ಕೆಲಸವಿಲ್ಲದ ಅಭಿಯ೦ತರನ
ಕಿಮ್ಮತ್ತು ನನ್ನದು.....
ನಡುರಾತ್ರಿಯ ಈ ಭಾವನೆಯ ಉತ್ಕರ್ಷಕೆ
ಏನೆನ್ನಲೇ ಗೆಳತಿ???
ಮಾಯೆಯೋ? ಮರುಳೋ?
ಪುಟಿದೇಳುವ ಚೆ೦ಡಿನ೦ದದಿ
ನ್ಯೂಟನ್ ಕ೦ಡ ಮೂರನೇ ತಿರುಳೋ?
ಸಮಾನಾ೦ತರದಿ ಆದ
ಕೀಲಿಮಣೆಯ ಕೀಟಲೆಗೆ
ಇ೦ಬನಿತ್ತು ಸಹಕರಿಸಿದ
ನಿನ್ನ ಬಳೆಗಳು
ಗಣಕಯ೦ತ್ರದ ಆವಿಷ್ಕಾರಕ್ಕೊ೦ದು
ಗರಿಮೆಯಲ್ಲವೇ ಗೆಳತಿ????
ನೀ ಮೂಡಿಸಿದ
ತರ೦ಗಾ೦ತರಗಳಿ೦ದಲೇ,
ನಿನ್ನ ರೂಪ ವಿನ್ಯಾಸ
ಹಚ್ಚಿದ ಕಲೆಗಾರ ನಾನು......
ನನ್ನಾವ ವಿನ್ಯಾಸಕೂ
ಹೊ೦ದದ ಕಲ್ಪನೆ ನೀನು....
ಕಲ್ಪನೆಯ ಕಾರ್ಖಾನೆ
ಉತ್ಪಾದಿಸಿದ್ದೆಲ್ಲ ಕನಸಿನ ಆಕಾರ
ನಿಮಗೇ ಗೊತ್ತಲ್ಲ ನಾನೊಬ್ಬ
ಕನಸಿಗೂ ಕಡ್ಡಿ ಹಾಕಿ bending moment
ಬರೆಯಬಲ್ಲ "ಯಾ೦ತ್ರಿಕ ಅಭಿಯ೦ತರ"
-ಸಾತ್ವಿಕ್ ಹ೦ದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!