮ ಧಣಿ ಗಳಿಗೆ ಆ ಹೆಣ್ಣು ಮಗಳ ಮೇಲೆ ಆಸೆ ಆಗಿ ನಾಟಕ ಮಂಡಳಿ ಓನರ್ ಗೆ ಹೇಳಿ ಆ ಹೆಣ್ಣು ಮಗಳನ ತೋಟದ ಮನೆಗೆ ಬರಕ್ಕೆ ಹೇಳಿದರು , ಆ ಹೆಣ್ಣು ಮಗ ತೋಟದ ಮನೆಗೆ ಬತ್ತು , ಮಧ್ಯ ರಾತ್ರಿಯಾಗೇ ನಮ್ಮ ಧಣಿಗಳು ಅಯ್ಯೋ ಕೆಟ್ಟೆ ಕೆಟ್ಟೆ ಅಂತ ಓಡಿ ಬಂದರು , ನಾನು ಏನಾಯಿತು ಅಂತ ಕೇಳಿದೆ , ನೀನೆ ಹೋಗಿ ನೋಡಲ ಅಂದರು , ನಾನು ಒಳ್ಳಗೆ ಹೋಗಿ ನೋಡ್ತಿನಿ ಆ ಹೆಣ್ಣು ಮಗ ಗಂಡು ಆಗಿಬಿಟೈತೆ , ಅಂದರೆ ದೌಪದಿ ಪಾಲ್ಟು ಮಾಡಿದಿದು ನಮ್ಮ ರಾಜಮ್ಮನ ಮಗ , ನಮ್ಮ ಧಣಿ ನಾಟಕ ಮಂಡಳಿ ಅವರಿಗೆ ಹತ್ತು ಸಾವಿರ ಕೊಟ್ಟು ಬಕರ ಆದರು ಅಷ್ಟೇಯ ಭಾಗ್ಯ

 ಪುನಿತ್ : ಏನ್ ರಾಯರೇ ನೀವು ಬ್ಯಾಂಗಲೋರ್ ಗೆ ಬಂದಿದಾಗ ಬಸ್ ನಲ್ಲಿ ಯಾವುದೊ ವಿಷಯಕೆ ಜಗಳ ಮಾಡಿಕೊಂಡು ಇದರಂತೆ , ಏನ್ ರಾಯರೇ ಅದು

ಡಿ ರಾಯರು : " ಅಂತ ವಿಶೇಷವಾದುದು ಏನು ಇಲ್ಲ ಸಾಮಿ , ಟಿಕೆಟ್ಗೆ ಸರಿಯಾದ ಚಿಲ್ಲರೆ ಕೊಟ್ಟಿಲ ಅಂತ ಕಂಡಕ್ಟರ್ ಶಾನೆ ಗಲಾಟೆ ಮಾಡಿ ಬಿಟ್ಟ ಅಷ್ಟೇಯ "

ತಿಪ್ಪ : ಉಗಿರಿ ಮಕ್ಕೆ , ಸಾಹೇಬರ ಅದು ಏನು ಆಯಿತು ಅಂದರೆ , ನಮ್ಮ ಯೆಜಮ್ಮನರ ಪಕ್ಕದಲ್ಲಿ ಒಂದು ಕಾಲೇಜ್ ಹುಡುಗಿ ಬಂದು ಕುಂತುಕೊತು , ಆ ಹುಡುಗಿ ಟಿ-ಶರ್ಟ್ ಮೇಲೆ ಏನು ಬರೆದಿತು( ಕಿಸ್ ಮಿ ಅಂತ) , ನಮ್ಮ ಯೆಜಮ್ಮನರು ಸುಮ್ಕ್ಕೆ ಇರದೇ ಏನು ಬರೆದು ಕೊಂಡು ಇದಿಅಲ್ಲ ಅದನ ಕೊಡಲೆನಮ್ಮಅಂದರು , ಅದಕ್ಕೆ ಆ ಹುಡುಗಿ ಲೇ ಮುದಿಯ ಅಂತ ತರಾಟೆ ತಗೊಂಡು ಬುಡುತು, ಅಕ್ಕ ಪಕ್ಕ ಇದ ಜನ ನಮ್ಮ ಯೆಜಮ್ಮನರಿಗೆ ಸರಿಯಾಗಿ ಇಕ್ಕಿ ಬಸ್ ಇಂದ ಹೊರಗೆ ಹಾಕಿಬಿಟ್ಟರು , ಇಷ್ಟೇ ಬುದ್ದಿ ನಡೆದಿದು

ಡಿ ರಾಯರು : " ಮುಚ್ಚಲ್ಲಾ ಬಾಯಿ "

ಪುನಿತ್: ರಾಯರೇ ನಿಮ್ಮ ಮುಂದಿನ ಪ್ರಶ್ನೆ ಇಲ್ಲಿದೆ

Q೪: ನೀವು ನಿಮ್ಮ ಊರಿನಲ್ಲಿ ಯಾವುದೊ ನ್ಯಾಯ ತೀರ್ಮಾನ ಕೊಟ್ಟಿದಕ್ಕೆ ನಿಮ್ಮ ಊರಿನ ಜನ ನಿಮ್ಮ ಮೇಲೆ ಎಸೆದು ವಸ್ತ್ತು ಯಾವುದು ?

ಆಪ್ಷನ್ a . Tomotto b . ಮೊಟ್ಟೆ c . ಚಪ್ಪಲಿ d . ಕಲ್ಲು

ಡಿ ರಾಯರು : " ಮೊಟ್ಟೆ , ಲಾಕ್ ಮಾಡಿ ಬುದ್ದಿ "

ಪುನಿತ್ : ರಾಯರೇ ನಿಮ್ಮ ಉತ್ತರ ಸರಿಯಾಗಿ ಇದೆ ....."

ಪುನಿತ್ : ಏನು ರಾಯರೇ ನ್ಯಾಯ ತೀರ್ಮಾನ ಮಾಡಿದಕ್ಕೆ ಮೊಟ್ಟೆ ಎಸೆದರ , ಯಾಕ ರಾಯರೇ ಅಂತ ತಪ್ಪು ಏನು ಮಾಡಿದಿರಿ

ಡಿ ರಾಯರು : " ನಾನು ಏನು ಮಾಡಿರಲ್ಲಿಲ ಸಿವಾ ಎಲ್ಲ ವಿರೋಧಿ ಪಾಲ್ಟಿ ಕೈವಾಡ ಅಷ್ಟೇಯ "

ತಿಪ್ಪ : ಸುಮ್ಕ್ಕೆ ಇರಿ ಧಣಿ , ಸಾರು ನಮ್ಮ ಧಣಿ ಗಳು ಕೊಟ್ಟ ನ್ಯಾಯ ಹೆಂಗೆ ಇತ್ತು ಅನೋದಕ್ಕೆ ಒಂದು ಕಥೆ ಹೇಳುತೀನಿ ಕೇಳಿ ಒಸಿ , ಒಂದು ಊರಲ್ಲಿ ಒಬ್ಬ ಆಚಾರಿ ಇದ , ಅವನ ಹೆಂಡರು ಗರ್ಭವತಿ ಆಗಿದಳು , ಆಕೆ ನೀರು ಇಡಿದು ಕೊಂಡು ಬರೋಕ್ಕೆ ಅಂತ ಕೆರೆ ತವ ಹೊಗಿದಳು , ಅವಾಗ ನಮ್ಮ ಊರಿನ ಅಗಸನ ಕತೆ ಅವಳಿಗೆ ಒದು ಬಿಡ್ತು , ಆಕೆ ಗರ್ಭ ನಾಶ ಆಗಿ ಹೋಯಿತು , ಇದರಿಂದ ಕೋಪ ಗೊಂಡ ಆಚಾರಿ ಕತೆನ ಹೊಡೆದು ಸಾಹಿಸಿಬಿಟ್ಟ , ಇಬ್ಬರು ನಮ್ಮ ಧಣಿ ಗಳ ಹತ್ತೀರ ನ್ಯಾಯ ತೀರ್ಮಾನ ಮಾಡಿ ಅಂತ ಬಂದರು , ಅದಕ್ಕೆ ನಮ್ಮ ಧಣಿಗಳು ಇ ರೀತಿ ತೀರ್ಮಾನ ಕೊಟ್ಟರು , ಅಗಸ ಆಚಾರಿಗೆ ಮಗು ಮಾಡಿಕೊಡೋದು , ಆಚಾರಿ ಅಗಸನಿಗೆ ಕತೆ ತಂದು ಕೊಡೋದು ಅಂತ , ಇಂತ ನ್ಯಾಯ ಕೊಟ್ಟರೆ ಮೊಟ್ಟೆ ಬೀಳದೆ ಇನು ಏನು ಹೇಳಿ ಬುದ್ದಿ

ಡಿ ರಾಯರು : " ಲೇ ನನ್ನ ಮಗನೆ , ಭುಜ್ಜದ ಮೇಲೆ ತಲ್ಲೇ ಇರಬೇಕ ಬೇಡವಲ್ಲ ನಿನಗೆ , ಎಷ್ಟೋ ಮಾತಾಡೋದು "

ಪುನಿತ್ : ರಾಯರೇ ನೀವು ನಿಮ್ಮ ನ್ಯಾಯ ಅದ್ಭುತ ಬಿಡಿ

ಪುನಿತ್ : ಏನ್ ರಾಯರೇ ನಿಮ್ಮದು ಲವ್ ಮ್ಯಾರೇಜ್ ಅ ಹೆಂಗೆ ?

ಡಿ ರಾಯರು : " ನಿಮ್ಮಗೂ ಇದೆ ಡೌಟ್ ಹೆಂಗೆ ಬಂತು ಸಿವಾ, ನನ್ನ ಮಗನಿಗೂ ಇದೆ ಡೌಟ್ ಬಂದಿತು "

ಪುನಿತ್: ನಿಮ್ಮ ಮಗನಿಗೆ ಇ ಡೌಟ್ ಹೆಂಗ್ ಬಂತು ರಾಯರೇ

ಡಿ ರಾಯರು : " ಏನು ಇಲ್ಲ ಆ ಬಡ್ಡಿ ಮಗನಿಗೆ ನನ್ನ ಮ್ಯಾರೇಜ್ ಕಾರ್ಡ್ ಸಿಕ್ಕಿತು ಅದನ ನೋಡಿ ಅವನಿಗೆ ಡೌಟ್ ಬಂದಿತು , ಯಾಕೆ ಅಂದರೆ ನನ್ನ ಮಗನ ಬರ್ತ್ಡೇಗು ನನ್ನ ಮ್ಯಾರೇಜ್ ಡೇಟ್ಗು ಇರೋದು ನಾಲ್ಕ್ಕೆ ತಿಂಗಳು ಗ್ಯಾಪು ಅದಕೆಯ"

:):):)

ಪುನಿತ್ : ಹುಫ್ಫ್ , ಆಟ ಮುಂದುವರಿಸೋಣ ರಾಯರೇ , ನಿಮ್ಮ ಮುಂದಿನ ಪ್ರಶ್ನೆ ಇಲ್ಲಿದೆ

Q ೬. ಈ ಗಾದೆ ಮಾತನು ಪೂರ್ಣಗೊಳಿಸಿ , " ಆಡೋರೊಂದಿಗೆ ಆಡಿ , ------------ ತಿನ್ದನಂತೆ ಬ್ರಾಹ್ಮಣ " , ನಿಮ್ಮ ಆಪ್ಷನ್  a . ಕೋಳಿ ಬಾಡು b . ಕುರಿ ಬಾಡು  c . ಚಿತ್ತ್ರನ್ನ d . ಹಳಸಿದ ಉಪ್ಪಿಟ್ಟು

ಡಿ ರಾಯರು : " ಕೋಳಿ ಬಾಡು , ಲಾಕ್ ಮಾಡಿ ಸಿವಾ "

ಪುನಿತ್: ರೈಟ್ ಆನ್ಸರ್ .... , ನಿಮ್ಮಗೆ ಇ ಗಾದೆ ಮಾತಿನ ಅನುಭವ ಆಗಿದಿಯ ರಾಯರೇ

ತಿಪ್ಪ : ಅವರನ ಏನು ಕೇಳುತ್ತಿರ ಬುದ್ದಿ , ನಾನು ಆ ಕಥೆ ಹೇಳುತೀನಿ ಕೇಳಿ , ನಮ್ಮ ಊರಿನ ಲಕ್ಷ್ಮಣ ಆಚರು ಪೂಜೆ ಪುರಸ್ಕಾರ ಅಂತ ನೆಮ್ಮದಿ ಆಗಿ ಇದರು . ದೇವಸ್ಥಾನದ ಪೂಜಾರಿ ಆಗಿದರಿಂದ ಮಡಿವಂತಿಕೆ ಇಂದ ಇದ್ದರು , ಅವರಿಗೆ ಅದೇನು ಕೆಟ್ಟ ಬುದ್ದಿ ಬಂತೋ ಗೊತ್ತಿಲ್ಲ ನಮ್ಮ ಧಣಿಗಳ ಸಹವಾಸ ಮಾಡಿದರು , ನಮ್ಮ ಧಣಿಗಳ ಮೋಡಿಗೆ ಬಿದ್ದು ಕೊನೆಗೆ ಆ ತಿಮ್ಮಪ್ಪನ ಕಂಠಿ ಹಾರನ ಕದ್ದು , ಊರವರ ಕೈಗೆ ಸಿಕ್ಕು ಮಕಕ್ಕೆ ಮಂಗಳಾರತಿ ಮಾಡಿಸಿಕೊಂಡು ಇವಾಗ ತಿರ್ಪೆ ಎತ್ತೋ ಗತಿ ತಂದು ಕೊಂಡು ಬಿಟ್ಟವರೇ , ಆ ವಯನಿಗೆ ನಮ್ಮ ಧಣಿಗಳು ನಾಟಿ ಕೋಳಿ ಆಸೆ ತೋರಿಸಿ ಇ ಕೆಲಸ ಮಾಡಿಸಿದರು , ಮಾಡಿದವರ ಪಾಪ ಆಡಿದವರ ಬಾಯಿ ಅಲ್ಲಿ ಬುಡಿ

ಡಿ ರಾಯರು : " ಲೇ ಹೈವಾನ್ ಅದ್ಮಿಕೊಂಡು ಇರಲ್ಲಾ , ಜಾಡಿಸಿ ಒದ್ದಿ ಬಿಟ್ಟೆನು "

ಪುನಿತ್ : ಏನ್ ರಾಯರೇ ನೀವು mr ಬ್ಯಾಂಗಲೋರ್ ಸ್ವಿಮ್ಮಿಂಗ್ ಸ್ಪರ್ದೆಗೆ ಭಾಗವೈಸಿದ್ರಂತೆ , ನಿಮ್ಮಗೆ ಯಾವ ಸ್ಥಾನ ಸಿಕ್ಕಿತು

ಡಿ ರಾಯರ : " ಆ ಬೊ... ಮಗನೆ ಕೇಳಿ ಹೇಳುತ್ತಾನೆ "

ತಿಪ್ಪ : ಅದರ ಕಥೆ ಯಾಕೆ ಕೇಳುತ್ತಿರ ಬುಡಿ , ನಮ್ಮ ಧಣಿಗಳು ಸ್ವಿಮ್ಮಿಂಗ್ ಸ್ಪರ್ದೆಗೆ ಅಂತ ಹೆಸರು ಕೊಟ್ಟು ಬಂದರು , ಆಮೇಲೆ ದಿನ ನಮ್ಮ ಊರಿನ ಕೆರೆಲೆ ಪ್ರಾಕ್ಟೀಸ್ಸು ಶುರು ಮಾಡಿಕೊಂಡರು , ಇವರು ಒಂದು ಕಡೆ ಈಜುತ್ತ ಇದ್ದಾರೆ , ಇನ್ನೊದು ಬದಿಗೆ ನಮ್ಮ ಊರಿನ ಎಮ್ಮೆ ಗಳೆಲ್ಲ ಈಜುತ್ತ ಇದವು. ನಮ್ಮ ಊರಿನ ಜನ ಎಲ್ಲ ಅಲ್ಲೇ ಬೆಳ್ಳಗಿನ ಕಾರ್ಯ ಕ್ರಮ ಮುಗಿಸುತ ಇದರು , ನಮ್ಮ ಧಣಿಗಳ ಮೈ ತುಂಬಾ ಗಬ್ಬು ವಾಸನೆ ಬತ್ತ ಇತ್ತು , ನಮ್ಮ ಅಮ್ಮಾವರು ನಿನ್ನ ಮಕ್ಕ ಮುಚ್ಚ , ಮುಂಡೆ ಗಂಡ ಮನೆಗೆ ಬಾ ಪರಕೆಲ್ಲಿ  ಹಾಕುತ್ತೀನಿ ಅಂತ ಹೇಳಿ ಮನೆ ಬಿಟ್ಟು ಓಡಿಸಿದರು , ಅಂತು ಸ್ಪರ್ದೆ ದಿನ ಬಂತು . ನಮ್ಮ ಧಣಿಗಳು ಪಟ್ಟ ಪಟ್ಟಿ ಚಡ್ಡಿ ಹಾಕೊಂಡು ನೀರಿಗೆ ಧುಮುಕಿದರು , ಎಲ್ಲರು ಮೂರು ರೌಂಡ್ ಪಿನಿಸು ಮಾಡಿದರೆ ನಮ್ಮ ಧಣಿಗಳು ಮಾತ್ರ ಇನ್ನು ಮೊದಲನೇ ರೌಂಡ್ ಅಲ್ಲೇ ಇದರು , ಕೊನೆಗೆ ನಮ್ಮ ಧಣಿಗಳು ಆಗಕಿಲ್ಲ ಅಂತ ಮೇಲೆ ಬರೋಕೆ ಹೋದಾಗ ಲಾಡಿ ಕಟ್ಟದೆ ಇದ ನಮ್ಮ ಧಣಿಗಳ ಚಡ್ಡಿ ಬಿಚ್ಚಿ ಹೋಯಿತು , ಏ ಥೂ , ಅಲ್ಲಿ ಇದ ಹೆಂಗಸರು ಮಕ್ಕಳು ಎಲ್ಲ ಒಂದೇ ವಾಟ ಕಿತ್ತರು , ಏನು ...

ಡಿ ರಾಯರು : " ಸಾಕು ಬಿಡಲೇ ಕುನಿ ನನ್ನ ಮಗನೆ "

:) :) :)

ಪುನಿತ್ : ರಾಯರೇ ಆಟ ಮುಂದುವರಿಸೋಣ , ನಿಮ್ಮ ಮುಂದಿನ ಪ್ರಶ್ನೆ ಇಲ್ಲಿದೆ ,

Q ೭. ನಿಮ್ಮ ಊರಿನ ಜನಕೆ ದಾಸ್ತಾನು ಸರಬರಾಜು ಮಾಡುವ ರಾಮಪ್ಪನಿಗೆ ಆದ ಶಿಕ್ಷೆ ಎಷ್ಟು ವರುಷ ?

ಆಪ್ಷನ್ a . ನಾಲ್ಕು b . ಮೂರು c . ಹತ್ತು d . ಜೀವವಾದಿ ಶಿಕ್ಷೆ

ಡಿ ರಾಯರು : " ನಾಲ್ಕು , ಲಾಕ್ ಮಾಡಿ ದೊರೆ "

ಪುನಿತ್ : ನಿಮ್ಮ ಆನ್ಸರ್ ಸರಿಯಾಗಿ ಇದೆ ...., ಯಾಕೆ ಶಿಕ್ಷೆ ಆಯಿತು ರಾಯರೇ , ರಾಮಪ್ಪ ಅಂತ ತಪ್ಪು ಏನು ಮಾಡಿದರು

ತಿಪ್ಪ : ಇಲ್ಲಿ ಕೇಳಿ ಬುದಿ , ನಂಜಪ್ಪನ ಬಸರಿಗೆ ರಾಮಪ್ಪನ ಹೆಸರು ಅನ್ನೋ ಹಾಗೆ ಇದು ಆಗಿದು , ರಾಮಪ್ಪ ನಮ್ಮ ಊರಿನ ಜನಕೆ ದಾಸ್ತಾನು ಮಾರೋ ಸೊಸೈಟಿ ಲೈಸೆನ್ಸ್ ಇದವನು , ಅವನು ಲೈಸೆನ್ಸ್ ಗೆ ತಶಿಲ್ದರ್ ಆಫೀಸ್ ಗೆ ಅಪ್ಲೈ ಮಾಡಿದಾಗ ನಮ್ಮ ಧಣಿಗಳು ಅಪ್ಲೈ ಮಾಡಿದರು , ಆದರೆ ಅದು ರಾಮಪ್ಪನಿಗೆ ಸಿಕ್ಕಿತು , ಇದು ನಮ್ಮ ಧಣಿಗಳಿಗೆ ಹೊಟ್ಟೆ ಕಿಚ್ಚು ಇತ್ತು , ದಾಸ್ತಾನು ಸರಬರಾಜು ಮಂಡಳಿ ತಲಾ ಆರ್ನುರು kg ಅಕ್ಕಿ ಜನಕೆ ಹಂಚಿ ಅಂತ ಕೊಟ್ಟಿತು , ಅದನ ತಿಳಿದ ನಮ್ಮ ಧಣಿಗಳು ನಮ್ಮ ಊರಿನ ಬಸಮ್ಮನ ಬಿಟ್ಟು ರಾಮಪ್ಪನ ತಲೆ ಕೆಡಿಸಿ ಆ ದಾಸ್ತಾನು ನಮ್ಮ ಧಣಿಗಳ ಮನೆಗೆ ಬಾರೋ ಹಾಗೆ ಮಾಡಿದರು , ಆಮೇಲೆ ಅದನ ಮಾರಿ ಆ ಬಸಮ್ಮನ ಜೊತೆ ಮಜಾ ಮಾಡಿದರು , ಇ ಕಡೆ ಆ ರಾಮಪ್ಪನ ಮೇಲೆ ತಶಿಲ್ದರ್ ತನಿಖೆಗೆ ಶಿಫರಾಸು ಮಾಡಿದರು , ಆ ರಾಮಪ್ಪ ಜೈಲ್ ಸೇರಿದ , ನಮ್ಮ ಧಣಿಗಳಿಗೆ ಸೊಸೈಟಿ ಲೈಸೆನ್ಸ್ ಅಮ್ಯಕ್ಕೆ ಸಿಕ್ಕಿತು ...

ಡಿ ರಾಯರು : " ಲೇ ಇವತು ನಿನ್ನ ಕೊನೆ ದಿನ ಕನಲ , ಬಾ ಊರಿಗೆ ಐತೆ ನಿಂಗೆ "

ಪುನಿತ್ : ರಾಯರೇ ನಿಮ್ಮ ಮಗಳಿಗೆ ಹುಷಾರು ಇಲ್ಲ ಅಂತ ಕೇಳಿದೆ , ಏನ್ ಆಗಿದೆ ಅಂತದು

ಡಿ ರಾಯರು : " ನನ್ನ ಮಗಳು ನನ್ನ ಮಾತು ಕೇಳದೆ ಯಾವನೋ ಲಾಚರ್ ನ ಮದುವೆ ಆಗಿಬಿಟ್ಟಳು , ಆ ಮುಂಡೆ ಮಗ , ಮದುವೆ ಆಗಿ ಮೂರು ತಿಂಗಳಿಗೆ ನಮ್ಮ ಆಫೀಸ್ receiption ಜೊತೆ ಓಡಿ ಹೋದ , ಈ ಶಾಕ್ ge ನನ್ನ ಮಗಳಿಗೆ ಅರೆ  ಹುಚ್ಚು ಇಡಿತು , ಇವಾಗ ನಿಮಹನ್ಸ್ ಗೆ ಸೇರಿಸಿದೇನೆ , ನಾನು ಯಾರಿಗೆ ಮೋಸ ಮಾಡಿಲ್ಲ ಆದರೆ ಆ ಸಿವಾ ನನ್ನಗೆ ಇ ಶಿಕ್ಷೆ ಕೊಟ್ಟು ಬಿಟ್ಟ , ಇಷ್ಟೇ ಅಲ್ಲ , ನನ್ನ ಒಬ್ಬ ಮಗನಿಗೆ ಕಣ್ಣು ಇಲ್ಲ , ಏನು ಮಾಡೋಕೆ ಆಗುತೆ ಎಲ್ಲ ಅವರು ಅವರು ಕೇಳಿ ಕೊಂಡು ಬಂದಿದು "

(ತಿಪ್ಪ ಒಳಗೊಳಗೇ ಈ ನನ್ನ ಮಗ ಇಷ್ಟೆಲ್ಲಾ ಮಾಡಿ ನಾನು ಯಾರಿಗೂ ಮೋಸ ಮಾಡಿಲ್ಲ ಅಂತನಲ್ಲ ಆ ಸಿವಾ ಮೆಚ್ಚನಾ , ನಮ್ಮಗೆ ಯಾಕೆ ಬಿಡಿ .)

ಪುನಿತ್ : ನಿಮ್ಮ ಮುಂದಿನ ಪ್ರಶ್ನೆ ಇಲ್ಲಿದೆ

Q ೮ . ಸರ್ಕಾರ ಅರವತ್ತು ವರುಷ ದಾಟಿದವರಿಗೆ (ಬಡವರಿಗೆ) ತಿಂಗಳಿಗೆ ಕೊಡೊ ಹಣ ಎಷ್ಟು ?

ಆಪ್ಷನ್ a . ನಾನೂರು ರೂ b . ಏನು ಇಲ್ಲ c . ಮುನೂರು ರೂ d . ಆರನೂರು ರೂ

ಡಿ ರಾಯರು : "ಏನು ಇಲ್ಲ  ಸಿವಾ ಲಾಕ್ ಮಾಡಿ "

ಪುನಿತ್ : ರಾಯರೇ ಅಂ ಸಾರೀ ನಿಮ್ಮ ಉತ್ತರ ತಪ್ಪು ಆಗಿದೆ , ಸರಿಯಾದ ಉತ್ತರ ಆಪ್ಷನ್ a , ... ನೀವು ಇಲ್ಲಿಂದ ಹತ್ತು ಸಾವಿರ ಗಳಿಸಿದಿರ

ಡಿ ರಾಯ : " ತಿಪ್ಪ ಏನ್ನೊ ಹಿಂಗೆ ಆಗಿ ಹೋಯಿತು , ನಾನು ಬೇರೆ ಆ ಬಸಮ್ಮ ನಿಗೆ ನೆಕ್ಲಸೆ ಮಾಡಿಸಿಕೊಂಡು ಬರುತ್ತೀನಿ ಅಂತ ಬೇರೆ ಹೇಳಿ ಬುಟ್ಟಿದಿನಿ , ಇವಾಗ ನೋಡಿದರೆ ಬಸ್ ಚಾರ್ಜ್ ಗು ಸಿಕ್ಕಿಲವಲ್ಲೊ , ಏನಲ್ಲ ಮಾಡೋದು , ಆ ಬಸಮ್ಮ ನಿಗೆ ಏನೋ ಹೇಳೋದು , ನಿಮ್ಮ ಜೊತೆ ಆಟ ಆಡಿ ಸಾನೆ ಖುಸಿ ಆಯಿತು ಸಿವಾ ನಾನು ಇನ್ನು ಬತ್ತಿನಿ , ನಮಸ್ಕಾರ "

                                                ಬರೆದ ಬಡಪಾಯಿ ,

                                                                     ಹರೀಶ್ ಎಸ್ ಕೆ